ಆ್ಯಪ್ನಗರ

'ಸಂಬಳ ಕೊಡಿ ಇಲ್ಲವಿಷಕೊಡಿ'

ಎನ್‌ಡಿಸಿ ನೆಪ ಹೇಳಿಕೊಂಡು ಉಪ ಖಜಾನೆ ಅಧಿಕಾರಿಗಳು ಕಳೆದ ಮೂರು ತಿಂಗಳಿಂದ ವೇತನ ಮಾಡುತ್ತಿಲ್ಲಎಂದು ಕಂದಾಯ ಇಲಾಖೆ ಸಿಬ್ಬಂದಿ ಉಪ ಖಜಾನೆ ಕಚೇರಿ ಎದುರುಗಡೆ ಗುರುವಾರ ಬೆಳಗ್ಗೆ ಧರಣಿ ನಡೆಸಿದರು.

Vijaya Karnataka 4 Oct 2019, 5:00 am
ದೇವದುರ್ಗ: ಎನ್‌ಡಿಸಿ ನೆಪ ಹೇಳಿಕೊಂಡು ಉಪ ಖಜಾನೆ ಅಧಿಕಾರಿಗಳು ಕಳೆದ ಮೂರು ತಿಂಗಳಿಂದ ವೇತನ ಮಾಡುತ್ತಿಲ್ಲಎಂದು ಕಂದಾಯ ಇಲಾಖೆ ಸಿಬ್ಬಂದಿ ಉಪ ಖಜಾನೆ ಕಚೇರಿ ಎದುರುಗಡೆ ಗುರುವಾರ ಬೆಳಗ್ಗೆ ಧರಣಿ ನಡೆಸಿದರು.
Vijaya Karnataka Web still not pay the salary
'ಸಂಬಳ ಕೊಡಿ ಇಲ್ಲವಿಷಕೊಡಿ'


ಕಳೆದ ಮೂರು ತಿಂಗಳಿಂದ ವೇತನವಿಲ್ಲದೆ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಮಕ್ಕಳ ಮದ್ಯಾಂತರ ಪರೀಕ್ಷೆ ಶಾಲಾ ಶುಲ್ಕ ಕಟ್ಟಲು ಸಾಧ್ಯವಾಗುತ್ತಿಲ್ಲ. ಕಿರಾಣಿ, ಬಟ್ಟೆ ಅಂಗಡಿಗಳಲ್ಲಿಮಾಡಿರುವ ಸಾಲ ತೀರಸದಂತಾಗಿದೆ. ಹಳೆ ಬಾಕಿ ಕೊಡದಿದ್ದರೆ ದಸರಾ, ದೀಪಾವಳಿಗೂ ಉದ್ರಿ ಕೊಡಲು ಸಾಧ್ಯವಿಲ್ಲಎಂದು ಅಂಗಡಿಗಳ ಮಾಲೀಕರು ಈಗಾಗಲೇ ನಮಗೆ ಎಚ್ಚರಿಕೆ ನೀಡಿದ್ದಾರೆ. ಈ ಸಂಬಂಧ ಹಲವಾರು ಬಾರಿ ಉಪ ಖಜಾನೆ ಅಧಿಕಾರಿಗಳಿಗೆ ನಮ್ಮ ಸಂಕಷ್ಟದ ಕುರಿತು ಮಾಹಿತಿ ನೀಡಿದ್ದರೂ ಉದ್ದೇಶ ಪೂರ್ವಕವಾಗಿ ಕಳೆದ ಮೂರು ತಿಂಗಳಿಂದ ವೇತನ ಮಾಡುತ್ತಿಲ್ಲ. ವೇತನ ಮಾಡಲು ಸಾಧ್ಯವಿಲ್ಲಎಂದರೆ ವಿಷ ಕೊಡಿ ನೆಮ್ಮಿದಿ ನಿದ್ರೆಗೆ ಜಾರುತ್ತೇವೆ ಎಂದು ಅಳಲು ತೋಡಿಕೊಂಡರು.

ಚುನಾವಣೆ ವೇತನ ಪಾವತಿ:ಎನ್‌ಡಿಸಿ ನೆಪದಲ್ಲಿಕಳೆದ ಮೂರು ತಿಂಗಳಿಂದ ಕಂದಾಯ ಇಲಾಖೆ ಸಿಬ್ಬಂದಿಗಳ ವೇತನ ನಿಲ್ಲಿಸಿರುವ ಉಪ ಖಾಜನೆ ಅಧಿಕಾರಿಗಳು ಚುನಾವಣೆಯಲ್ಲಿಕಾರ್ಯನಿರ್ವಹಿಸಿದ ಇದೇ ಕಂದಾಯ ಇಲಾಖೆ ಅಧಿಕಾರಿಗಳ ವೇತನ ಕಳೆದ ತಿಂಗಳು ಪಾವತಿಸಿದ್ದಾರೆ. ಚುನಾವಣೆಯಲ್ಲಿಕಾರ್ಯನಿರ್ವಹಿಸಿದ ಸಿಬ್ಬಂದಿಗಳಿಗೆ ಯಾವ ಆಧಾರದ ಮೇಲೆ ವೇತನ ಪಾವತಿಸಿದ್ದೀರಿ ಎಂದು ಉಪ ಖಜಾನೆ ಅಧಿಕಾರಿ ಶರಣಬಸವರಾಜಪ್ಪ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಉಲ್ಟಾ ಹೊಡೆದ ಖಜಾನೆ ಅಧಿಕಾರಿ:ಎನ್‌ಡಿಸಿ ನೆಪದಲ್ಲಿಕಳೆದ ಮೂರು ತಿಂಗಳಿಂದ ಉದ್ದೇಶ ಪೂರ್ವಕವಾಗಿ ಕಂದಾಯ ಇಲಾಖೆ ಸಿಬ್ಬಂದಿಗಳ ವೇತನ ಮಾಡಲು ಸತಾಯಿಸುತ್ತಿರುವ ಉಪ ಖಜಾನೆ ಅಧಿಕಾರಿಗಳ ವಿರುದ್ಧ ಕೈಗೊಂಡ ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದಂತೆ ಸಂಜೆ ವೇತನ ಮಾಡಿಕೊಡುವದಾಗಿ ಸಮಜಾಯಿಸಿ ನೀಡಿ ಸಂಜೆ ಮತ್ತೆ ಉಪ ಖಜಾನೆ ಅಧಿಕಾರಿ ಅದೇ ರಾಗ ಹಾಡಿದ್ದು ಪ್ರತಿಭಟನೆಕಾರರು ಆಕ್ರೋಶಕ್ಕೆ ಗುರಿಯಾಯಿತು. ಈ ವೇಳೆ ಪ್ರತಿಭಟನೆಕಾರರ ಹಾಗೂ ಉಪ ಖಜಾನೆ ಅಧಿಕಾರಿಗಳ ಮಧ್ಯೆ ಮಾತಿನ ಚಕಮಕಿ ನಡೆಯಿತು. ಮಾತು ತಪ್ಪಿದ ಉಪ ಖಜಾನೆ ಅಧಿಕಾರಿಗಳ ವಿರುದ್ಧ ಉಗ್ರ ಪ್ರತಿಭನಟನೆ ನಡೆಸಲಾಗುತ್ತದೆ ಎಂದು ಕಂದಾಯ ಇಲಾಖೆ ಸಿಬ್ಬಂದಿಗಳು ತಿಳಿಸಿದರು.

----

ಎನ್‌ಡಿಸಿ ನೀಡದೆ ಇರುವದರಿಂದ ಕಂದಾಯ ಇಲಾಖೆ ಅಧಿಕಾರಿಗಳ ವೇತನ ನಿಲ್ಲಿಸಲಾಗಿದೆ. ಚುನಾವಣೆಯಲ್ಲಿಕಾರ್ಯನಿರ್ವಹಿಸಿದ ಸಿಬ್ಬಂದಿಗಳಿಗೆ ವೇತನ ಪಾವತಿಸಲಾಗಿದೆ. ಆಗ ಇನ್ನೂ ಸುತ್ತೋ್ತಲೆ ಬಂದಿದ್ದಿಲ್ಲ. ಇದೀಗ ಆದೇಶವಿದೆ. ಹೀಗಾಗಿ ತಡೆ ಹಿಡಿಯಲಾಗಿದೆ. -ಶರಣಬಸವರಾಜಪ್ಪ, ಉಪ ಖಜಾನೆ ಅಧಿಕಾರಿ ದೇವದುರ್ಗ

---
ನಿಯಂತ್ರಣಾಧಿಕಾರಿಗಳು, ಮುಖ್ಯಸ್ಥರು ಅಧೀನಕೊಳ್ಳಪಡುವ ಬಟವಾಡೆ ಅಧಿಕಾರಿಗಳ ವೇತನ ನಿಲ್ಲಿಸಬೇಕು ಎನ್ನುವುದು ಆದೇಶದಲ್ಲಿದೆ. ಆದರೆ ಉಪ ಖಜಾನೆ ಅಧಿಕಾರಿಗಳು ಎಲ್ಲಸಿಬ್ಬಂದಿಗಳ ವೇತನವನ್ನು ಮೂರು ತಿಂಗಳಿಂದ ನಿಲ್ಲಿಸಿದ್ದಾರೆ. ನಾಳೆ ವೇತನ ಮಂಜೂರಾತಿ ಆಗದಿದ್ದರೆ ವಿಷದೊಂದಿಗೆ ಖಜಾನೆ ಕಚೇರಿಗೆ ಆಗಮಿಸುತ್ತೇವೆ. ಏನಾದರೂ ಅನಾಹುತ ಸಂಭವಿಸಿದರೆ ಅದಕ್ಕೆ ಉಪ ಖಜಾನೆ ಅಧಿಕಾರಿಗಳೇ ಹೊಣೆ.

- ಶರಣಬಸವ ಸ್ವಾಮಿ, ಗ್ರಾಮಲೆಕ್ಕಾಧಿಕಾರಿ, ದೇವದುರ್ಗ.

----

ಕಂದಾಯ ಇಲಾಖೆ ಯಾಕೆ ಎನ್‌ಡಿಸಿ ನೀಡಿಲ್ಲಎನ್ನುವದು ಗೊತ್ತಾಗುತ್ತಿಲ್ಲ. ತಹಸೀಲ್ದಾರ್‌ ಸೇರಿ ಡಿಟಿಒ ಅವರೊಂದಿಗೆ ಮಾತನಾಡಿ ಸಮಸ್ಯೆ ಪರಿಹಾರ ಕಂಡುಕೊಳ್ಳಲಾಗುತ್ತದೆ.

-ಹನುಮಂತ್ರಾಯ ಶಾಖೆ, ನೌಕರರ ಸಂಘದ ತಾಲೂಕು ಅಧ್ಯಕ್ಷ, ದೇವದುರ್ಗ


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ