ಆ್ಯಪ್ನಗರ

ಸೇಂಗಾ ಬೀಜ ವಿತರಣೆಗೆ ಆಗ್ರಹಿಸಿ ಮುತ್ತಿಗೆ

ಬಿತ್ತನೆಗೆ ಸೇಂಗಾ ಬೀಜ ವಿತರಿಸುವಲ್ಲಿಕೃಷಿ ಅಧಿಕಾರಿಗಳು ಅನುಸರಿಸುತ್ತಿರುವ ವಿಳಂಬ ಖಂಡಿಸಿ ರೈತರು ಬುಧವಾರ ಕೃಷಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಮುತ್ತಿಗೆ ಹಾಕಿದರು.

Vijaya Karnataka 31 Oct 2019, 3:19 pm
ಲಿಂಗಸುಗೂರು: ಬಿತ್ತನೆಗೆ ಸೇಂಗಾ ಬೀಜ ವಿತರಿಸುವಲ್ಲಿಕೃಷಿ ಅಧಿಕಾರಿಗಳು ಅನುಸರಿಸುತ್ತಿರುವ ವಿಳಂಬ ಖಂಡಿಸಿ ರೈತರು ಬುಧವಾರ ಕೃಷಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಮುತ್ತಿಗೆ ಹಾಕಿದರು.
Vijaya Karnataka Web siege demanding seed distribution
ಸೇಂಗಾ ಬೀಜ ವಿತರಣೆಗೆ ಆಗ್ರಹಿಸಿ ಮುತ್ತಿಗೆ


ತಾಲೂಕಿನಲ್ಲಿಈ ಭಾರಿ ಉತ್ತಮ ಮಳೆಯಾಗಿದ್ದು, ಈಗಾಗಲೇ ಭಿತ್ತನೆ ಶುರುವಾಗಿ ತಿಂಗಳು ಕಳೆದಿದೆ. ಬಿತ್ತನೆಗಾಗಿ ಸೇಂಗಾ ಬೀಜ ಕೇಳಿದರೆ, ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ವಿನಾಕಾರಣ ಬಿತ್ತನೆ ಬೀಜ ವಿತರಣೆ ಮಾಡುತ್ತಿಲ್ಲ. ಇದರಿಂದ, ಬಿತ್ತನೆ ದಿನಗಳು ಮುಗಿಯುವ ಭೀತಿ ರೈತರಿಗೆ ಶುರುವಾಗಿದೆ. ರೈತರ ನೆರವಿಗೆ ಬರಬೇಕಾದ ಅಧಿಕಾರಿಗಳೇ ಈ ರೀತಿ ವಿಳಂಬ ತೋರಿದರೆ ಹೇಗೆ? ಕೂಡಲೇ ರೈತ ಸಂಪರ್ಕ ಕೇಂದ್ರಗಳಿಗೆ ಸೇಂಗಾ ಬೀಜ ಪೂರೈಕೆ ಮಾಡಬೇಕು. ಆವರೆಗೂ ಧರಣಿ ಕೈ ಬಿಡುವುದಿಲ್ಲಎಂದು ರೈತರು ಪಟ್ಟು ಹಿಡಿದರು.

ಸ್ಥಳಕ್ಕೆ ಆಗಮಿಸಿದ ಕೃಷಿ ಇಲಾಖೆ ಉಪನಿರ್ದೇಶಕಿ ಮಂಜುಳಾ ಬಸವರೆಡ್ಡಿ ಮಾತನಾಡಿ, ಕೆಲ ತಾಂತ್ರಿಕ ಸಮಸ್ಯೆಯಿಂದಾಗಿ ಬೀಜ ವಿತರಣೆಯಲ್ಲಿತಡವಾಗಿದೆ. ಈಗಾಗಲೇ ಮುದಗಲ್‌ ಹೋಬಳಿಯಲ್ಲಿಸೇಂಗಾ ಬೀಜ ವಿತರಣೆ ಮಾಡಲಾಗುತ್ತಿದೆ. ಇನ್ನುಳಿದ ಹೋಬಳಿಗಳಲ್ಲಿಗುರುವಾರದಿಂದ ವಿತರಣೆ ನಡೆಯಲಿದೆ ಎಂದರು. ಆರಂಭದಲ್ಲಿಭರವಸೆ ಒಪ್ಪದ ರೈತರು ಬಳಿಕ ಗುರುವಾರದ ತನಕ ಕಾಯುವುದಾಗಿ ಧರಣಿ ಕೈ ಬಿಟ್ಟರು. ರೈತ ಸಂಘದ ಮುಖಂಡ ಅಮರಣ್ಣ ಗುಡಿಹಾಳ, ಕನ್ನಡಪರ ಹೋರಾಟಗಾರ ಶರಣೋಜಿ ಪವಾರ್‌, ಮೀಯಾಖಾನ್‌, ಸಿದ್ದೇಶ ಗೌಡೂರು, ಕುಪ್ಪಣ್ಣ ಗೋನವಾಟ್ಲಸೇರಿದಂತೆ ಇತರರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ