ಆ್ಯಪ್ನಗರ

ರಾಜಕೀಯ ದ್ವೇಷ: ಮಾವಿನ ಮರ ನಾಶ

ಚುನಾವಣೆ ರಾಜಕೀಯ ದ್ವೇಷ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರೊಬ್ಬರ ತೋಟದಲ್ಲಿ ಬೆಳೆದಿದ್ದ ಮಾವಿನ ಮರಗಳನ್ನು ಗ್ರಾ.ಪಂ. ಸದಸ್ಯರೊಬ್ಬರು ಕಡಿದು ನಾಶಗೊಳಿಸಿದ್ದಾರೆ.

Vijaya Karnataka 15 May 2018, 12:00 am
ರಾಯಚೂರು: ಚುನಾವಣೆ ರಾಜಕೀಯ ದ್ವೇಷ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರೊಬ್ಬರ ತೋಟದಲ್ಲಿ ಬೆಳೆದಿದ್ದ ಮಾವಿನ ಮರಗಳನ್ನು ಗ್ರಾ.ಪಂ. ಸದಸ್ಯರೊಬ್ಬರು ಕಡಿದು ನಾಶಗೊಳಿಸಿದ್ದಾರೆ.
Vijaya Karnataka Web political hatred destruction of mango tree
ರಾಜಕೀಯ ದ್ವೇಷ: ಮಾವಿನ ಮರ ನಾಶ


ತಾಲೂಕಿನ ಉಂಡ್ರಾಳದೊಡ್ಡಿಯ ಕಾಂಗ್ರೆಸ್ ಕಾರ್ಯಕರ್ತ ರಂಗನಾಥ್ ಅವರಿಗೆ ಸೇರಿದ ತೋಟದಲ್ಲಿ 600ಕ್ಕೂ ಹೆಚ್ಚು ಮರಗಳನ್ನು ಬೆಳೆಸಲಾಗಿತ್ತು. ಈಚೆಗೆ ನಡೆದ ಚುನಾವಣೆಯಲ್ಲಿನ ದ್ವೇಷ ನೆಪವೊಡ್ಡಿದ ಎಲ್.ಕೆ.ದೊಡ್ಡಿ ಗ್ರಾ.ಪಂ. ಸದಸ್ಯ ಕರಿಯಪ್ಪ ಮತ್ತಿತರರು, ಭಾನುವಾರ ರಾತ್ರಿ ತೋಟದ ಮೇಲೆ ದಾಳಿಮಾಡಿ ಲಕ್ಷಾಂತರ ರೂಪಾಯಿ ಮೌಲ್ಯದ ಮರಗಳನ್ನು ಕಡಿದು ನಾಶಗೊಳಿಸಿದ್ದಾರೆ ಎಂಬ ದೂರು ಆಧರಿಸಿ, ಯರಗೇರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ