ಆ್ಯಪ್ನಗರ

‘ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ’

ಕಾಶ್ಮೀರದ ಅಪ್ರಾಪ್ತ ಬಾಲಕಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಘಟನೆ ಖಂಡಿಸಿ, ಪಟ್ಟಣದ ಕನಕ ವೃತ್ತದಲ್ಲಿ ಭಾನುವಾರ ಸಂಜೆ ಎಸ್‌ಎಫ್‌ಐ ಹಾಗೂ ಡಿವೈಎಫ್‌ಐ ಸೇರಿ ನಾನಾ ಸಂಘಟನೆಗಳ ಮುಖಂಡರು ಕ್ಯಾಂಡಲ್‌ ಹೊತ್ತಿಸುವ ಮೂಲಕ ಪ್ರತಿಭಟನೆ ನಡೆಸಿದರು.

Vijaya Karnataka Web 17 Apr 2018, 5:00 am
ಕವಿತಾಳ : ಕಾಶ್ಮೀರದ ಅಪ್ರಾಪ್ತ ಬಾಲಕಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಘಟನೆ ಖಂಡಿಸಿ, ಪಟ್ಟಣದ ಕನಕ ವೃತ್ತದಲ್ಲಿ ಭಾನುವಾರ ಸಂಜೆ ಎಸ್‌ಎಫ್‌ಐ ಹಾಗೂ ಡಿವೈಎಫ್‌ಐ ಸೇರಿ ನಾನಾ ಸಂಘಟನೆಗಳ ಮುಖಂಡರು ಕ್ಯಾಂಡಲ್‌ ಹೊತ್ತಿಸುವ ಮೂಲಕ ಪ್ರತಿಭಟನೆ ನಡೆಸಿದರು.
Vijaya Karnataka Web punish the convicts
‘ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ’


ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಶಿವಕುಮಾರ ಮ್ಯಾಗಳಮನಿ ಮಾತನಾಡಿ, ಸಾಮೂಹಿಕ ಅತ್ಯಾಚಾರ ಮಾಡಿದ ದುಷ್ಕರ್ಮಿಗಳಿಗೆ ಗಲ್ಲು ಶಿಕ್ಷೆಯಾಗಬೇಕು, ಮಾನವೀಯತೆ ಮರೆತ 6 ಜನ ಕಾಮಾಂಧರು ಮಗುವನ್ನು 8 ದಿನಗಳ ಕಾಲ ದೇವಸ್ಥಾನದಲ್ಲಿ ಬಂಧಿಸಿ ಕೊನೆಗೆ ಕೊಲೆ ಮಾಡಿದ್ದಾರೆ. ಅಲ್ಲದೇ ಯುಪಿಯ ಉನ್ನಾವ್‌ನಲ್ಲಿ ಬಿಜೆಪಿ ಶಾಸಕನಿಂದ 16 ವರ್ಷದ ಯುವತಿಯ ಮೆಲೆ ಅತ್ಯಾಚಾರ ನಡೆದಿದೆ. ಇದನ್ನು ಪ್ರಶ್ನಿಸಿದ ಆಕೆಯ ತಂದೆ ಕೊನೆಗೆ ಲಾಕಪ್‌ ಡೆತ್‌ ಆದರು. ಇಷ್ಟೆಲ್ಲಾ ಅಮಾನವೀಯ ಕೃತ್ಯ ನಡೆಯುತ್ತಿದ್ದರೂ ಕೇಂದ್ರ ಸರಕಾರ ಆರೋಪಿಗಳನ್ನು ಬಂಧಿಸದೇ ರಕ್ಷಿಸುವಲ್ಲಿ ತೊಡಗಿಕೊಂಡಿರುವುದು ನಾಚಿಕೆ ವಿಷಯ. ಹೆಣ್ಣು ಮಕ್ಕಳಿಗೆ, ಯುವತಿಯರಿಗೆ ಸರಕಾರ ಸೂಕ್ತ ರಕ್ಷ ಣೆ ಒದಗಿಸಬೇಕು. ಘಟನೆಯ ಪರವಾಗಿ ನಿಂತ ಸರಕಾರ, ಸಂಘ ಪರಿವಾರದ ಮುಖಂಡರು ತಾವು ಯಾರು ಎನ್ನುವುದನ್ನು ತೋರಿಸಿದ್ದಾರೆ, ಇವರಿಗೂ ಸೂಕ್ತ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದರು.

ಎಂ.ಡಿ.ಮೈಬೂಬ್‌ ಸಾಬ್‌, ಖಾಸಿಂಮುಲ್ಲ, ಎಂ.ಡಿ.ಅಲಿಂ, ಲಿಂಗರಾಜ ಕಂದಗಲ್‌ ಮಾತನಾಡಿದರು.

ಡಿವೈಎಫ್‌ಐ ರಾಜ್ಯಸಮಿತಿ ಸದಸ್ಯ ಶಿವರಾಜ ಮ್ಯಾಗಳಮನಿ, ಅಲ್ತಾಫ್‌, ಪ.ಪಂ.ಸದಸ್ಯ ಖಾಜಾಪಾಷಾ, ಗ್ರಾ.ಪಂ.ಮಾಜಿ ಸದಸ್ಯ ಆಜಾಮ್‌ಪಾಷಾ, ಶಿವನಪ್ಪ ದಿನ್ನಿ, ಅನ್ನು, ಶಾಲಮ್‌, ಶರಣು ಬುಳ್ಳಾಪೂರು, ಗೋಕುಲ್‌ಸಾಬ್‌, ಮುಸ್ತಫಾ, ರಸೂಲ್‌, ಉಸ್ಮಾನ್‌, ಮೈಬೂ ಅರಿಕೇರಿ, ಚಾಂದ್‌ಪಾಷಾ, ರಮೇಶ, ಬಸವರಾಜ ಸೇರಿ ಇತರರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ