ಆ್ಯಪ್ನಗರ

ಅಕ್ರಮ ಮಧ್ಯ ಮಾರಾಟಗಾರರ ವಿರುದ್ಧ ಕ್ರಮಕ್ಕೆ ಆಗ್ರಹ

ತಾಲೂಕಿನ ನಾನಾ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟಗಾರರ ವಿರುದ್ಧ ಕಾನೂನು ಕ್ರಮ ಜರಗಿಸಬೇಕು ಎಂದು ಆಗ್ರಹಿಸಿ, ಜ್ಯೋತಿ ಮಹಿಳಾ ಒಕ್ಕೂಟದ ಪದಾಧಿಕಾರಿಗಳು, ಸಹಾಯಕ ಆಯುಕ್ತರಿಗೆ ಬುಧವಾರ ಮನವಿ ಪತ್ರ ಸಲ್ಲಿಸಿದರು.

Vijaya Karnataka 9 Aug 2018, 5:00 am
ಲಿಂಗಸುಗೂರು : ತಾಲೂಕಿನ ನಾನಾ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟಗಾರರ ವಿರುದ್ಧ ಕಾನೂನು ಕ್ರಮ ಜರಗಿಸಬೇಕು ಎಂದು ಆಗ್ರಹಿಸಿ, ಜ್ಯೋತಿ ಮಹಿಳಾ ಒಕ್ಕೂಟದ ಪದಾಧಿಕಾರಿಗಳು, ಸಹಾಯಕ ಆಯುಕ್ತರಿಗೆ ಬುಧವಾರ ಮನವಿ ಪತ್ರ ಸಲ್ಲಿಸಿದರು.
Vijaya Karnataka Web RAC-RCH08LNG05


ತಾಲೂಕಿನ ಬೇಡರಕಾರ್ಲಕುಂಟಿ, ಮೆದಕಿನಾಳ, ಕಡ್ಡೋಣಿ, ಅಂಕುಶದೊಡ್ಡಿ, ಬುದ್ದಿನ್ನಿ, ಅನ್ವರಿ, ನೀಲೋಗಲ್‌, ಗೆಜ್ಜಲಗಟ್ಟಾ, ಯರಡೋಣಾ, ಹೊನ್ನಳ್ಳಿ, ಮೇದಿನಾಪುರ ಸೇರಿ ಇತರ ಗ್ರಾಮಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ದಂಧೆ ಮೀತಿಮೀರಿದೆ. ಈ ಬಗ್ಗೆ ಹಲವು ಬಾರಿ ಹೋರಾಟ ಮಾಡಿದರೂ ಕ್ರಮಕೈಗೊಳ್ಳದಿರುವುದು ನೋವಿನ ಸಂಗತಿಯಾಗಿದೆ. ಮದ್ಯ ಮಾರಾಟ ಹೆಚ್ಚಳದಿಂದ ಹಲವು ಕುಟಂಬಗಳು ಬೀದಿ ಪಾಲಾಗಿವೆ'' ಎಂದು ಅಳಲುತೋಡಿಕೊಂಡರು.

ಮಹಿಳಾ ಗ್ರಾಮ ಸಭೆ ನಡೆಸಿ: ತಾಲೂಕಿನ ಅನ್ವರಿ, ಹೊನ್ನಳ್ಳಿ, ಗೆಜ್ಜಲಗಟ್ಟಾ, ಸಂತೆಕೆಲ್ಲೂರು, ಕಾಳಾಪುರ, ಬನ್ನಿಗೋಳ, ಅಂಕುಶದೊಡ್ಡಿ, ಮೆದಕಿನಾಳ ಗ್ರಾಮಗಳಲ್ಲಿ ಮಹಿಳೆಯರ ಸಮಸ್ಯೆಗಳನ್ನು ಪರಿಹರಿಸಲು ಮಹಿಳಾ ಗ್ರಾಮಸಭೆ ಕರೆಯುವಂತೆ ತಾ.ಪಂ ಇಒಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಜ್ಯೋತಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ಶಶಿಕಲಾ, ಬಸಮ್ಮ, ಪೂಜಾ, ಶಿವಲೀಲಾ, ಮುಖಂಡರಾದ ಫಾದರ್‌ ಚೌರಪ್ಪ, ಚಿನ್ನಪ್ಪ ಕಂದಳ್ಳಿ, ಎಂ.ಡಿ.ಹರಳಪ್ಪ, ಸಂತೋಷಮ್ಮ, ಅಂಬಮ್ಮ, ತಾಯಮ್ಮ, ಅಮರಮ್ಮ, ಕೌಸಬೀ, ದೇವಮ್ಮ, ಶರಣಮ್ಮ ಸೇರಿ ಇತರರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ