ಆ್ಯಪ್ನಗರ

ಗುತ್ತಿಗೆ ಪದ್ಧತಿ ರದ್ದಿಗೆ ಆಗ್ರಹಿಸಿ ಆಯೋಗ ಸದಸ್ಯರಿಗೆ ಮನವಿ

ನಗರದಲ್ಲಿ ಗುತ್ತಿಗೆ ಪದ್ಧತಿ ರದ್ದತಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ರಾಜ್ಯ ದಿನಗೂಲಿ ಮತ್ತು ಗುತ್ತಿಗೆ ಪೌರಸೇವಾ ನೌಕರರ ಸಂಘದ ಪದಾಧಿಕಾರಿಗಳು ಸಫಾಯಿ ಕರ್ಮಚಾರಿ ಆಯೋಗದ ರಾಷ್ಟ್ರೀಯ ಸದಸ್ಯ ಜಗದೀಶ್‌ ಹಿರೇಮನಿ ಅವರಿಗೆ ಮನವಿ ಸಲ್ಲಿಸಿದರು.

Vijaya Karnataka 19 Jul 2018, 5:00 am
ರಾಯಚೂರು ; ನಗರದಲ್ಲಿ ಗುತ್ತಿಗೆ ಪದ್ಧತಿ ರದ್ದತಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ರಾಜ್ಯ ದಿನಗೂಲಿ ಮತ್ತು ಗುತ್ತಿಗೆ ಪೌರಸೇವಾ ನೌಕರರ ಸಂಘದ ಪದಾಧಿಕಾರಿಗಳು ಸಫಾಯಿ ಕರ್ಮಚಾರಿ ಆಯೋಗದ ರಾಷ್ಟ್ರೀಯ ಸದಸ್ಯ ಜಗದೀಶ್‌ ಹಿರೇಮನಿ ಅವರಿಗೆ ಮನವಿ ಸಲ್ಲಿಸಿದರು.
Vijaya Karnataka Web RAC-RCH18HD05


50:50ರಂತೆ ಗುತ್ತಿಗೆ ಪದ್ಧತಿಯನ್ನು ಮುಂದುವರಿಸಲು ಸೂಚಿಸಿರುವುದನ್ನು ಕೂಡಲೇ ರದ್ದುಪಡಿಸಬೇಕು. 2017ರ ಆ.28ರಿಂದ ಮಹಾನಗರ ಪಾಲಿಕೆ, ನಗರಸಭೆಗಳಲ್ಲಿ ಗುತ್ತಿಗೆ ಪದ್ಧತಿಯನ್ನು ರದ್ದುಮಾಡಿದ ಆದೇಶವನ್ನು ಕೂಡಲೇ ಜಾರಿಗೊಳಿಸಬೇಕು ಮತ್ತು ಎಲ್ಲ ಗುತ್ತಿಗೆ ಪೌರಕಾರ್ಮಿಕರನ್ನು ಕಾಯಂಗೊಳಿಸಬೇಕು. ಒಬ್ಬ ಪೌರಕಾರ್ಮಿಕನಿಗೆ ಮಾಸಿಕ 7000 ರೂ. ಗೌರವಧನ ಎಂಬ ಸರಕಾರಿ ಆದೇಶ ರದ್ದುಪಡಿಸಬೇಕು. ಪ್ರತಿ ಪುರಸಭೆ, ಪಟ್ಟಣ ಪಂಚಾಯಿತಿಗೆ 20ರಿಂದ 30ಲಕ್ಷ ರೂ. ಕೊರತೆಯನ್ನು ಸರಕಾರವೇ ಭರಿಸಲು ಕ್ರಮಕೈಗೊಳ್ಳಬೇಕು. ಸೆ. 2016ರಿಂದ ನವೆಂಬರ್‌ 2016ರವರೆಗೆ 3 ತಿಂಗಳ ಬಾಕಿ ವೇತನ ನೀಡಬೇಕು ಎಂದು ಆಗ್ರಹಿಸಿದರು.

ರಾಯಚೂರು ನಗರಸಭೆಯಲ್ಲಿ ಗುತ್ತಿಗೆ ಪದ್ಧತಿ ರದ್ದುಪಡಿಸಬೇಕು. ಪೌರಕಾರ್ಮಿಕರ ಸೇವೆ ಕಾಯಂಗೊಳಿಸಬೇಕು. ಪುರಸಭೆ, ಪಟ್ಟಣ ಪಂಚಾಯಿತಿಗಳಿಗೆ ಪೌರಕಾರ್ಮಿಕರ ಸಂಬಳ ಭರಿಸಲು ಅನುದಾನದ ಕೊರತೆ ಸರಿಪಡಿಸಲು ಕ್ರಮಕೈಗೊಳ್ಳಬೇಕು. ನಗರಸಭೆಗಳ ನೈರ್ಮಲ್ಯ ವಿಭಾಗದಲ್ಲಿ ಕಾರ್ಯನಿರ್ವಹಿಸುವ ವಾಹನ ಚಾಲಕರನ್ನು ಪೌರಕಾರ್ಮಿಕರೆಂದು ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ನಗರಸಭೆಯ ಪ್ಯಾಕೇಜ್‌ ನಂ 2, 7ರ ಪ್ರಕಾರ ಇಎಸ್‌ಐ 2012 ರಿಂದ ಪಾವತಿಯಾಗಿಲ್ಲ. ಈ ಕುರಿತು ಕ್ರಮಕೈಗೊಳ್ಳಬೇಕು, ಗುತ್ತಿಗೆ ಪೌರಕಾರ್ಮಿಕರು ಮರಣ ಹೊಂದಿದ್ದರೆ ಮೃತನ ಕುಟುಂಬದ ಸದಸ್ಯರಿಗೆ ಕೆಲಸ ನೀಡಬೇಕು. ಮೃತ ಗುತ್ತಿಗೆ ಪೌರಕಾರ್ಮಿಕರ ಶವ ಸಂಸ್ಕಾರಕ್ಕೆ 5 ಸಾವಿರ ರೂ. ಸಹಾಯಧನ ನೀಡಬೇಕು. ನಗರಸಭೆಯ ಕಾರ್ಯನಿರ್ವಹಿಸುವ ಗುತ್ತಿಗೆ ಕಾರ್ಮಿಕರಿಗೆ ರಜೆಯ ಸೌಲಭ್ಯ ನೀಡಬೇಕು. ಸ್ಯಾನಿಟೇಶನ್‌ ವಿಭಾಗದಲ್ಲಿ ಸುಮಾರು 20ಜನ ಕೆಲಸ ಮಾಡದೇ ತಿಂಗಳ ವೇತನ ಪಡೆಯುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಅಧ್ಯಕ್ಷ ಎಸ್‌.ಮಾರೆಪ್ಪ, ಪದಾಧಿಕಾರಿಗಳಾದ ಉರುಕುಂದಪ್ಪ, ಕೇಶವಮೂರ್ತಿ ಸೇರಿ ಸಫಾಯಿ ಕರ್ಮಚಾರಿಗಳಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ