ಆ್ಯಪ್ನಗರ

ಎಟಿಎಂಗಳಲ್ಲಿ ಎಲ್ಲೂ ಹಣವಿಲ್ಲ!

ಚುನಾವಣೆ ನೀತಿ ಸಂಹಿತೆ ಜಾರಿಯಾದ ನಂತರ ಎಟಿಎಂಗಳಲ್ಲಿ ಹಣದ ಸಮಸ್ಯೆ ಎದುರಾಗಿದೆ. ಸಾರ್ವಜನಿಕರು ತಮ್ಮದೇ ಹಣ ಪಡೆದಯಲು ಅಕ್ಷ ರಶಃ ಪರದಾಡುತ್ತಿದ್ದಾರೆ.

Vijaya Karnataka Web 10 Apr 2018, 5:00 am
ರಾಯಚೂರು ; ಚುನಾವಣೆ ನೀತಿ ಸಂಹಿತೆ ಜಾರಿಯಾದ ನಂತರ ಎಟಿಎಂಗಳಲ್ಲಿ ಹಣದ ಸಮಸ್ಯೆ ಎದುರಾಗಿದೆ. ಸಾರ್ವಜನಿಕರು ತಮ್ಮದೇ ಹಣ ಪಡೆದಯಲು ಅಕ್ಷ ರಶಃ ಪರದಾಡುತ್ತಿದ್ದಾರೆ.
Vijaya Karnataka Web no cash at atms
ಎಟಿಎಂಗಳಲ್ಲಿ ಎಲ್ಲೂ ಹಣವಿಲ್ಲ!


ಬ್ಯಾಂಕ್‌ ಖಾತೆಗಳಲ್ಲಿ ತಮ್ಮದೇ ಹಣವಿದ್ದರೂ ಸಕಾಲಕ್ಕೆ ಪಡೆದುಕೊಳ್ಳಲಾಗದಂತಹ ಸಂದಿಗ್ಧ ಪರಿಸ್ಥಿತಿ ಸಾರ್ವಜನಿಕರದ್ದಾಗಿದೆ. ಇದಕ್ಕೆಲ್ಲ ಕಾರಣ ರಾಷ್ಟ್ರೀಕೃತ ಬ್ಯಾಂಕ್‌ ಹಾಗೂ ಖಾಸಗಿ ಬ್ಯಾಂಕ್‌ ಶಾಖೆಗಳ ಎಟಿಎಂಗಳಲ್ಲಿ ಹಣವಿಲ್ಲದಿರುವುದು.

ತಮ್ಮ ಬ್ಯಾಂಕ್‌ ಖಾತೆಯಲ್ಲಿನ ನಗದು ಪಡೆಯಲು ಕೈಯಲ್ಲಿ ಎಟಿಎಂ ಕಾರ್ಡ್‌ ಹಿಡಿದುಕೊಂಡು ಒಂದು ಎಟಿಎಂ ಕೇಂದ್ರದಿಂದ ಮತ್ತೊಂದು ಎಟಿಎಂ ಕೇಂದ್ರಕ್ಕೆ ಅಲೆದಾಡಿ ಜನರು ಸುಸ್ತಾಗುತ್ತಿದ್ದಾರೆ. ಯಾವುದೇ ಎಟಿಎಂ ಕೇಂದ್ರಗಳಿಗೆ ತೆರಳಿದರೂ ನೋ ಕ್ಯಾಷ್‌, ಔಟ್‌ ಆಫ್‌ ಆರ್ಡರ್‌ ಎಂಬ ಫಲಕಗಳು ಕಣ್ಣಿಗೆ ರಾಚುತ್ತಿವೆ.

ಅಸಮಾಧಾನ: ಹಲವೆಡೆ ನಗದು ಲಭ್ಯವಿಲ್ಲದ ಕಾರಣ ಎಟಿಎಂ ಕೇಂದ್ರಗಳ ಬಾಗಿಲನ್ನೇ ಮುಚ್ಚಲಾಗಿದೆ. ಬ್ಯಾಂಕ್‌ ಶಾಖೆಗಳಿಗೆ ನೇರವಾಗಿ ಪಾಸ್‌ಬುಕ್‌ ತೆಗೆದುಕೊಂಡು ಹೋಗಿ ಹಣ ಪಡೆಯಲು ಮುಂದಾದರೂ ಅನುಕೂಲವಾಗುತ್ತಿಲ್ಲ. ತುರ್ತು ಪರಿಸ್ಥಿತಿಯಲ್ಲಿ ನಗದಿಗಾಗಿ ಅಲೆದಾಡುತ್ತಿರುವ ಸಾರ್ವಜನಿಕರು ಬ್ಯಾಂಕ್‌ ನಡೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಳೆದ ಎರಡು ತಿಂಗಳಿಂದಲೂ ಭಾರತೀಯ ರಿಸರ್ವ್‌ ಬ್ಯಾಂಕಿನಿಂದ ಹಣ ಬರುತ್ತಿಲ್ಲ. ಬ್ಯಾಂಕ್‌ಗಳಲ್ಲಿ ಖಾತೆಯುಳ್ಳ ಗ್ರಾಹಕರು ಡಿಪಾಸಿಟ್‌ ಮಾಡಿದ ಹಣವನ್ನೇ ಎಟಿಎಂ ಕೇಂದ್ರಗಳಿಗೆ ಹಾಕಲಾಗುತ್ತಿದೆ ಎಂದು ಬ್ಯಾಂಕ್‌ ಸಿಬ್ಬಂದಿ ತಿಳಿಸುತ್ತಿದ್ದಾರೆ.

ನಗರದಲ್ಲಿನ ಎಸ್‌ಬಿಐ ಶಾಖೆಗಳ ಎಟಿಎಂ ಕೇಂದ್ರಗಳಲ್ಲೂ ಹಣ ಲಭ್ಯವಿಲ್ಲ. ಸ್ಟೇಷನ್‌ ರಸ್ತೆಯಲ್ಲಿನ ನಾನಾ ಎಟಿಎಂ ಕೇಂದ್ರಗಳಲ್ಲಿಯೂ ನಗದು ಇಲ್ಲ. ಬೆಳಗ್ಗೆ ಎಟಿಎಂ ಕೇಂದ್ರಗಳಿಗೆ ಹಣ ಹಾಕಿದರೆ ಮಧ್ಯಾಹ್ನದೊತ್ತಿಗೆ ಖಾಲಿಯಾಗುತ್ತಿದೆ. ಹೀಗಾಗಿ ನಗದು ಹಣ ಪಡೆಯಲು ಜನ ಹರಸಾಹಸಪಡುವಂತಾಗಿದೆ. ಕೆಲವರು ಆಸ್ಪತ್ರೆ ಖರ್ಚು ಸೇರಿ ಇನ್ನಿತರ ತುರ್ತು ಕಾರಣಗಳಿಂದ ಆಗಮಿಸುವವರು ಎಟಿಎಂಗಳಲ್ಲಿ ಹಣ ಸಿಗದೇ ಕಂಗಾಗಲಾಗುತ್ತಿದ್ದಾರೆ. ಬ್ಯಾಂಕ್‌ ಸಿಬ್ಬಂದಿ ಜತೆ ವಾಗ್ವಾದ ಮಾಡುವುದು ಸಾಮಾನ್ಯವಾಗಿದೆ. ಚುನಾವಣೆ ನೀತಿ ಸಂಹಿತೆ ಜಾರಿಯಾದಾಗಿನಿಂದ ಲೂ ನಿರಂತರ ನಗದು ಹಣದ ಸಮಸ್ಯೆ ಉಂಟಾಗುತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ವಿರೋಧ ವ್ಯಕ್ತವಾಗಿದೆ.

----

ನಗರದ ಬಹುತೇಕ ಎಟಿಎಂ ಕೇಂದ್ರಗಳಲ್ಲಿ ಹಣ ಸಿಗುತ್ತಿಲ್ಲ. ತುರ್ತು ಪರಿಸ್ಥಿತಿಯ ಸಂದರ್ಭ ಬ್ಯಾಂಕ್‌ ಶಾಖೆಯಲ್ಲಿ ಪಾಸ್‌ಬುಕ್‌ ತೋರಿಸಿ ಹಣ ಪಡೆಯಲೂ ಸಾಧ್ಯವಾಗುತ್ತಿಲ್ಲ.

-ಶಿವಾನಂದ, ಗ್ರಾಹಕ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ