ಆ್ಯಪ್ನಗರ

'ನಿವೃತ್ತಿಯಾಗಲು ಹೇಳುವ ನೈತಿಕತೆ ಇಲ್ಲ'

ತುಂಗಭದ್ರಾ ಎಡದಂಡೆ ನಾಲೆ ವಿಚಾರದಲ್ಲಿಒಂದು ಸುಳ್ಳನ್ನು ನೂರು ಬಾರಿ ಹೇಳಿ ಸತ್ಯವೆಂಬಂತೆ ಬಿಂಬಿಸಲು ಹೊರಟಿರುವ ಮಾಜಿ ಶಾಸಕ ಹಂಪನಗೌಡ ಬಾದರ್ಲಿಗೆ, ನಾನು ರಾಜಕೀಯ ನಿವೃತ್ತಿಯಾಗುವಂತೆ ಹೇಳುವ ನೈತಿಕತೆ ಇಲ್ಲಎಂದು ಶಾಸಕ ವೆಂಕಟರಾವ್‌ ನಾಡಗೌಡ ತಿರುಗೇಟು ನೀಡಿದರು.

Vijaya Karnataka 1 Nov 2019, 3:19 pm
ಸಿಂಧನೂರು: ತುಂಗಭದ್ರಾ ಎಡದಂಡೆ ನಾಲೆ ವಿಚಾರದಲ್ಲಿಒಂದು ಸುಳ್ಳನ್ನು ನೂರು ಬಾರಿ ಹೇಳಿ ಸತ್ಯವೆಂಬಂತೆ ಬಿಂಬಿಸಲು ಹೊರಟಿರುವ ಮಾಜಿ ಶಾಸಕ ಹಂಪನಗೌಡ ಬಾದರ್ಲಿಗೆ, ನಾನು ರಾಜಕೀಯ ನಿವೃತ್ತಿಯಾಗುವಂತೆ ಹೇಳುವ ನೈತಿಕತೆ ಇಲ್ಲಎಂದು ಶಾಸಕ ವೆಂಕಟರಾವ್‌ ನಾಡಗೌಡ ತಿರುಗೇಟು ನೀಡಿದರು.
Vijaya Karnataka Web no morals to retire
'ನಿವೃತ್ತಿಯಾಗಲು ಹೇಳುವ ನೈತಿಕತೆ ಇಲ್ಲ'


ನಗರದ ಶಾಸಕರ ಕಚೇರಿಯಲ್ಲಿಗುರುವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ನಾನು ಐಸಿಸಿ ಸಲಹಾ ಸಮಿತಿ ಅಧ್ಯಕ್ಷನಾಗಿದ್ದಾಗ ಐಸಿಸಿ ಸಭೆಯಲ್ಲಿನಡೆದಿರುವ ಚರ್ಚೆ, ನಿರ್ಣಯ ಕುರಿತಂತೆ ಹಂಪನಗೌಡರು ನನಗೆ ಲವ್‌ ಲೆಟರ್‌ ಬರೆದಿದ್ದಾರೆ. ಆ ಪತ್ರದಲ್ಲಿನ ಅಂಶಗಳನ್ನು ಗಮನಿಸಿದ್ದೇನೆ. ಬಳ್ಳಾರಿಯಲ್ಲಿನಡೆದ ಉಪಚುನಾವಣೆ ಸಮಯದಲ್ಲಿಬಲದಂಡೆಗೆ ನೀರು ಹರಿಸಲಾಗಿದೆ. ಆದರೆ ಈ ನಿರ್ಧಾರ ನನ್ನದೇ ಎಂಬಂತೆ ಬಿಂಬಿಸಲಾಗಿದೆ. ಮುಖ್ಯವಾಗಿ ಆ ಸಮಯದಲ್ಲಿಕಾಂಗ್ರೆಸ್‌ನ ಡಿ.ಕೆ.ಶಿವಕುಮಾರ ಅವರು ಸಚಿವರಾಗಿದ್ದರು ಎಂಬುದನ್ನು ಬಾದರ್ಲಿ ಅರಿಯಬೇಕು. ಕಾಂಗ್ರೆಸ್‌ ಅವಧಿಯಲ್ಲಿಪ್ರತಿ ವರ್ಷವೂ ಬಲದಂಡೆಗೆ ಹೆಚ್ಚುವರಿ ನೀರು ಹರಿದು ಹೋಗಿದೆ. ದಾಖಲೆಗಳ ಸಮೇತ ಎಲ್ಲವೂ ಒದಗಿಸಲು ಸಿದ್ಧನಿದ್ದೇನೆ. ನಾನೆಂದೂ ರೈತರಿಗೆ ಮೋಸ ಮಾಡುವ ಕೆಲಸ ಮಾಡಿಲ್ಲ. ಮುಂದೆಯೂ ಮಾಡಲ್ಲ.

ಟೀಕೆ: ಈ ಹಿಂದೆ ಹಂಪನಗೌಡರು ಶಾಸಕರಾಗಿದ್ದಾಗ ಕುಡಿವ ನೀರಿಗಾಗಿಯೇ 15 ಟಿಎಂಸಿ ನೀರು ಕಾಯ್ದಿರಿಸಿದ್ದರು. ಇದರ ವಿರುದ್ಧ ನಾವು ಹೋರಾಟ ಮಾಡಿದ್ದೆವು. ನಾನು ಸಚಿವನಾಗಿದ್ದಾಗ ಕುಡಿವ ನೀರಿಗೆ 3 ಟಿಎಂಸಿ ನೀರು ಉಳಿಸಲಾಗಿತ್ತು. ಬೇಸಿಗೆ ಬೆಳೆಗೆ ನೀರು ಹರಿಸಿದ್ದರೆ, ರೈತರು ಒಂದು ಬೆಳೆಯೂ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಇವರು ರೈತರು ನೀರಿಗಾಗಿ ಹೋರಾಡಿದಾಗ ಅಮೆರಿಕಾದಲ್ಲಿಇದ್ದರು. ಐಸಿಸಿ ಸಭೆಗೆ ಹೋಗದೆ ಸಚಿವ ತನ್ವೀರ್‌ಸೇಠ್‌ನ್ನು ಸಿಂಧನೂರಿನಲ್ಲಿಮೆರವಣಿಗೆ ಮಾಡಿದರು. ಜನ ಕಷ್ಟದಲ್ಲಿದಾಗ ಸಿಂಧನೂರು ಹಬ್ಬ ಮಾಡಿದರು ಎಂದರು.

ಉತ್ತರಿಸುವೆ:ಚುನಾವಣೆಯಲ್ಲಿಸೋತು ಮನೆಯಲ್ಲಿಖಾಲಿ ಕೂರದೆ ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಬಲದಂಡೆಗೆ ಹರಿದು ಹೋಗಿರುವ 3.8 ಟಿಎಂಸಿ ನೀರು ಪುನಃ ಪಡೆಯುವಂತೆ ಹೇಳುತ್ತಿದ್ದಾರೆ. ಇವರಿಗೆ ಬುದ್ಧಿ ಇಲ್ಲ. ಮೇ ತಿಂಗಳಲ್ಲಿಪ್ರತಿ ವರ್ಷದ ವಾಟರ್‌ ಇಯರ್‌ ಮುಗಿಯುತ್ತದೆ ಎಂಬುದನ್ನು ತಿಳಿಯಬೇಕು. ಬಾದರ್ಲಿಯವರು ತಮ್ಮ ಆತ್ಮಸಾಕ್ಷಿಗೆ ವಿರುದ್ಧವಾಗಿ ಹೇಳಿಕೆ ಕೊಡುತ್ತಿದ್ದಾರೆ. ಅವರ ಪತ್ರಕ್ಕೆ ಸೂಕ್ತ ಉತ್ತರ ನೀಡುವೆ ಎಂದರು.

ನಗರಸಭೆ ಸದಸ್ಯ ಜಿಲಾನಿಪಾಷಾ, ಮುಖಂಡರಾದ ಧರ್ಮನಗೌಡ, ಜಿ.ಸತ್ಯನಾರಾಯಣ, ಎಂ.ಡಿ.ನದೀಮುಲ್ಲಾ, ದೇವೇಂದ್ರಗೌಡ ಸೇರಿ ಹಲವರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ