ಆ್ಯಪ್ನಗರ

ಸ್ವಚ್ಛತೆ ಕಾಪಾಡಲು ತಾಕೀತು

ಪಟ್ಟಣದಲ್ಲಿ ಇತ್ತೀಚೆಗೆ ತ್ಯಾಜ್ಯ ನಿರ್ವಹಣೆ ಕಷ್ಟವಾಗಿದ್ದು, ಸ್ವಚ್ಛತೆ ಕಾಪಾಡಲು ಎಲ್ಲ ವ್ಯಾಪಾರಸ್ಥರು ಗಮನಹರಿಸಬೇಕೆಂದು ಪುರಸಭೆ ಮುಖ್ಯಾಧಿಕಾರಿ ನರಸಿಂಹಮೂರ್ತಿ ಹೇಳಿದರು.

Vijaya Karnataka 4 Dec 2018, 5:24 pm
ಮುದಗಲ್‌ : ಪಟ್ಟಣದಲ್ಲಿ ಇತ್ತೀಚೆಗೆ ತ್ಯಾಜ್ಯ ನಿರ್ವಹಣೆ ಕಷ್ಟವಾಗಿದ್ದು, ಸ್ವಚ್ಛತೆ ಕಾಪಾಡಲು ಎಲ್ಲ ವ್ಯಾಪಾರಸ್ಥರು ಗಮನಹರಿಸಬೇಕೆಂದು ಪುರಸಭೆ ಮುಖ್ಯಾಧಿಕಾರಿ ನರಸಿಂಹಮೂರ್ತಿ ಹೇಳಿದರು.
Vijaya Karnataka Web taking care of cleanliness
ಸ್ವಚ್ಛತೆ ಕಾಪಾಡಲು ತಾಕೀತು


ಸೋಮವಾರ ಸಂತೆಯ ದಿನ, ನಾನಾ ಡಬ್ಬಾ ಅಂಗಡಿಗಳ ಮಾಲೀಕರು ಹಾಗೂ ಇತರ ವ್ಯಾಪಾರಸ್ಥರನ್ನು ಭೇಟಿಯಾದ ಅವರು, ಪ್ಲ್ಯಾಸ್ಟಿಕ್‌ ಬಳಸಬಾರದು ಎಂದು ಸೂಚಿಸಿದರು. ಬೀದಿ ಬದಿಯ ವ್ಯಾಪಾರಸ್ಥರು ತಮ್ಮ ಅಂಗಡಿಗಳ ತ್ಯಾಜ್ಯವನ್ನು ಸಂಗ್ರಹಿಸಿಟ್ಟುಕೊಂಡು ಪುರಸಭೆಯಿಂದ ಬರುವ ಆಟೊ ಟಿಪ್ಪರ್‌ಗಳಿಗೆ ತ್ಯಾಜ್ಯ ಹಾಕಬೇಕು. ಸ್ವಚ್ಛತೆ ಕಾಪಾಡದ ಅಂಗಡಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕರಪತ್ರಗಳನ್ನು ಹಂಚಿದರು. ಈ ಸಂದರ್ಭದಲ್ಲಿ ಪುರಸಭೆ ಯ ಸಿಬ್ಬಂದಿ ಸೇರಿ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ