ಆ್ಯಪ್ನಗರ

ಜನರ ತೀರ್ಮಾನಕ್ಕೆ ಬದ್ಧ: ಮಸ್ಕಿ ಶಾಸಕ

ತಮ್ಮ ರಾಜೀನಾಮೆ ಬಗ್ಗೆ ಮಾಧ್ಯಮಗಳಲ್ಲಿ ನಾನಾ ರೀತಿಯ ಊಹಾಪೋಹದ ವರದಿಗಳು ಪ್ರಸಾರವಾಗುತ್ತಿದ್ದು, ಅವುಗಳಲ್ಲಿ ಹುರುಳಿಲ್ಲ. ಮಸ್ಕಿ ಕ್ಷೇತ್ರದ ಜನತೆಯ ತೀರ್ಮಾನಕ್ಕೆ ತಾವು ಬದ್ಧ ಎಂದು ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ್ ಹೇಳಿದರು.

Vijaya Karnataka 6 Jul 2019, 12:00 am
ರಾಯಚೂರು: ತಮ್ಮ ರಾಜೀನಾಮೆ ಬಗ್ಗೆ ಮಾಧ್ಯಮಗಳಲ್ಲಿ ನಾನಾ ರೀತಿಯ ಊಹಾಪೋಹದ ವರದಿಗಳು ಪ್ರಸಾರವಾಗುತ್ತಿದ್ದು, ಅವುಗಳಲ್ಲಿ ಹುರುಳಿಲ್ಲ. ಮಸ್ಕಿ ಕ್ಷೇತ್ರದ ಜನತೆಯ ತೀರ್ಮಾನಕ್ಕೆ ತಾವು ಬದ್ಧ ಎಂದು ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ್ ಹೇಳಿದರು.
Vijaya Karnataka Web people who are committed to the conclusion that maski mla
ಜನರ ತೀರ್ಮಾನಕ್ಕೆ ಬದ್ಧ: ಮಸ್ಕಿ ಶಾಸಕ


ಯರಮರಸ್ ಅತಿಥಿ ಗೃಹದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ‘‘ರಮೇಶ ಜಾರಕಿಹೊಳಿ ಅವರು ನಮ್ಮ ಸಂಬಂಧಿಕರು. ಅವರೊಂದಿಗೆ ಉತ್ತಮ ಬಾಂಧವ್ಯವಿದೆ. ಆದರೆ, ಅದನ್ನೇ ತಪ್ಪಾಗಿ ಮಾಧ್ಯಮಗಳಲ್ಲಿ ವರದಿ ಮಾಡಲಾಗುತ್ತಿದೆ. ಜಾರಕಿಹೊಳಿ ಅವರು ಪಕ್ಷ ತೊರೆದರೂ ನಾನು ಪಕ್ಷ ಬಿಡುವುದಿಲ್ಲ’’ ಎಂದರು.

‘‘ರಾಜ್ಯದ ಸಮ್ಮಿಶ್ರ ಸರಕಾರದಲ್ಲಿ ಸಮನ್ವಯತೆಯ ಕೊರತೆಯಿದೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಸಮನ್ವಯ ಇಲ್ಲದಿದ್ದರೆ ಸರಕಾರದಲ್ಲಿ ಇರುವ ಜರೂರತ್ತಿಲ್ಲ. ಹಿರಿಯ ನಾಯಕರು ಸಮನ್ವಯ ಸಾಧಿಸಲು ಪ್ರಯತ್ನಿಸಬೇಕು’’ ಎಂದು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ