ಆ್ಯಪ್ನಗರ

ಬೆಳೆಗೆ ಜೀವ ಕಳೆ ತಂದ ಮಳೆ

ಕಳೆದ ವಾರ ನಿರಂತರವಾಗಿ ನಾಲ್ಕು ದಿನಗಳ ಕಾಲ ಸುರಿದ ಮಳೆಯಿಂದಾಗಿ ಬಾಡುವ ಹಂತದಲ್ಲಿದ್ದ ತೊಗರಿ, ಹತ್ತಿ, ಸಜ್ಜೆ ಸೇರಿದಂತೆ ಇತರ ಬೆಳೆ ಚೇತರಿಸಿಕೊಂಡಿದ್ದು, ರೈತರಲ್ಲಿಸಂತಸ ಮೂಡಿದೆ.

Vijaya Karnataka 8 Oct 2019, 3:11 pm
ಹಟ್ಟಿಚಿನ್ನದಗಣಿ: ಕಳೆದ ವಾರ ನಿರಂತರವಾಗಿ ನಾಲ್ಕು ದಿನಗಳ ಕಾಲ ಸುರಿದ ಮಳೆಯಿಂದಾಗಿ ಬಾಡುವ ಹಂತದಲ್ಲಿದ್ದ ತೊಗರಿ, ಹತ್ತಿ, ಸಜ್ಜೆ ಸೇರಿದಂತೆ ಇತರ ಬೆಳೆ ಚೇತರಿಸಿಕೊಂಡಿದ್ದು, ರೈತರಲ್ಲಿಸಂತಸ ಮೂಡಿದೆ.
Vijaya Karnataka Web rain that brought the crop to life
ಬೆಳೆಗೆ ಜೀವ ಕಳೆ ತಂದ ಮಳೆ


ಮುಂಗಾರು ಮಳೆ ಆರಂಭದಲ್ಲಿಕೈಕೊಟ್ಟಿದ್ದರಿಂದ ಬಹುತೇಕ ರೈತರ ಆತಂಕದಲ್ಲಿದ್ದರು. ಸಮೀಪದ ವೀರಾಪುರ, ನಿಲೋಗಲ್‌, ಅನ್ವರಿ, ಹಿರೇನಗನೂರು, ಗೌಡೂರು, ಕೋಠಾ, ಯಲಗಟ್ಟಾ, ರೋಡಲಬಂಡಾ ಮೊದಲಾದ ಗ್ರಾಮದ ರೈತರು ತೊಗರಿ ಹಾಕಿದ್ದಾರೆ. ಇದರ ಜತೆ ಅಲ್ಲಲ್ಲಿಹತ್ತಿ, ಸಜ್ಜೆ, ಎಳ್ಳು ಹಾಕಲಾಗಿದೆ. ಬಿತ್ತನೆ ಮಾಡಿದ ಬಳಿಕ ಜಮೀನಿನಲ್ಲಿನೀರು ಹರಿದಾಡುವಷ್ಟು ಮಳೆಯಾಗಿರಲಿಲ್ಲ. ಬೆಳೆಗಳು ಬಾಡುವ ಹಂತಕ್ಕೆ ಹೋಗಿದ್ದವು. ಕಳೆದ ಎರಡು ವರ್ಷದಿಂದ ಬರಕ್ಕೆ ಸಿಲುಕಿದ ರೈತರು ಮತ್ತೆ ಆತಂಕದಲ್ಲಿದ್ದರು. ಇದೀಗ ಮಳೆ ಕೈ ಹಿಡಿದಿದ್ದರಿಂದ ಆತಂಕ ದೂರವಾಗಿದೆ. ಜತೆಗೆ, ಬೆಳೆಗಳು ನಳನಳಿಸುತ್ತಿವೆ. ಕಳೆದ ವಾರ ಪಟ್ಟಣ ಸೇರಿದಂತೆ ಸುತ್ತಲಿನ ಭಾಗದಲ್ಲಿಉತ್ತಮ ಮಳೆಯಾಗಿದೆ. ತೊಗರಿ, ಹತ್ತಿ ಬೆಳೆಗಳು ಕೈ ಹಿಡಿಯುವ ಮುನ್ಸೂಚನೆ ಕಾಣಿಸಿದೆ. ಬೆಳೆ ರಕ್ಷಣೆಗಾಗಿ ರೈತರು ಕ್ರಿಮಿನಾಶಕ ಸಿಂಪರಣೆಯಲ್ಲಿತೊಡಗಿದ್ದಾರೆ.

...

ಕಳೆದ ವಾರದಲ್ಲಿಸುರಿದ ಮಳೆಯಿಂದ ತೊಗರಿಗೆ ಅನುಕೂಲವಾಗಿದೆ. ಬಾಡುವ ಹಂತಕ್ಕೆ ಹೋಗಿದ್ದ ಬೆಳೆಗೆ ಮಳೆ ಜೀವಕಳೆ ತಂದಿದೆ. ಸದ್ಯ ತೊಗರಿ ಹೂವು ಬಿಡುವ ಹಂತದಲ್ಲಿದೆ. ಒಂದೆರಡು ಮಳೆಯಾದರೆ, ಫಸಲು ಕೈಗೆ ಬರಲಿದೆ.

-ರಾಜುಗೌಡ ಗುರಿಕಾರ, ರೈತ, ಹಟ್ಟಿಚಿನ್ನದಗಣಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ