ಆ್ಯಪ್ನಗರ

ದೇಗುಲ ತೆರವು ಖಂಡಿಸಿ ಪ್ರತಿಭಟನೆ

ಸರಕಾರಿ ಜಾಗ ಅತಿಕ್ರಮಣ ನೆಪವೊಡ್ಡಿ ಪಟ್ಟಣದ ಬಸವೇಶ್ವರ ನಗರದ ಗಣೇಶ ಗುಡಿ, ವಡ್ಡರ ಓಣಿಯ ಸತ್ಯಮ್ಮ ಹಾಗೂ ಅನ್ನಪೂರ್ಣೆಶ್ವರಿ ದೇವಸ್ಥಾನಗಳನ್ನು ದಿಢೀರ್‌ ತೆರವುಗೊಳಿಸಿದ್ದನ್ನು ವಿರೋಧಿಸಿ ನಾಗರಿಕ ಹಿತರಕ್ಷಣಾ ಸಮಿತಿ ಕಾರ್ಯಕರ್ತರು, ಮಂಗಳವಾರ ಪ್ರತಿಭಟನೆ ನಡೆಸಿ, ತಹಸೀಲ್ದಾರ್‌ ಬಲರಾಮ ಕಟ್ಟಿಮನಿ ಅವರ ಮೂಲಕ ಲಿಂಗಸುಗೂರು ಸಹಾಯಕ ಆಯುಕ್ತರಿಗೆ ಮನವಿ ರವಾನಿಸಿದರು.

Vijaya Karnataka 11 Mar 2020, 3:44 pm
ಮಸ್ಕಿ: ಸರಕಾರಿ ಜಾಗ ಅತಿಕ್ರಮಣ ನೆಪವೊಡ್ಡಿ ಪಟ್ಟಣದ ಬಸವೇಶ್ವರ ನಗರದ ಗಣೇಶ ಗುಡಿ, ವಡ್ಡರ ಓಣಿಯ ಸತ್ಯಮ್ಮ ಹಾಗೂ ಅನ್ನಪೂರ್ಣೆಶ್ವರಿ ದೇವಸ್ಥಾನಗಳನ್ನು ದಿಢೀರ್‌ ತೆರವುಗೊಳಿಸಿದ್ದನ್ನು ವಿರೋಧಿಸಿ ನಾಗರಿಕ ಹಿತರಕ್ಷಣಾ ಸಮಿತಿ ಕಾರ್ಯಕರ್ತರು, ಮಂಗಳವಾರ ಪ್ರತಿಭಟನೆ ನಡೆಸಿ, ತಹಸೀಲ್ದಾರ್‌ ಬಲರಾಮ ಕಟ್ಟಿಮನಿ ಅವರ ಮೂಲಕ ಲಿಂಗಸುಗೂರು ಸಹಾಯಕ ಆಯುಕ್ತರಿಗೆ ಮನವಿ ರವಾನಿಸಿದರು.
Vijaya Karnataka Web protest against the clearance of the temple
ದೇಗುಲ ತೆರವು ಖಂಡಿಸಿ ಪ್ರತಿಭಟನೆ


ಪಟ್ಟಣದ ಭ್ರಮರಾಂಬ ದೇವಸ್ಥಾನದಿಂದ ಆರಂಭವಾದ ಪ್ರತಿಭಟನಾ ರಾರ‍ಯಲಿ, ಬಸವೇಶ್ವರ ವೃತ್ತ ತಲುಪಿತು. ''ಸುಪ್ರೀಂ ಕೋರ್ಟ್‌ ಆದೇಶ ಪಾಲಿಸುತ್ತೇವೆ. ಅನಧಿಕೃತ ಹಾಗೂ ಅತಿಕ್ರಮಿತ ಕಟ್ಟಡಗಳನ್ನು ತೆರವುಗೊಳಿಸುವ ಮೊದಲು ನೋಟಿಸ್‌ ನೀಡಬೇಕೆಂದು ಕೊರ್ಟ್‌ ಆದೇಶದಲ್ಲಿದೆ. ಆದರೆ, ಪುರಸಭೆ ಮುಖ್ಯಾಧಿಕಾರಿಗಳು ಈ ಬಗ್ಗೆ ನೋಟಿಸ್‌ ನೀಡಿಲ್ಲ'' ಎಂದು ಪ್ರತಿಭಟನಾಕಾರರು ದೂರಿದರು. ಪುರಸಭೆ ಮುಖ್ಯಾಧಿಕಾರಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿನಾಗರಿಕ ಹಿತರಕ್ಷಣಾ ಸಮಿತಿಯ ಪದಾಧಿಕಾರಿಗಳಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ