ಆ್ಯಪ್ನಗರ

ಖಜಾನೆಗೆ ಹಣ ಜಮೆಮಾಡಲು ಪಿಡಿಒಗೆ ನೋಟಿಸ್‌

ಗಬ್ಬೂರು ಗ್ರಾಮ ಪಂಚಾಯಿತಿಯಲ್ಲಿ ನರೇಗಾ ಯೋಜನೆಯಡಿ ನಡೆದ ಭ್ರಷ್ಟಾಚಾರ, ತನಿಖಾ ವರದಿಯಲ್ಲಿ ಸಾಬೀತಾಗಿರುವ ಹಿನ್ನೆಲೆಯಲ್ಲಿ ತಾಲೂಕು ಪಂಚಾಯಿತಿ ಇಒ, ಗಬ್ಬೂರು ಗ್ರಾ.ಪಂ. ಪಿಡಿಒ ರೇಣುಕಮ್ಮ ಅವರಿಗೆ ನೋಟಿಸ್‌ ಜಾರಿಗೊಳಿಸಿದ್ದು, ದುರ್ಬಳಕೆ ಮಾಡಿಕೊಂಡಿರುವ ಹಣವನ್ನು ಸರಕಾರದ ಖಜಾನೆಗೆ ಜಮೆಮಾಡುವಂತೆ ಸೂಚಿಸಿದ್ದಾರೆ.

Vijaya Karnataka 21 Sep 2018, 5:00 am
ದೇವದುರ್ಗ : ಗಬ್ಬೂರು ಗ್ರಾಮ ಪಂಚಾಯಿತಿಯಲ್ಲಿ ನರೇಗಾ ಯೋಜನೆಯಡಿ ನಡೆದ ಭ್ರಷ್ಟಾಚಾರ, ತನಿಖಾ ವರದಿಯಲ್ಲಿ ಸಾಬೀತಾಗಿರುವ ಹಿನ್ನೆಲೆಯಲ್ಲಿ ತಾಲೂಕು ಪಂಚಾಯಿತಿ ಇಒ, ಗಬ್ಬೂರು ಗ್ರಾ.ಪಂ. ಪಿಡಿಒ ರೇಣುಕಮ್ಮ ಅವರಿಗೆ ನೋಟಿಸ್‌ ಜಾರಿಗೊಳಿಸಿದ್ದು, ದುರ್ಬಳಕೆ ಮಾಡಿಕೊಂಡಿರುವ ಹಣವನ್ನು ಸರಕಾರದ ಖಜಾನೆಗೆ ಜಮೆಮಾಡುವಂತೆ ಸೂಚಿಸಿದ್ದಾರೆ.
Vijaya Karnataka Web RAC-RCH20DEO03


ಗಬ್ಬೂರು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ, 2016ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮದ ವೀರಭದ್ರಶ್ವೇರ ದೇವಸ್ಥಾನ ಸುತ್ತ ಹವಾಮಾನಕ್ಕೆ ತಕ್ಕ ರಸ್ತೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿತ್ತು. 2016, ಜ.18ರಿಂದ 2016, ಜ.28ರ ವರೆಗೆ ಕಾಮಗಾರಿ ನಿರ್ವಹಿಸಲಾಯಿತು. 2014, ಜ.15ರಂದೇ ಮೃತ್ತಪಟ್ಟಿರುವ, ಗ್ರಾಮದ ಶಾಂತಮೂರ್ತಿ ಅವರು, ಈ ಕಾಮಗಾರಿಯಲ್ಲಿ 11 ದಿನ ಕೂಲಿ ಕೆಲಸ ಮಾಡಿದ್ದಾರೆ ಎಂದು ನಕಲಿ ದಾಖಲಾತಿ, ಹಾಜರಾತಿ ಸೃಷ್ಟಿಸಿ ಅವರ ಖಾತೆಗೆ ದಿನದ ಕೂಲಿ 204 ರೂ. ಆಧರಿಸಿ, ಒಟ್ಟು 11 ದಿನಗಳ 2244 ರೂ. ಜಮೆಮಾಡಲಾಗಿದೆ.

ದುರ್ಬಳಕೆ ಮಾಡಿಕೊಂಡ ಹಣವನ್ನು ಖಜಾನೆಗೆ ಜಮಾಮಾಡಲು ವಿಫಲರಾದರೆ, ಗಬ್ಬೂರು ಪಿಡಿಒ ರೇಣುಕಮ್ಮ ಅವರ ವಿರುದ್ಧ ಏಕಪಕ್ಷೀಯವಾಗಿ ನಿರ್ಣಯಿಸಿ ಸೂಕ್ತ ಕ್ರಮ ಕೈಗೊಳ್ಳುವದಾಗಿ ಇಒ ಖಡಕ್‌ ಎಚ್ಚರಿಕೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ