ಆ್ಯಪ್ನಗರ

ವಿದ್ಯುತ್ ಬೇಡಿಕೆ ಕುಸಿತ: 5 ಘಟಕ ಸ್ಥಗಿತ

ರಾಜ್ಯದ ನಾನಾ ಕಡೆ ಧಾರಾಕಾರ ಮಳೆಯಾಗುತ್ತಿರುವುದರಿಂದ ವಿದ್ಯುತ್ ಬೇಡಿಕೆ ಗಣನೀಯ ಕುಸಿತ ಕಂಡಿದ್ದು, ಶಕ್ತಿನಗರದ ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರ (ಆರ್‌ಟಿಪಿಎಸ್)ದ ಐದು ಘಟಕಗಳು ಸ್ಥಗಿತಗೊಂಡಿವೆ.

Vijaya Karnataka 10 Jul 2018, 12:00 am
ರಾಯಚೂರು: ರಾಜ್ಯದ ನಾನಾ ಕಡೆ ಧಾರಾಕಾರ ಮಳೆಯಾಗುತ್ತಿರುವುದರಿಂದ ವಿದ್ಯುತ್ ಬೇಡಿಕೆ ಗಣನೀಯ ಕುಸಿತ ಕಂಡಿದ್ದು, ಶಕ್ತಿನಗರದ ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರ (ಆರ್‌ಟಿಪಿಎಸ್)ದ ಐದು ಘಟಕಗಳು ಸ್ಥಗಿತಗೊಂಡಿವೆ.
Vijaya Karnataka Web power demand declines 5 unit breakdown
ವಿದ್ಯುತ್ ಬೇಡಿಕೆ ಕುಸಿತ: 5 ಘಟಕ ಸ್ಥಗಿತ


ಕೇಂದ್ರದ 1, 4 ಮತ್ತು 5ನೇ ಘಟಕಗಳಲ್ಲಿ ಮಾತ್ರ ವಿದ್ಯುತ್ ಉತ್ಪಾದಿಸುತ್ತಿದೆ. ಈ ಘಟಕಗಳಿಂದ 450 ಮೆಗಾ ವ್ಯಾಟ್ ವಿದ್ಯುತ್ ರಾಜ್ಯದ ಜಾಲ ಸೇರುತ್ತಿದೆ. ಸೋಮವಾರ, ರಾಜ್ಯದ ವಿದ್ಯುತ್ ಬೇಡಿಕೆ 6669 ಮೆಗಾ ವ್ಯಾಟ್ ದಾಖಲಾಗಿತ್ತು. ಪವನ ವಿದ್ಯುತ್ ಮತ್ತು ಸೌರಶಕ್ತಿಯಿಂದಲೂ ಅಗತ್ಯ ಪ್ರಮಾಣದ ವಿದ್ಯುತ್ ದೊರೆಯುತ್ತಿರುವುದರಿಂದ ಶಾಖೋತ್ಪನ್ನ ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ತಗ್ಗಿಸಲಾಗಿದೆ ಎಂದು ಆರ್‌ಟಿಪಿಎಸ್ ಮೂಲಗಳು ತಿಳಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ