ಆ್ಯಪ್ನಗರ

ಕುಖ್ಯಾತ ರೌಡಿಶೀಟರ್ ಬಂಧನ

ನಗರದ ಪಿಂಜಾರವಾಡಿಯ ಕುಖ್ಯಾತ ರೌಡಿ ಶೀಟರ್ ಒಬ್ಬನನ್ನು ಪೊಲೀಸರು ಗೂಂಡಾ ಕಾಯಿದೆ ಅಡಿ, ಸೆ.20ರಂದು ಬಂಧಿಸಿದ್ದಾರೆ.

ವಿಕ ಸುದ್ದಿಲೋಕ 22 Sep 2016, 8:08 pm
ರಾಯಚೂರು: ನಗರದ ಪಿಂಜಾರವಾಡಿಯ ಕುಖ್ಯಾತ ರೌಡಿ ಶೀಟರ್ ಒಬ್ಬನನ್ನು ಪೊಲೀಸರು ಗೂಂಡಾ ಕಾಯಿದೆ ಅಡಿ, ಸೆ.20ರಂದು ಬಂಧಿಸಿದ್ದಾರೆ.
Vijaya Karnataka Web notorious raudisitar detention
ಕುಖ್ಯಾತ ರೌಡಿಶೀಟರ್ ಬಂಧನ


ಶೇಖ್ ಸೈಫ್ ಅಲಿ (20) ಬಂಧಿತ. ಕಳ್ಳತನ, ಸಾರ್ವಜನಿಕರೊಂದಿಗೆ ಅಸಭ್ಯ ವರ್ತನೆ, ಮಾರಕಾಸ್ತ್ರಗಳಿಂದ ಬೆದರಿಕೆಯೊಡ್ಡುವುದು, ಗೂಂಡಾಗಿರಿ ವರ್ತನೆ ಪ್ರದರ್ಶಿಸುತ್ತಿದ್ದ ಎಂದು ಈತನ ವಿರುದ್ಧ ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಆರು ಪ್ರಕರಣಗಳು ದಾಖಲಾಗಿದ್ದವು.

ಶಾಂತಿಗೆ ಭಂಗ ಉಂಟು ಮಾಡುವ ಆರೋಪ ಹಿನ್ನೆಲೆಯಲ್ಲಿ ಈತನ ವಿರುದ್ಧ ಗೂಂಡಾ ಕಾಯಿದೆ ಅಡಿ ಕ್ರಮ ಜರುಗಿಸುವಂತೆ ಡಿಸಿ ಸಸಿಕಾಂತ್ ಸೆಂಥಿಲ್ ಅವರು ಪೊಲೀಸ್ ಇಲಾಖೆಗೆ ಸೂಚಿಸಿದ್ದರು. ಸೂಚನೆ ಆಧರಿಸಿ, ಶೇಖ್ ಸೈಫ್ ಅಲಿಯನ್ನು ಬಂಧಿಸಿ ಕಾರಾಗೃಹಕ್ಕೆ ಕಳಿಸಲಾಗಿದೆ ಎಂದು ಪೊಲೀಸ್ ಇಲಾಖೆ ಮೂಲಗಳು ತಿಳಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ