ಆ್ಯಪ್ನಗರ

ಪರಿಹಾರಕ್ಕೆ ಆಗ್ರಹಿಸಿ ರೈತ ಸಂಘದಿಂದ ಡಿಸಿಗೆ ಮನವಿ

ಮಳೆ ಅಭಾವದಿಂದ ಉಂಟಾದ ಬೆಳೆ ನಷ್ಟಕ್ಕೆ ಪರಿಹಾರ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು, ಜಿಲ್ಲಾಧಿಕಾರಿ ಡಾ.ಗೌತಮ್‌ ಬಗಾದಿ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

Vijaya Karnataka 14 Aug 2018, 5:00 am
ಹಟ್ಟಿಚಿನ್ನದಗಣಿ: ಮಳೆ ಅಭಾವದಿಂದ ಉಂಟಾದ ಬೆಳೆ ನಷ್ಟಕ್ಕೆ ಪರಿಹಾರ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು, ಜಿಲ್ಲಾಧಿಕಾರಿ ಡಾ.ಗೌತಮ್‌ ಬಗಾದಿ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
Vijaya Karnataka Web request dc from farmers association demanding remedy
ಪರಿಹಾರಕ್ಕೆ ಆಗ್ರಹಿಸಿ ರೈತ ಸಂಘದಿಂದ ಡಿಸಿಗೆ ಮನವಿ


ಪಟ್ಟಣದ ಕಂಪನಿ ಅತಿಥಿ ಗೃಹದಲ್ಲಿ ಜಿಲ್ಲಾಧಿಕಾರಿಯನ್ನು ರೈತ ಮುಖಂಡರು ಭೇಟಿಯಾದರು. ತೊಗರಿ, ಹೆಸರು, ಸೂರ್ಯಕಾಂತಿ, ಸಜ್ಜೆ ಸೇರಿ ಇತರ ಬೆಳೆಗಳು, ಎರಡು ತಿಂಗಳಿಂದ ಮಳೆ ಬಾರದ್ದರಿಂದ ಕಮರಿಹೋಗುತ್ತಿವೆ. ಮಳೆ ಕೊರತೆಯಿಂದ ಜಾನುವಾರಗಳಿಗೆ ಮೇವೂ ಸಿಗದಂತಾಗಿದೆ. ಬೆಳೆನಷ್ಟ ಪರಿಹಾರ ನೀಡಲು ಕ್ರಮಕೈಗೊಳ್ಳಬೇಕು ಹಾಗೂ ರಾಯಚೂರು ಜಿಲ್ಲೆಯನ್ನು ಬರಪೀಡಿತವೆಂದು ಘೋಷಿಸಬೇಕೆಂದು ಒತ್ತಾಯಿಸಿದರು. ಮಳೆ ಕೊರತೆಯಿಂದ ಬಾಡುತ್ತಿವೆ.

ಡಿಸಿ ಡಾ.ಗೌತಮ್‌ ಬಗಾದಿ ಪ್ರತಿಕ್ರಿಯಿಸಿ, ಮಳೆ ಕೊರತೆಯಿಂದ ಜನತೆಗೆ ತೊಂದರೆಯಾಗಬಾರದೆಂಬ ಉದ್ದೇಶದೊಂದಿಗೆ ಪ್ರತಿ ಪಂಚಾಯಿತಿಯಲ್ಲಿ 100 ದಿನಗಳ ಕೂಲಿ ಕೆಲಸ ನೀಡುವಂತೆ ಪಿಡಿಒಗಳಿಗೆ ಸೂಚಿಸಲಾಗಿದೆ. ಇದರಲ್ಲಿ ರೈತರು ಕೃಷಿ ಹೊಂಡ, ಕಿರು ಜಲಾನಯನ, ದನದದೊಡ್ಡಿ, ಹೊಲದ ಬದುವಿನಲ್ಲಿ ಸಸಿಗಳನ್ನು ನೆಡುವ ಕೆಲಸ ನಿರ್ವಹಿಸಬೇಕು. ಕುಡಿವ ನೀರಿನ ಸಮಸ್ಯೆ ತಲೆದೋರದಂತೆ ಪ್ರತಿ ತಾಲೂಕಿಗೆ 40 ಲಕ್ಷ ರೂ. ಅನುದಾನ ಒದಗಿಸಲಾಗಿದೆ. 2016-17ನೇ ಸಾಲಿನ ಬೆಳೆ ವಿಮೆ ಮೊತ್ತದಲ್ಲಿ ಈಗಾಗಲೇ 10 ಕೋಟಿ ರೂ. ಬಂದಿದೆ. ಇನ್ನೂ 10 ಕೋಟಿ ರೂ. ಈ ವಾರದಲ್ಲಿ ಬರಲಿದೆ. ಕೃಷಿ ಸಚಿವರು ಈ ವಾರದಲ್ಲಿ ಜಿಲ್ಲೆಗೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ. ಹಟ್ಟಿ ಪಟ್ಟಣದ ನೀರಿನ ಸಮಸ್ಯೆ ನಿವಾರಣೆಗೆ ಕ್ರಮಕೈಗೊಳ್ಳಲಾಗಿದೆ. ಎರಡು ವಿದ್ಯುತ್‌ ಮೋಟಾರ್‌ಗಳು ಸುಟ್ಟಿದ್ದರಿಂದ ಸಮಸ್ಯೆಯಾಗಿದೆ. ಗುರುವಾರದ ವೇಳೆಗೆ ಮೋಟಾರ್‌ಗಳು ದುರಸ್ತಿಗೊಳ್ಳಲಿವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ರೈತ ಮುಖಂಡರಾದ ವೀರನಗೌಡ ಅನ್ವರಿ, ಅಮರಪ್ಪ ಅಳ್ಳಳ್ಳಿ, ವಿರೂಪಾಕ್ಷ ಪ್ಪ, ಯಂಕೋಬ, ಯಲ್ಲಪ್ಪ, ಮಲ್ಲಪ್ಪ ಮಸ್ಕಿ, ನಾನಾ ಇಲಾಖೆಯ ಅಧಿಕಾರಿಗಳಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ