ಆ್ಯಪ್ನಗರ

ಭತ್ತದ ನಾಟಿಗೆ ಭರದ ಸಿದ್ದತೆ

ನಾರಾಯಣಪುರ ಬಲದಂಡೆ ನಾಲೆಗೆ ಈಗಾಗಲೇ ನೀರು ಹರಿಸಲಾಗುತ್ತಿದ್ದರಿಂದ ಇತ್ತ ರೈತರು ಭತ್ತ ನಾಟಿಗೆ ಸಿದ್ಧತೆಯಲ್ಲಿ ತಲ್ಲೀನರಾಗಿದ್ದಾರೆ.

Vijaya Karnataka 30 Jul 2019, 3:21 pm
ಲಿಂಗಸುಗೂರು : ನಾರಾಯಣಪುರ ಬಲದಂಡೆ ನಾಲೆಗೆ ಈಗಾಗಲೇ ನೀರು ಹರಿಸಲಾಗುತ್ತಿದ್ದರಿಂದ ಇತ್ತ ರೈತರು ಭತ್ತ ನಾಟಿಗೆ ಸಿದ್ಧತೆಯಲ್ಲಿ ತಲ್ಲೀನರಾಗಿದ್ದಾರೆ.
Vijaya Karnataka Web ready to plant paddy
ಭತ್ತದ ನಾಟಿಗೆ ಭರದ ಸಿದ್ದತೆ


ತಾಲೂಕಿನಲ್ಲಿ ಒಟ್ಟು 1,94,010 ಹೆಕ್ಟೇರ್‌ ಭೌಗೋಳಿಕ ಪ್ರದೇಶ ಇದೆ. ಈ ಪೈಕಿ 1,55,240 ಹೆಕ್ಟೇರ್‌ ಸಾಗುವಳಿ ಭೂಮಿ ಇದೆ. ಇದರಲ್ಲಿ ನಾರಾಯಣಪುರ ಬಲದಂಡೆ ನಾಲೆ, ರಾಂಪೂರ ಏತ ನೀರಾವರಿ ಸೇರಿ ಒಟ್ಟು 12,570 ಹೆಕ್ಟೇರ್‌ ನೀರಾವರಿ ಪ್ರದೇಶ ಇದೆ. ನೀರಾವರಿ ಪ್ರದೇಶ ಮುಂಗಾರು ಹಂಗಾಮಿನಲ್ಲಿ ಭತ್ತವೇ ಪ್ರಮುಖ ಬೆಳೆಯಾಗಿದೆ. ನಾಲೆಗೆ ನೀರು ಬಿಡುವ ಮೊದಲೇ ರೈತರು ಭತ್ತದ ಗದ್ದೆಗಳಲ್ಲಿ ಟ್ರ್ಯಾಕ್ಟರ್‌ ಸಹಾಯದಿಂದ ಒಡ್ಡು-ಓರೆಗಳ ಕಡಿದು ಸ್ವಚ್ಛ ಮಾಡುವ ಜೊತೆಗೆ ಕೆಲವೆಡೆ ಭೂಮಿ ಸಮತಟ್ಟು ಮಾಡಿಕೊಳ್ಳುತ್ತಿದ್ದಾರೆ. ಹಾಗೂ ಭತ್ತದ ಸಸಿಗಳ ಮಡಿ ಮಾಡಿದ್ದು, ಸಸಿಗಳು ನಾಟಿಗೆ ಸಿದ್ಧ ಮಾಡಲಾಗಿದೆ.

ಖರ್ಚು: ನಾಲೆಗಳಿಗೆ ನೀರು ಬಂದ ನಂತರ ನೀರಾವರಿ ಪ್ರದೇಶದ ರೈತರು ಭತ್ತದ ನಾಟಿ ಮಾಡುವವರೆಗೂ ಬಿಡುವಿಲ್ಲದೆ ಪೂರ್ವ ಸಿದ್ಧತೆ ಕಾರ್ಯಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಟ್ರ್ಯಾಕ್ಟರ್‌ಗಳಿಗೆ ಬೇಡಿಕೆ ಉಂಟಾಗಿದೆ. ಗದ್ದೆಗಳಲ್ಲಿ ಭತ್ತದ ನಾಟಿ ಮಾಡುವ ಕೂಲಿಕಾರರಿಗೂ ಭಾರಿ ಬೇಡಿಕೆ ಬಂದಿದೆ. ಎಕರೆ ಭತ್ತ ನಾಟಿ ಮಾಡಲು 2,400 ಗುತ್ತಿಗೆ ಹಣ ನೀಡಬೇಕಿದೆ. ನೀರು ತುಂಬಿದ ಕೆಸರು ಗದ್ದೆಯಲ್ಲಿ ಎಕರೆ ಅಳತೆ ಭೂಮಿಯಲ್ಲಿ ಟ್ರ್ಯಾಕ್ಟರ್‌ನಿಂದ ಬಲ್ಲಾ, ಪ್ಲಡರ್‌ ಹೊಡೆಯಲು 2,500 ರೂಪಾಯಿ ಗುತ್ತಿಗೆ ಹಣ ನೀಡಬೇಕು. ಎಕರೆ ಭತ್ತ ನಾಟಿ ಮಾಡಲು ಸಸಿ, ಕೂಲಿಹಾಳು, ಟ್ರ್ಯಾಕ್ಟರ್‌ ಬಾಡಿಗೆ, ಗದ್ದೆಯ ಕಣಿವೆ ಸವರಲು ಗಂಡಾಳು ಸೇರಿ ಭತ್ತ ನಾಟಿ ಮಾಡಲು ಎಕರೆ 5 ರಿಂದ 6 ಸಾವಿರ ಖರ್ಚು ಬರುತ್ತಿದೆ.

ಅನುಮಾನ: ನಾಲೆಗಳಿಗೆ ನೀರು ಹರಿಬಿಟ್ಟಿರುವುದರಿಂದ ಭತ್ತದ ಗದ್ದೆಗಳಿಗೆ ನೀರು ಹಾಯಿಸುವ ಕಾರ್ಯ ನಡೆದಿದೆ. ಅಲ್ಲದೇ ಮಳೆ ಕೊರತೆಯಿಂದ ಭೀಕರ ಬರಗಾಲ ಆವರಿಸಿ ನೀರಾವರಿ ಪ್ರದೇಶದಲ್ಲಿಯೂ ಒಂದೇ ಬೆಳೆಗೆ ನೀರು ದೊರೆಯುತ್ತಿದೆ. ಬೇಸಿಗೆ ಬೆಳೆಗೆ ನೀರು ಸಿಗುವುದು ರೈತರಿಗೆ ಅನುಮಾನವಾಗಿದೆ. ಇದರ ಮಧ್ಯೆ ನಾಲೆಗಳು ಸಂಪೂರ್ಣ ಹಾಳಾಗಿ ರೈತರ ಜಮೀನುಗಳಿಗೆ ನೀರು ತಲುಪುವುದು ಕಷ್ಟವಾಗಿದೆ. ನಾನಾ ಆತಂಕಗಳ ಮಧ್ಯೆ ರೈತರು ಭತ್ತದ ನಾಟಿಗೆ ಸಸಿಗಳನ್ನು ಹಾಕಿ ಬೆಳೆಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ