ಆ್ಯಪ್ನಗರ

ಕೈ ತಪ್ಪಿದ ಟಿಕೆಟ್‌: ಸಿಎಂ ಶವಯಾತ್ರೆ

ಇಲ್ಲಿನ ಮೀಸಲು ಕ್ಷೇತ್ರದಲ್ಲಿ ಅಸ್ಪೃಶ್ಯ ಸಮುದಾಯಕ್ಕೆ ಕಾಂಗ್ರೆಸ್‌ ಟಿಕೆಟ್‌ ಸಿಗದೇ ಇದ್ದುದರಿಂದ ಮಾದಿಗ ಮೀಸಲಾತಿ ಹೋರಾಟ ಸಮಿತಿ ಹಾಗೂ ದಲಿತ ಸಂಘಟನೆಗಳು ಪಟ್ಟಣದಲ್ಲಿ ಸೋಮವಾರ ಜಂಟಿಯಾಗಿ ಪ್ರತಿಭಟಿಸಿ ಸಿಎಂ ಸಿದ್ದರಾಮಯ್ಯ ಅವರ ಶವಯಾತ್ರೆ ಮಾಡಿ ಪ್ರತಿಕೃತಿ ದಹಿಸಿದವು.

Vijaya Karnataka Web 17 Apr 2018, 5:00 am
ಲಿಂಗಸುಗೂರು : ಇಲ್ಲಿನ ಮೀಸಲು ಕ್ಷೇತ್ರದಲ್ಲಿ ಅಸ್ಪೃಶ್ಯ ಸಮುದಾಯಕ್ಕೆ ಕಾಂಗ್ರೆಸ್‌ ಟಿಕೆಟ್‌ ಸಿಗದೇ ಇದ್ದುದರಿಂದ ಮಾದಿಗ ಮೀಸಲಾತಿ ಹೋರಾಟ ಸಮಿತಿ ಹಾಗೂ ದಲಿತ ಸಂಘಟನೆಗಳು ಪಟ್ಟಣದಲ್ಲಿ ಸೋಮವಾರ ಜಂಟಿಯಾಗಿ ಪ್ರತಿಭಟಿಸಿ ಸಿಎಂ ಸಿದ್ದರಾಮಯ್ಯ ಅವರ ಶವಯಾತ್ರೆ ಮಾಡಿ ಪ್ರತಿಕೃತಿ ದಹಿಸಿದವು.
Vijaya Karnataka Web missed ticket cm shiva yatra
ಕೈ ತಪ್ಪಿದ ಟಿಕೆಟ್‌: ಸಿಎಂ ಶವಯಾತ್ರೆ


ಕಳೆದ ಐದು ಚುನಾವಣೆಗಳಲ್ಲಿ ಕಾಂಗ್ರೆಸ್‌ ಲಿಂಗಸುಗೂರು ಕ್ಷೇತ್ರದಲ್ಲಿ ಸೋತಿದೆ. ಪರಿಶಿಷ್ಟರಲ್ಲಿ ಅಸ್ಪೃಶ್ಯ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಸುಮಾರು 40 ಸಾವಿರಕ್ಕೂ ಹೆಚ್ಚು ಮತದಾರರಿದ್ದಾರೆ. ಅಸ್ಪೃಶ್ಯರನ್ನು ಕೇವಲ ಮತಬ್ಯಾಂಕ್‌ ಆಗಿ ಉಪಯೋಗಿಸಿಕೊಳ್ಳುವ ಕಾಂಗ್ರೆಸ್‌, ದಲಿತರ ಏಳಿಗೆಗೆ ನಿರ್ಲಕ್ಷ ್ಯ ವಹಿಸುತ್ತಿದೆ. ಘೋಷಣೆ ಆದ ಪಟ್ಟಿಯನ್ನು ಮರು ಪರಿಶೀಲನೆ ಮಾಡಿ ಅಸ್ಪೃಶ್ಯ ಸಮುದಾಯದ ಅಭ್ಯರ್ಥಿಗೆ ಟಿಕೆಟ್‌ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಟೈರ್‌ಗಳಿಗೆ ಬೆಂಕಿ: ಪಟ್ಟಣದ ಶಾದಿಮಹಲ್‌ ಆವರಣದಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಹೋರಾಟಗಾರರು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಶವಯಾತ್ರೆ ನಡೆಸಿದರು. ಪ್ರಮುಖ ಬೀದಿಗಳಲ್ಲಿ ಶವಯಾತ್ರೆ ನಡೆಯಿತು. ಬಳಿಕ ಗಡಿಯಾರ ಚೌಕ್‌ನಲ್ಲಿ ಪ್ರತಿಕೃತಿ ದಹಿಸಿ ಟೈರ್‌ಗಳಿಗೆ ಬೆಂಕಿ ಹಚ್ಚುವ ಮೂಲಕ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು.

ದಸಂಸ ಮುಖಂಡರಾದ ಹನುಮಂತಪ್ಪ ಹಳ್ಳಿ, ಚಿನ್ನಪ್ಪ, ಮೌನೇಶ, ಮೋಹನ್‌, ದುರುಗಪ್ಪ, ಆಜಪ್ಪ, ಬಸವರಾಜ, ನಾಗಪ್ಪ, ಅಮರೇಶ, ವೆಂಕಟೇಶ, ತಿಪ್ಪಣ್ಣ, ದ್ಯಾಮಣ್ಣ ಸೇರಿ ನೂರಾರು ಜನ ಪ್ರತಿಭಟನೆಯಲ್ಲಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ