ಆ್ಯಪ್ನಗರ

ಉದ್ಯಾನವನ ತಡೆಗೋಡೆ ತೆರವು: ಹಣ ವ್ಯಯಕ್ಕೆ ದಾರಿ

ಹಲವು ವಿರೋಧದ ನಡುವೆಯೂ ನಗರದ ಟಿಪ್ಪು ಸುಲ್ತಾನ್‌ ಉದ್ಯಾನದ ಮುಂಭಾಗದಲ್ಲಿ ತಡೆಗೋಡೆ ನಿರ್ಮಿಸಿ ಕಬ್ಬಿಣದ ಕಂಬಿ ಹಾಕಿತ್ತು. ಆದರೆ ಇದೀಗ ಪ್ರತಿಭಟನಾಕಾರರ ಒತ್ತಾಯದ ಮೇರೆಗೆ ಪುನಃ ತಡೆಗೋಡೆಯನ್ನು ಸೋಮವಾರ ತೆರವುಗೊಳಿಸುವ ಮೂಲಕ ಜಿಲ್ಲಾಡಳಿತ ಮತ್ತು ನಗರಸಭೆ ಹಣ ವ್ಯಯಕ್ಕೆ ದಾರಿ ಮಾಡಿದೆ ಎಂಬ ಆರೋಪ ಕೇಳಿ ಬಂದಿವೆ.

Vijaya Karnataka 10 Jul 2018, 5:00 am
ರಾಯಚೂರು ; ಹಲವು ವಿರೋಧದ ನಡುವೆಯೂ ನಗರದ ಟಿಪ್ಪು ಸುಲ್ತಾನ್‌ ಉದ್ಯಾನದ ಮುಂಭಾಗದಲ್ಲಿ ತಡೆಗೋಡೆ ನಿರ್ಮಿಸಿ ಕಬ್ಬಿಣದ ಕಂಬಿ ಹಾಕಿತ್ತು. ಆದರೆ ಇದೀಗ ಪ್ರತಿಭಟನಾಕಾರರ ಒತ್ತಾಯದ ಮೇರೆಗೆ ಪುನಃ ತಡೆಗೋಡೆಯನ್ನು ಸೋಮವಾರ ತೆರವುಗೊಳಿಸುವ ಮೂಲಕ ಜಿಲ್ಲಾಡಳಿತ ಮತ್ತು ನಗರಸಭೆ ಹಣ ವ್ಯಯಕ್ಕೆ ದಾರಿ ಮಾಡಿದೆ ಎಂಬ ಆರೋಪ ಕೇಳಿ ಬಂದಿವೆ.
Vijaya Karnataka Web RAC-RCH09HD01


ಕಳೆದ ಒಂದು ವರ್ಷದ ಹಿಂದೆಯಷ್ಟೇ ಟಿಪ್ಪು ಸುಲ್ತಾನ್‌ ಉದ್ಯಾನದಲ್ಲಿ ಧ್ವನಿವರ್ಧಕಗಳನ್ನಿರಿಸಿ ಪ್ರತಿಭಟಿಸುವ ಕಾರಣ ಹತ್ತಿರದಲ್ಲೇ ಇರುವ ಜಿಲ್ಲಾಡಳಿತ, ಜಿ.ಪಂ. ಸೇರಿದಂತೆ ಅನೇಕ ಕಚೇರಿಗಳಲ್ಲಿನ ಅಧಿಕಾರಿಗಳ ಕಾರ್ಯಕ್ಷ ಮತೆಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ತಡೆಗೋಡೆ ನಿರ್ಮಿಸಿ 5 ರಿಂದ 6ಅಡಿವರೆಗೆ ಕಬ್ಬಿಣದ ಸರಳುಗಳನ್ನು ಅಳವಡಿಸಲಾಗಿತ್ತು. ಅದಾದ ನಂತರ ಅನೇಕ ಸಂಘ ಸಂಸ್ಥೆಗಳ ಪ್ರತಿಭಟನಾಕಾರರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ, ಪ್ರತಿಭಟನೆ ನಡೆಸಲು ಲಭ್ಯವಿರುವ ಏಕೈಕ ಸ್ಥಳವಾದ ಟಿಪ್ಪು ಸುಲ್ತಾನ್‌ ಉದ್ಯಾನದಲ್ಲಿ ನಿರ್ಮಿಸಿದ ತಡೆಗೋಡೆ ತೆರವುಗೊಳಿಸಿ ಪ್ರತಿಭಟನಾಕಾರರಿಗೆ ಪ್ರತಿಭಟಿಸಲು ಸೂಕ್ತ ವ್ಯವಸ್ಥೆ ನಿರ್ಮಿಸಿಕೊಡಬೇಕು ಎಂದು ಮನವಿ ಮಾಡಿದ್ದರು. ಇದೀಗ ಟಿಯುಸಿಐ ನೇತೃತ್ವದ ತುಂಗಭದ್ರಾ ನೀರಾವರಿ ವಲಯ ಹಂಗಾಮಿ ಕಾರ್ಮಿಕರ ಸಂಘದ ಪದಾಧಿಕಾರಿಗಳು ಪುನಃ ತಡೆಗೋಡೆ ತೆರವುಗೊಳಿಸಿ ಇಲ್ಲವೇ ಸಾವಿರಕ್ಕೂ ಹೆಚ್ಚು ಜನ ಸೇರುವ ಪ್ರತಿಭಟನೆಗೆ ಬೇರೊಂದು ಜಾಗ ಗುರುತಿಸಿಕೊಡಿ ಎಂದು ಮನವಿ ಮಾಡಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮತ್ತು ನಗರಸಭೆ ತಡೆಗೋಡೆ ತೆರವುಗೊಳಿಸುವ ಮೂಲಕ ಪ್ರತಿಭಟನಾಕಾರರ ಆಶಯಕ್ಕೆ ಸ್ಪಂದಿಸಿದೆ.

ಅಲ್ಲದೇ ತಡೆಗೋಡೆ ನಿರ್ಮಿಸಿ ಪುನಃ ಅದನ್ನು ತೆರವುಗೊಳಿಸಿರುವುದು ಹೆಚ್ಚಿನ ಹಣ ಪೋಲಿಗೆ ಕಾರಣವಾಗಿದೆ ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿವೆ.

ತುಂಗಭದ್ರಾ ನೀರಾವರಿ ವಲಯ ಹಂಗಾಮಿ ಕಾರ್ಮಿಕರ ಸಂಘದ ಪದಾಧಿಕಾರಿಗಳು ಜು.10 ರಿಂದ ಗುತ್ತಿಗೆ ತೀರ್ಮಾನ ಹಿಂಪಡೆಯುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದು, ತಡೆಗೋಡೆ ತೆರವುಗೊಳಿಸಿ ಅಥವಾ ಬೇರೆಡೆಗೆ ಪ್ರತಿಭಟಿಸಲು ಸ್ಥಳಾವಕಾಶ ಮಾಡಿಕೊಡಲು ಮನವಿ ಮಾಡಿದ ಹಿನ್ನೆಲೆಯಲ್ಲಿ ಬೆಳಗ್ಗೆ ಜೆಸಿಬಿಯಿಂದ ತಡೆಗೋಡೆ ತೆರವುಗೊಳಿಸಲಾಯಿತು. ಈ ಸಂದರ್ಭದಲ್ಲಿ ಟಿಯುಸಿಐ ರಾಜ್ಯಾಧ್ಯಕ್ಷ ಆರ್‌.ಮಾನಸಯ್ಯ, ನಗರಸಭೆ ಪೌರಾಯುಕ್ತ ರಮೇಶ ನಾಯ್ಕ್‌ ಸೇರಿದಂತೆ ಕಿರಿಯ ಅಧಿಕಾರಿಗಳು, ಸಂಘಟನೆ ಪದಾಧಿಕಾರಿಗಳಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ