ಆ್ಯಪ್ನಗರ

ಸ್ವಚ್ಛಮೇವ ಜಯತೆ ಆಂದೋಲನಕ್ಕೆ ಚಾಲನೆ

ಪಟ್ಟಣದ ಶಾಸಕರ ಭವನದಲ್ಲಿ ಮಂಗಳವಾರ ಸ್ವಚ್ಛಮೇವ ಜಯತೆ ಆಂದೋಲನ ಕಾರ್ಯಕ್ರಮ ಹಾಗೂ ಸ್ವಚ್ಛತಾ ರಥಕ್ಕೆ ಶಾಸಕ ರಾಜಾ ವೆಂಕಟಪ್ಪ ನಾಯಕ ಚಾಲನೆ ನೀಡಿದರು.

Vijaya Karnataka 12 Jun 2019, 3:34 pm
ಮಾನ್ವಿ: ಪಟ್ಟಣದ ಶಾಸಕರ ಭವನದಲ್ಲಿ ಮಂಗಳವಾರ ಸ್ವಚ್ಛಮೇವ ಜಯತೆ ಆಂದೋಲನ ಕಾರ್ಯಕ್ರಮ ಹಾಗೂ ಸ್ವಚ್ಛತಾ ರಥಕ್ಕೆ ಶಾಸಕ ರಾಜಾ ವೆಂಕಟಪ್ಪ ನಾಯಕ ಚಾಲನೆ ನೀಡಿದರು.
Vijaya Karnataka Web swchhameva jayathe movement
ಸ್ವಚ್ಛಮೇವ ಜಯತೆ ಆಂದೋಲನಕ್ಕೆ ಚಾಲನೆ


ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಈ ಆಂದೋಲನ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು, ನಿರಂತರವಾಗಿ ಜಾರಿಯಲ್ಲಿರಬೇಕು. ಇದಕ್ಕಾಗಿ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಪ್ರಯತ್ನಿಸಬೇಕು. ಹೆಚ್ಚು ಪ್ರಚಾರದ ಮೂಲಕ ಜನರಿಗೆ ಈ ಆಂದೋಲನದ ಉದ್ದೇಶದ ಕರಿತು ಮಾಹಿತಿ ನೀಡಬೇಕು. ಹೆಚ್ಚೆಚ್ಚು ಗಿಡ ಮರಗಳನ್ನು ಬೆಳೆಸಬೇಕು ಎಂದು ಹೇಳಿದರು.

ಜೂನ್‌ 11 ರಿಂದ ಜುಲೈ10 ರವರೆಗೆ ನಡೆಯುವ ಸ್ವಚ್ಛಮೇವ ಜಯತೆ ಆಂದೋಲನವನ್ನು, ಸ್ವಚ್ಛ ಭಾರತ ಮಿಷನ್‌, ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ಜಂಟಿಯಾಗಿ ಆಯೋಜಿಸಿವೆ.

ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ರೇಖಾ ಕರಿಯಪ್ಪ, ಉಪಾಧ್ಯಕ್ಷ ಮಲ್ಲನಗೌಡ ಖರಾಬದಿನ್ನಿ, ಅರಣ್ಯ ಇಲಾಖೆಯ ಬೀರಪ್ಪ, ಬಿಇಒ ವೆಂಕಟೇಶ ಗುಡ್ಯಾಳ, ಪುರಸಭೆ ಸಿಒ ವಿಜಯಲಕ್ಷ್ಮಿ, ತಾ.ಪಂ. ಇಒ ಶಶಿಕಾಂತ ಶಿವಪುರೆ ಸೇರಿದಂತೆ ನಾನಾ ಇಲಾಖೆಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ