ಆ್ಯಪ್ನಗರ

ಅಭಿವೃದ್ಧಿಗೆ ಶ್ರಮಿಸುವ ಭರವಸೆ

ಲಿಂಗಸುಗೂರು ತಾಲೂಕಿನವರಾದ ಸಂಸದ ರಾಜಾ ಅಮರೇಶ್ವರ ನಾಯಕರ ಜತೆ ಸೇರಿ ಪಕ್ಷಭೇದವಿಲ್ಲದೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲಾಗುವುದೆಂದು ಶಾಸಕ ಡಿ.ಎಸ್‌.ಹೂಲಗೇರಿ ಹೇಳಿದರು.

Vijaya Karnataka 18 Sep 2019, 3:58 pm
ಹಟ್ಟಿಚಿನ್ನದಗಣಿ: ಲಿಂಗಸುಗೂರು ತಾಲೂಕಿನವರಾದ ಸಂಸದ ರಾಜಾ ಅಮರೇಶ್ವರ ನಾಯಕರ ಜತೆ ಸೇರಿ ಪಕ್ಷಭೇದವಿಲ್ಲದೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲಾಗುವುದೆಂದು ಶಾಸಕ ಡಿ.ಎಸ್‌.ಹೂಲಗೇರಿ ಹೇಳಿದರು.
Vijaya Karnataka Web promising to strive for development
ಅಭಿವೃದ್ಧಿಗೆ ಶ್ರಮಿಸುವ ಭರವಸೆ


ಸಮೀಪದ ರಾಯದುರ್ಗ ಗ್ರಾಮದ ಬಳಿಯ ಸರ್‌ಕುಂಟಿ ಹಳ್ಳದ ಸೇತುವೆ ನಿರ್ಮಾಣಕ್ಕೆ ಟಿಎಸ್‌ಪಿ ಯೋಜನೆಯಲ್ಲಿಒದಗಿಸಲಾದ 2 ಕೋಟಿ ರೂ. ಮೊತ್ತದ ಕಾಮಗಾರಿಗೆ ಭಾನುವಾರ ಭೂಮಿ ಪೂಜೆ ನೆರವೇರಿಸಿದ ನಂತರ ಆಯೋಜಿಸಿದ್ದ ಸಮಾರಂಭದಲ್ಲಿಮಾತನಾಡಿದರು.

ಅನುಕೂಲ:ಚುನಾವಣೆ ಸಂದರ್ಭ ನೀಡಿದ ಭರವಸೆಗಳಿಗೆ ಚ್ಯುತಿ ಬಾರದಂತೆ ಹಾಗೂ ಪಕ್ಷಗಳ ತಾರತಮ್ಯವಿಲ್ಲದೆ ಕೆಲಸ ಕಾರ್ಯಗಳನ್ನು ಕೈಗೊಳ್ಳಲಾಗುವುದು. 2 ಕೋಟಿ ರೂ. ಮೊತ್ತ ಈ ಸೇತುವೆ ಕಾಮಗಾರಿಯಿಂದ ಟಣಮಕಲ್‌ ಸೇರಿನಾನಾ ದೊಡ್ಡಿಗಳ ಜನತೆಯ ಸಂಪರ್ಕಕ್ಕೆ ಅನುಕೂಲವಾಗಲಿದೆ. ನದಿ ದಡಕ್ಕೆ ಹೋಗುವ ಸೇತುವೆ ಸಹ ಶಿಥಿಲಗೊಂಡಿದ್ದು, ಇದನ್ನು ಹಟ್ಟಿಚಿನ್ನದಗಣಿ ಕಂಪನಿವತಿಯಿಂದ ಅನುದಾನ ಪಡೆದು ನಿರ್ಮಿಸಲಾಗುವುದು. ಈ ಭಾಗದ ವಿದ್ಯುತ್ತಿನ ಸಮಸ್ಯೆ ಬಗ್ಗೆ ಜನತೆ ನನ್ನ ಗಮನಕ್ಕೆ ತಂದಿದ್ದು ಶೀಘ್ರ ಸಭೆ ಕರೆದು ಸಮಸ್ಯೆ ನಿವಾರಿಸಲಾಗುವುದು. ಇನ್ನು ಅನೇಕ ಕಾಮಗಾರಿಗಳನ್ನು ಜನತೆ ಕೇಳದಿದ್ದರೂ ನಾನೇ ಗುರುತಿಸಿ ಅನುದಾನ ಒದಗಿಸುವ ಕಾರ್ಯಮಾಡಿದ್ದು ಅವು ಟೆಂಡರ್‌ ಹಂತದಲ್ಲಿದ್ದು ಆದಷ್ಟು ಬೇಗ ಕಾಮಗಾರಿ ಆರಂಭವಾಗಲಿವೆ ಎಂದು ತಿಳಿಸಿದರು.

ಜಿ.ಪಂ.ಮಾಜಿ ಸದಸ್ಯ ರಾಜಾ ಶ್ರೀನಿವಾಸ ನಾಯಕ ಮಾತನಾಡಿ, ಹಟ್ಟಿಚಿನ್ನದಗಣಿ ಕಂಪನಿ ಕೃಷ್ಣಾ ನದಿಯಿಂದ ನೀರು ತಂದುಕೊಳ್ಳುತ್ತಿದೆ. ಜಾಕ್ವೆಲ್‌ಗೆ ಹೋಗಲು ಸೇತುವೆ ಸೇರಿ ಈ ಭಾಗದ ಗ್ರಾಮಗಳ ರಸ್ತೆಗಳ ಅಭಿವೃದ್ಧಿಗೆ ಸದಾ ನಿರ್ಲಕ್ಷತ್ರ್ಯ ವಹಿಸುತ್ತಾ ಬಂದಿದೆ ಎಂದು ದೂರಿದರು.

ತಾಲೂಕು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಭೂಪನಗೌಡ ಕರಡಕಲ್‌, ಪಿಡಬ್ಲುತ್ರ್ಯಡಿ ಎಇಇ ಸಿ.ಎಸ್‌.ಪಾಟೀಲ್‌ ಮಾತನಾಡಿದರು. ಮುಖಂಡರಾದ ಗಜೇಂದ್ರ ನಾಯಕ, ವೆಂಕಟೇಶ ಗುತ್ತೇದಾರ, ಅಹ್ಮದ್‌ಬಾಬಾ ಹಟ್ಟಿ, ಗುಂಡಪ್ಪ ನಾಯಕ, ರಂಗಪ್ಪ ಯರಜಂತಿ, ತಿಮ್ಮಯ್ಯ, ದ್ಯಾವಪ್ಪ, ಪರಶುರಾಮ ಹಿರೇನಗನೂರು, ಬಾಬು ದಿಡ್ಡಿಮನಿ, ರೇಣುಕಾ, ದುರುಗಪ್ಪಗೌಡ, ಸಿದ್ದಪ್ಪ ಬೆಂಚಲದೊಡ್ಡಿ ಇದ್ದರು. ಶಿಕ್ಷಕ ಬಸವರಾಜ ಬಡಿಗೇರ್‌ ನಿರ್ವಹಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ