ಆ್ಯಪ್ನಗರ

ಮನೆ ಹಂಚಿಕೆಗೆ ಹಣ, ಕ್ರಮಕ್ಕೆ ಆಗ್ರಹ

ತಾಲೂಕಿನ ಗುಂತಗೋಳ ಗ್ರಾ.ಪಂ ವ್ಯಾಪ್ತಿಯ ಗೋನವಾಟ್ಲತಾಂಡಾದಲ್ಲಿನಾನಾ ಆಶ್ರಯ ಯೋಜನೆಯ ಮನೆಗಳ ಹಂಚಿಕೆಯಲ್ಲಿಸದಸ್ಯರು 20 ಸಾವಿರ ಹಣ ಪಡೆಯುತ್ತಿದ್ದು ಈ ಬಗ್ಗೆ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ತಾಂಡಾ ನಿವಾಸಿಗಳು ಬುಧವಾರ ತಾ.ಪಂ ಇಒಗೆ ಮನವಿ ಸಲ್ಲಿಸಿದರು.

Vijaya Karnataka 18 Sep 2019, 3:48 pm
ಲಿಂಗಸುಗೂರು : ತಾಲೂಕಿನ ಗುಂತಗೋಳ ಗ್ರಾ.ಪಂ ವ್ಯಾಪ್ತಿಯ ಗೋನವಾಟ್ಲತಾಂಡಾದಲ್ಲಿನಾನಾ ಆಶ್ರಯ ಯೋಜನೆಯ ಮನೆಗಳ ಹಂಚಿಕೆಯಲ್ಲಿಸದಸ್ಯರು 20 ಸಾವಿರ ಹಣ ಪಡೆಯುತ್ತಿದ್ದು ಈ ಬಗ್ಗೆ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ತಾಂಡಾ ನಿವಾಸಿಗಳು ಬುಧವಾರ ತಾ.ಪಂ ಇಒಗೆ ಮನವಿ ಸಲ್ಲಿಸಿದರು.
Vijaya Karnataka Web money for home sharing demand for action
ಮನೆ ಹಂಚಿಕೆಗೆ ಹಣ, ಕ್ರಮಕ್ಕೆ ಆಗ್ರಹ


ವಸತಿ ಯೋಜನೆಗಳಿಗಾಗಿ ಗ್ರಾಮ ಸಭೆ ಮೂಲಕ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಬೇಕೆಂಬ ನಿಯಮವಿದ್ದರೂ ಗ್ರಾ.ಪಂ ಸದಸ್ಯ ಆದನಗೌಡ ಅವರು ನಿಯಮ ಗಾಳಿಗೆ ತೂರಿ 20 ಸಾವಿರ ರೂ. ಹಣ ಪಡೆದು ಮನೆ ಹಂಚಿಕೆ ಮಾಡುತ್ತಿದ್ದಾರೆ. ಇದರಿಂದ ಅರ್ಹ ಫಲಾನುಭವಿಗಳಿಗೆ ಅನ್ಯಾಯವಾಗಿದೆ. ಗೋನವಾಟ್‌್ಲತಾಂಡಾದ ಸಿಸಿ ರಸ್ತೆಗಾಗಿ ಬಿಡುಗಡೆಯಾದ ಅನುದಾನವನ್ನು ಗುಂತಗೋಳ ಗ್ರಾಮದ ಅಭಿವೃದ್ಧಿಗಾಗಿ ಬಳಕೆ ಮಾಡುತ್ತಿದ್ದಾರೆ. ಕೂಡಲೇ ಮನೆ ಹಂಚಿಕೆಗಾಗಿ ಹಣ ಪಡೆದ ಆದನಗೌಡ ಅವರ ಸದಸ್ಯತ್ವದಿಂದ ಅನರ್ಹಗೊಳಿಸಬೇಕು ಹಾಗೂ ಗ್ರಾಮಸಭೆ ಮೂಲಕ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುವಂತೆ ಆಗ್ರಹಿಸಿದರು.

ತಾಂಡಾ ನಿವಾಸಿಗಳಾದ ಡಾಕಪ್ಪ ನಾಯ್ಕ, ಬೂದೆಪ್ಪ ಕಾರಬಾರಿ, ಶೇಟೆಪ್ಪ ರಾಠೋಡ್‌, ಮಂಜುನಾಥ ರಾಠೋಡ್‌, ಮೋತಿಲಾಲ್‌ ರಾಠೋಡ್‌, ಶಿವು ರಾಠೋಡ್‌, ನೀಲೇಶ ಪವಾರ್‌,ಸಂತೋಷ, ಶಂಕ್ರಪ್ಪ ಪೂಜಾರಿ, ತಿಪ್ಪಣ್ಣ ಪೂಜಾರಿ ಹಾಗೂ ಇನ್ನಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ