ಆ್ಯಪ್ನಗರ

ಸಂಖ್ಯೆಗಿಂತ ಹೆಚ್ಚು ಪ್ರವೇಶ, ಹಾಸ್ಟೆಲ್ ಭರ್ತಿ

ವಸತಿ ನಿಲಯಗಳಿಗೆ ಪ್ರವೇಶಕ್ಕೆ ಸಂಬಂಧಿಸಿ ಕಳೆದ ಸರಕಾರ ಹೊರಡಿಸಿದ್ದ ಆದೇಶದಂತೆ ಅರ್ಜಿ ಸಲ್ಲಿಸಿದ ಬಹುತೇಕರಿಗೆ ಪ್ರವೇಶ ನೀಡಿದ್ದು, ವಸತಿ ನಿಲಯಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ.

Vijaya Karnataka 18 Oct 2018, 12:00 am
ರಾಯಚೂರು: ವಸತಿ ನಿಲಯಗಳಿಗೆ ಪ್ರವೇಶಕ್ಕೆ ಸಂಬಂಧಿಸಿ ಕಳೆದ ಸರಕಾರ ಹೊರಡಿಸಿದ್ದ ಆದೇಶದಂತೆ ಅರ್ಜಿ ಸಲ್ಲಿಸಿದ ಬಹುತೇಕರಿಗೆ ಪ್ರವೇಶ ನೀಡಿದ್ದು, ವಸತಿ ನಿಲಯಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ.
Vijaya Karnataka Web more entry than the number fill the hostel
ಸಂಖ್ಯೆಗಿಂತ ಹೆಚ್ಚು ಪ್ರವೇಶ, ಹಾಸ್ಟೆಲ್ ಭರ್ತಿ


ಜಿಲ್ಲೆಯಲ್ಲಿರುವ ಸರಕಾರದ ಎಲ್ಲ ವಸತಿ ನಿಲಯಗಳಲ್ಲಿ ಮೂಲಸೌಲಭ್ಯಗಳ ಕೊರತೆ ಸಾಕಷ್ಟಿದೆ. ಶುದ್ಧ ಕುಡಿವ ನೀರು, ಶೌಚಾಲಯಗಳ ಕೊರತೆ ಇದೆ. ನಿಗದಿಗಿಂತ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಪ್ರವೇಶ ಪಡೆದಿರುವುದರಿಂದ ಎಲ್ಲರಿಗೂ ಅಡುಗೆ ತಯಾರಿಸಲು ಮತ್ತು ಒದಗಿಸಲು ಅಗತ್ಯ ಸಿಬ್ಬಂದಿಯಿಲ್ಲದಿರುವುದು ಬಹುದೊಡ್ಡ ಸಮಸ್ಯೆಯಾಗಿದೆ. ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳು ನೆಲದ ಮೇಲೆ ಇಲ್ಲವೇ ವಾಣಿಜ್ಯ ಬಳಕೆಯ ಉದ್ದೇಶದಿಂದ ನಿರ್ಮಿಸಿದ ಕಟ್ಟಡಗಳನ್ನು ಇಲಾಖೆಗಳು ಬಾಡಿಗೆ ಪಡೆಯುವುದರಿಂದ ತೀರಾ ಇಕ್ಕಟ್ಟಾದ ವಸತಿ ಪ್ರದೇಶದಲ್ಲಿ ದಿನ ಕಳೆಯುವಂತಾಗಿದೆ. ಒಂದೊಂದು ಮಂಚದ ಮೇಲೆ ಕೆಲವೆಡೆ ಮೂರರಿಂದ ನಾಲ್ವರು ವಿದ್ಯಾರ್ಥಿಗಳು ಮಲಗುತ್ತಿದ್ದಾರೆ.

ಬಯಲು ಶೌಚಕ್ಕೆ:ಬಾಡಿಗೆ ಕಟ್ಟಡಗಳಲ್ಲಿ ಅಗತ್ಯ ಸಂಖ್ಯೆಯ ಶೌಚಾಲಯಗಳಿಲ್ಲದಿರುವುದು ವಿದ್ಯಾರ್ಥಿಗಳು ಬಯಲು ಶೌಚಾಲಯಕ್ಕೆ ತೆರಳುವಂತಾಗಿದೆ. ಬಯಲಲ್ಲೇ ಸ್ನಾನ ಮಾಡುವಂಥ ಸ್ಥಿತಿಯೂ ಕೆಲವೆಡೆಯಿದೆ. ಅಡುಗೆ ತಯಾರಕರಿಗೆ 6 ರಿಂದ 8 ತಿಂಗಳ ವೇತನ ಬಾಕಿಯಿರುವುದು ಸಮಸ್ಯೆಯಾಗಿದೆ. ಇನ್ನು ಊಟಕ್ಕೆ ಸರಕಾರ ನಿಗದಿ ಮಾಡಿರುವ ತಲಾ ಅನುದಾನವು ಯಾತಕ್ಕೂ ಸಾಲುತ್ತಿಲ್ಲ ಎಂಬ ದೂರು ಇದೆ. ಅಗತ್ಯಕ್ಕಿಂತ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಪ್ರವೇಶ ಪಡೆದಿರುವುದರಿಂದ ನಿಗದಿತ ವಿದ್ಯಾರ್ಥಿಗಳಿಗೆ ಮಾತ್ರ ಅನುದಾನ ಲಭ್ಯವಾಗುತ್ತಿದ್ದು, ಇನ್ನುಳಿದವರಿಗೆ ಊಟ, ವಸತಿ ಮತ್ತಿತರ ವೆಚ್ಚಗಳನ್ನು ನಿರ್ವಹಿಸಲು ಅಧಿಕಾರಿಗಳು ಹೆಣಗಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಯಾವುದೇ ವಸತಿ ನಿಲಯವನ್ನು ಆಧುನೀಕರಣಗೊಳಿಸಿ ಎಲ್ಲ ಸೌಲಭ್ಯ ದೊರಕಿಸುವ ಪ್ರಯತ್ನಗಳು ನಡೆದಿಲ್ಲ. ಜಿಲ್ಲೆಯ ಒಟ್ಟು 39 ವಸತಿ ನಿಲಯಗಳ ನಿರ್ಮಾಣ ಕಾಮಗಾರಿ ಜಾರಿಯಲ್ಲಿದ್ದು, 24 ಕಡೆ ನಿವೇಶನ ಪಡೆಯಲು ಕಾಯಲಾಗುತ್ತಿದೆ.

...
ಜಿಲ್ಲೆಯಲ್ಲಿರುವ ಬಿಸಿಎಂ ಮತ್ತು ಎಸ್ಸಿಎಸ್ಟಿ ವಸತಿ ನಿಲಯಗಳ ಒಟ್ಟು ಸಂಖ್ಯೆ: 141

ಸ್ವಂತ ಕಟ್ಟಡದಲ್ಲಿರುವ ವಸತಿ ನಿಲಯಗಳು: 78

ಬಾಡಿಗೆ ಕಟ್ಟಡದಲ್ಲಿರುವ ಹಾಸ್ಟೆಲ್ ಗಳು: 63

ಮಂಜೂರಾಗಿರುವ ವಿದ್ಯಾರ್ಥಿಗಳ ಒಟ್ಟು ಸಂಖ್ಯೆ: 11,674

ಪ್ರವೇಶ ಪಡೆದಿರುವ ವಿದ್ಯಾರ್ಥಿಗಳ ಒಟ್ಟು ಸಂಖ್ಯೆ: 15,356

ಪ್ರವೇಶ ಪಡೆದಿರುವ ಹೆಚ್ಚುವರಿ ವಿದ್ಯಾರ್ಥಿಗಳ ಒಟ್ಟು ಸಂಖ್ಯೆ: 3,682

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ