ಆ್ಯಪ್ನಗರ

ತೈಲ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಏರಿಕೆ ಖಂಡಿಸಿ ಎಸ್‌ಯುಸಿಐ(ಸಿ) ಪದಾಧಿಕಾರಿಗಳು ದ್ವಿಚಕ್ರ ವಾಹನಗಳಿಗೆ ಹಗ್ಗ ಕಟ್ಟಿ ಎಳೆಯುವ ಮೂಲಕ ಕೇಂದ್ರ ಸರಕಾರದ ವಿರುದ್ಧ ಮಂಗಳವಾರ ಪ್ರತಿಭಟನೆ ನಡೆಸಿದರು.

Vijaya Karnataka 23 May 2018, 5:00 am
ರಾಯಚೂರು ; ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಏರಿಕೆ ಖಂಡಿಸಿ ಎಸ್‌ಯುಸಿಐ(ಸಿ) ಪದಾಧಿಕಾರಿಗಳು ದ್ವಿಚಕ್ರ ವಾಹನಗಳಿಗೆ ಹಗ್ಗ ಕಟ್ಟಿ ಎಳೆಯುವ ಮೂಲಕ ಕೇಂದ್ರ ಸರಕಾರದ ವಿರುದ್ಧ ಮಂಗಳವಾರ ಪ್ರತಿಭಟನೆ ನಡೆಸಿದರು.
Vijaya Karnataka Web RAC-RCH22HD03(A)


ನಗರದ ತಹಸಿಲ್‌ ಕಚೇರಿ ಮುಂಭಾಗದಲ್ಲಿ ವಾಹನಗಳಿಗೆ ಹಗ್ಗ ಕಟ್ಟಿ ಎಳೆಯುವ ಮೂಲಕ ಜನಸಾಮಾನ್ಯರಿಗೆ ಪದೇ ಪದೆ ತೈಲ ಬೆಲೆ ಏರಿಕೆಯಾಗುತ್ತಿರುವುದು ದ್ವಿಚಕ್ರ ವಾಹನ ನಿರ್ವಹಣೆ ಮಾಡದಂತಹ ಪರಿಸ್ಥಿತಿ ಬರುತ್ತಿದೆ. ಪೆಟ್ರೋಲ್‌ ಹಾಕದೆಯೇ ಹಗ್ಗ ಕಟ್ಟಿಕೊಂಡು ಎಳೆದಾಡುವುದೇ ವಾಸಿ ಎಂದು ಬೆಲೆ ಏರಿಕೆ ವಿರುದ್ಧ ಕಿಡಿಕಾರಿದರು. ಪೆಟ್ರೋಲ್‌ ಹಾಗೂ ಡೀಸೆಲ್‌ ದರಗಳಲ್ಲಿ ದಾಖಲೆಯ ಏರಿಕೆ ಆತಂಕಕಾರಿ ಸಂಗತಿ. ಪ್ರತಿ ಲೀಟರ್‌ ಪೆಟ್ರೋಲ್‌ ಬೆಲೆ 76.24 ಮತ್ತು ಡೀಸೆಲ್‌ ಬೆಲೆ 67.57 ರೂ. ಗೆ ಏರಿಕೆಯಾಗಿದ್ದು, ಜನಸಾಮಾನ್ಯರ ದೈನಂದಿನ ಬದುಕಿನ ಮೇಲೆ ಬರೆ ಇಟ್ಟಂತಾಗಿದೆ. ಹೀಗಾಗಿ ಕೂಡಲೇ ಇಂಧನ ಬೆಲೆ ಪರಿಷ್ಕರಣೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಎಸ್‌ಯುಸಿಐ(ಸಿ) ಕಮ್ಯುನಿಸ್ಟ್‌ ಪಕ್ಷ ದ ವೀರೇಶ್‌.ಎನ್‌.ಎಸ್‌, ಮಹೇಶ.ಚಿ, ಚೆನ್ನಬಸವ ಜಾನೇಕಲ್‌, ರಾಮಣ್ಣ.ಎಂ, ಚೇತನಾ ಬನಾರೆ ಸೇರಿದಂತೆ ಅನೇಕರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ