ಆ್ಯಪ್ನಗರ

ಸಾಮಾಜಿಕ, ಆರ್ಥಿಕ ಸ್ಥಿತಿ ನೋಡಿ ಮೀಸಲಾತಿ ಕೊಡಿ: ಗದ್ದರ್ ಆಗ್ರಹ

ಕೇಂದ್ರ ಸರಕಾರ ಜಾರಿ ಮಾಡಿರುವ ಮೀಸಲಾತಿಗೆ ರಾಜಕೀಯ ಲೇಪನ ಮಾಡಲಾಗುತ್ತಿದೆ. ಸಾಮಾಜಿಕ ಆರ್ಥಿಕ ಪರಿಸ್ಥಿತಿ ಅನುಗುಣವಾಗಿ ಮೀಸಲಾತಿ ಕೊಡಿ. ಮೀಸಲಾತಿ ಬಗ್ಗೆ ರಾಜ್ಯಾಂಗ ಮತ್ತು ಸುಪ್ರಿಂ ಕೊರ್ಟ ಎರಡರಲ್ಲೂ ಗೊಂದಲ ಇದೆ ಎಂದರು.

Vijaya Karnataka Web 20 Jan 2019, 4:34 pm
ರಾಯಚೂರು: ಕೇವಲ ಶಸ್ತ್ರಾಸ್ತ್ರ ದಿಂದ ಹೋರಾಡಿ ವ್ಯವಸ್ಥೆಯ ವಿರುದ್ಧ ಗೆಲ್ಲಲಾಗದು. ಶಸ್ತ್ರಾಸ್ತ್ರವನ್ನೇ ಕ್ರಾಂತಿಕಾರಿ ಹೋರಾಟಗಾರರು ನೆಚ್ಚಿಕೊಂಡರೆ ಜನರ ಒಲವು ಕಳೆದುಕೊಳ್ಳುವುದು ನಿಶ್ಚಿತ ಎಂದು ಕ್ರಾಂತಿಕಾರಿ ಹೋರಾಟಗಾರ ಗದ್ದರ್ ಹೇಳಿದರು.
Vijaya Karnataka Web gaddar


ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರಕಾರ ಜಾರಿ ಮಾಡಿರುವ ಮೀಸಲಾತಿಗೆ ರಾಜಕೀಯ ಲೇಪನ ಮಾಡಲಾಗುತ್ತಿದೆ. ಸಾಮಾಜಿಕ ಆರ್ಥಿಕ ಪರಿಸ್ಥಿತಿ ಅನುಗುಣವಾಗಿ ಮೀಸಲಾತಿ ಕೊಡಿ. ಮೀಸಲಾತಿ ಬಗ್ಗೆ ರಾಜ್ಯಾಂಗ ಮತ್ತು ಸುಪ್ರಿಂ ಕೊರ್ಟ ಎರಡರಲ್ಲೂ ಗೊಂದಲ ಇದೆ ಎಂದರು.

ಲೋಕಸಭೆ ಚುನಾವಣೆ ಗಮನದಲ್ಲಿರಿಸಿಕೊಂಡು ಈ ಹಿಂದೆಯೂ ಅನೇಕ ಈಗ ಘಟಬಂಧನ್‌ಗಳು ಆಗಿ ಹೋಗಿವೆ. ಆದರೆ ನಿರೀಕ್ಷಿತಫಲ ನೀಡಿಲ್ಲ. ಕೇಂದ್ರದಲ್ಲಿ ಆಡಳಿತ ನಡೆಸಿದ ರಾಷ್ಟ್ರೀಯ ಪಕ್ಷಗಳ ವರ್ಚಸ್ಸು ಕುಸಿದಿದೆ. ರಾಷ್ಟ್ರೀಯ ಪಕ್ಷಗಳ ಪ್ರಭಾವ ಮತ್ತು ಆಡಳಿತ ವೈಫಲ್ಯದಿಂದ ಪ್ರಾದೇಶಿಕ ಪಕ್ಷಗಳಿಗೆ ಪ್ರಾಮುಖ್ಯತೆ ಹೆಚ್ಚಳವಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.

ಪ್ರಸ್ತುತ ಎಲ್ಲಾ ರಾಜಕೀಯ ಪಕ್ಷಗಳು ಅಧಿಕಾರ ಬಿಟ್ಟು ರಾಜ್ಯಾಂಗವನ್ನ ರಕ್ಷಿಸುವತ್ತ ಪ್ರಯತ್ನ ನಡೆಸಬೇಕಿದೆ ಎಂದು ಆಗ್ರಹಿಸಿದರು.

ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿವಾದ ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದು, ದೇವರ ದರ್ಶನದ ವಿಚಾರವನ್ನೂ ದೊಡ್ಢ ರಾಜಕೀಯ ವಿಷಯವಾಗಿ ಬಳಕೆ ಮಾಡುತ್ತಿದ್ದಾರೆ. ಎಲ್ಲ ವಿಚಾರಗಳಲ್ಲಿಯೂ ರಾಜಕೀಯ ಲಾಭ ಹುಡುಕತ್ತ ಹೊರಟರೆ ಮುಂದಿನ ದಿನಗಳಲ್ಲಿ ಮತದಾರರು ಬುದ್ದಿ ಕಲಿಸುತ್ತಾರೆ ಎಂದು ಗದ್ದರ್ ಎಚ್ಚರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ