ಆ್ಯಪ್ನಗರ

ಶಾಲಾ ಮೈದಾನದಲ್ಲಿ ತಿಥಿ ಊಟ ತಯಾರಿ

ತಾಲೂಕಿನ ಆರ್‌.ಎಚ್‌.ನಂ.3 ಕ್ಯಾಂಪಿನ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಶನಿವಾರ, ಶಾಮಿಯಾನ ಹಾಕಿ ತಿಥಿ ಊಟಕ್ಕೆ ವ್ಯವಸ್ಥೆ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.

Vijaya Karnataka 25 Aug 2019, 4:56 pm
ಸಿಂಧನೂರು (ರಾಯಚೂರು) : ತಾಲೂಕಿನ ಆರ್‌.ಎಚ್‌.ನಂ.3 ಕ್ಯಾಂಪಿನ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಶನಿವಾರ, ಶಾಮಿಯಾನ ಹಾಕಿ ತಿಥಿ ಊಟಕ್ಕೆ ವ್ಯವಸ್ಥೆ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.
Vijaya Karnataka Web prepare meals on the school grounds
ಶಾಲಾ ಮೈದಾನದಲ್ಲಿ ತಿಥಿ ಊಟ ತಯಾರಿ


ಕ್ಯಾಂಪಿನ ಪ್ರಮುಖರೊಬ್ಬರು ಇತ್ತೀಚೆಗೆ ನಿಧನ ಹೊಂದಿದ್ದಾರೆ. ಅವರ ಪುಣ್ಯತಿಥಿ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆಯಿಂದಲೇ ಶಾಲಾ ಮೈದಾನದಲ್ಲಿ ಅಡುಗೆ ತಯಾರಿಗೆ ವ್ಯವಸ್ಥೆ ಮಾಡಲಾಗಿತ್ತು. ಶನಿವಾರ ಬೆಳಗ್ಗೆಯಿಂದಲೇ ಟ್ರ್ಯಾಕ್ಟರ್‌, ಅಡುಗೆ ಮಾಡುವವರ ಓಡಾಟ ಹಾಗೂ ಸಾಮಗ್ರಿಗಳ ಜೋಡಣೆ ಸೇರಿ ಇತರ ಕೆಲಸಗಳು ತರಗತಿ ವೇಳೆಯಲ್ಲೇ ನಡೆದವು.

ಸರಕಾರಿ ಶಾಲಾ ಮೈದಾನದಲ್ಲಿ ಖಾಸಗಿ ಕಾರ್ಯಕ್ರಮಗಳಿಗೆ ಅವಕಾಶ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ. ಈ ಕುರಿತು ಶಿಕ್ಷ ಣ ಇಲಾಖೆ ನಿಯಮವಿದ್ದರೂ ಕ್ಯಾಂಪಿನ ಶಿಕ್ಷಕರು ಹಾಗೂ ಎಸ್‌ಡಿಎಂಸಿ ಪದಾಧಿಕಾರಿಗಳು ಲೆಕ್ಕಕ್ಕೆ ತೆಗೆದುಕೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಶನಿವಾರ ಇಡೀ ದಿನ ಸರಿಯಾಗಿ ತರಗತಿಗಳು ನಡೆಯದಂತಹ ವಾತಾವರಣ ನಿರ್ಮಾಣವಾಗಿತ್ತುಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

..............

ಶಾಲಾ ಮೈದಾನದಲ್ಲಿ ಖಾಸಗಿ ಕಾರ್ಯಕ್ರಮ ಆಯೋಜಿಸಲು ಅವಕಾಶ ನೀಡಲಾಗದು. ಆರ್‌.ಎಚ್‌.ನಂ.3 ಕ್ಯಾಂಪಿನಲ್ಲಿ ನಡೆದ ಘಟನೆಯನ್ನು ಪರಿಶೀಲಿಸಿ, ಕ್ರಮಕೈಗೊಳ್ಳುವೆ.

-ವೃಷಭೇಂದ್ರಯ್ಯಸ್ವಾಮಿ, ಬಿಇಒ, ಸಿಂಧನೂರು


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ