ಆ್ಯಪ್ನಗರ

ತುಂಬಿ ಹರಿದ ಹಳ್ಳ, ಕಾದು ಸುಸ್ತಾದ ಜನ

ಸಮೀಪದ ಗುಡದನಾಳ ಗ್ರಾಮದ ಬಳಿ ಹರಿಯುವ ಹಳ್ಳ ಏಕಾಏಕಿ ಶನಿವಾರ ಸಂಜೆ ತುಂಬಿ ಬಂದಿದ್ದರಿಂದ ಬೆಳಗ್ಗೆ ಹೊಲಗಳಿಗೆ ತೆರಳಿದ್ದ ರೈತರು, ಪಟ್ಟಣಕ್ಕೆ ಬಂದಿದ್ದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಗುಡದನಾಳ ಗ್ರಾಮಕ್ಕೆ ತೆರಳಲು ರಾತ್ರಿವರೆಗೆ ಕಾಯಬೇಕಾದ ಸ್ಥಿತಿಯನ್ನು ಎದುರಿಸಿದರು.

Vijaya Karnataka 21 Oct 2019, 3:39 pm
ಹಟ್ಟಿಚಿನ್ನದಗಣಿ : ಸಮೀಪದ ಗುಡದನಾಳ ಗ್ರಾಮದ ಬಳಿ ಹರಿಯುವ ಹಳ್ಳ ಏಕಾಏಕಿ ಶನಿವಾರ ಸಂಜೆ ತುಂಬಿ ಬಂದಿದ್ದರಿಂದ ಬೆಳಗ್ಗೆ ಹೊಲಗಳಿಗೆ ತೆರಳಿದ್ದ ರೈತರು, ಪಟ್ಟಣಕ್ಕೆ ಬಂದಿದ್ದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಗುಡದನಾಳ ಗ್ರಾಮಕ್ಕೆ ತೆರಳಲು ರಾತ್ರಿವರೆಗೆ ಕಾಯಬೇಕಾದ ಸ್ಥಿತಿಯನ್ನು ಎದುರಿಸಿದರು.
Vijaya Karnataka Web overflowing village watchful people
ತುಂಬಿ ಹರಿದ ಹಳ್ಳ, ಕಾದು ಸುಸ್ತಾದ ಜನ


ಗುಡದನಾಳ ಗ್ರಾಮದ ಮುಂದೆ ಹರಿಯುವ ಹಳ್ಳಕ್ಕೆ ನಾಗಲಾಪುರ, ಮಸ್ಕಿ, ಸಂತೆಕಲ್ಲೂರ, ಸರ್ಜಾಪುರ, ಕುಪ್ಪಿಗುಡ್ಡ ಕಡೆ ಮಳೆಯಾದರೆ ಗುಡದನಾಳ ಹಳ್ಳ ತುಂಬಿ ಹರಿಯುತ್ತದೆ. ಶನಿವಾರ ಗುಡದನಾಳ ಸುತ್ತಮುತ್ತ ಮಳೆ ಸುರಿದಿಲ್ಲ. ಆದರೆ ಮಸ್ಕಿ ಹಾಗೂ ಮುದಗಲ್‌ ಭಾಗದಲ್ಲಿಬೆಳಗ್ಗೆ ಮಳೆ ಸುರಿದ ಪರಿಣಾಮ ಸಂಜೆ ವೇಳೆಗೆ ಹಳ್ಳ ತುಂಬಿಬಂದಿತು. ಇದರಿಂದ ಜನರು ತೊಂದರೆ ಅನುಭವಿಸುವಂತಾಯಿತು. ನಾಲ್ಕೆತ್ರೖದು ತಾಸು ಕಾದು ಹಳ್ಳದ ನೀರು ತಗ್ಗಿದ ನಂತರ ಗ್ರಾಮಕ್ಕೆ ತೆರಳುವಂತಾಯಿತು.

ಒತ್ತಾಯ: ಮಳೆಗಾಲದಲ್ಲಿಮೇಲಿಂದ ಮೇಲೆ ಹಳ್ಳ ತುಂಬಿ ಹರಿದು ಈ ಮಾರ್ಗವಾಗಿ ಓಡಾಡಲು ತೀವ್ರ ತೊಂದರೆ ಉಂಟಾಗುತ್ತಿದೆ. ಈ ಹಳ್ಳಕ್ಕೆ ಎತ್ತರದ ಸೇತುವೆ ನಿರ್ಮಾಣ ಮಾಡಿ ಪ್ರಯಾಣಿಕರಿಗೆ, ವಾಹನ ಸವಾರರಿಗೆ ಮತ್ತು ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಬೇಕೆಂದು ಗ್ರಾಮದ ಅಮರೇಶ ಉಪ್ಪಲದಿನ್ನಿ, ಕೂಲಿಕಾರರ ಸಂಘದ ಅಧ್ಯಕ್ಷ ಮಲ್ಲೇಶ ಮ್ಯಾಗೇರಿ ಸೇರಿದಂತೆ ಪ್ರಯಾಣಿಕರು ಸಂಬಂದಿಸಿದ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಒತ್ತಾಯಿಸಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ