ಆ್ಯಪ್ನಗರ

ಕಲ್ಲಿದ್ದಲು ತ್ವರಿತ ಸಾಗಣೆಗೆ ಕಾರ್ಯವ್ಯೂಹ

ವಿದ್ಯುತ್‌ ಕೇಂದ್ರದಲ್ಲಿ ಕಲ್ಲಿದ್ದಲನ್ನು ತೀವ್ರಗತಿಯಲ್ಲಿ ಕೆಳಗಿಳಿಸಿಕೊಳ್ಳಲು ಎಲ್ಲ ಶಾಖೋತ್ಪನ್ನ ವಿದ್ಯುತ್‌ ಸ್ಥಾವರಗಳ ಪ್ರಮುಖ ಅಧಿಕಾರಿಗಳಿಗೆ ಕರ್ನಾಟಕ ವಿದ್ಯುತ್‌ ನಿಗಮ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಕಲ್ಲಿದ್ದಲು ಪೂರೈಕೆಯಲ್ಲಿ ಉಂಟಾಗುತ್ತಿರುವ ವಿಳಂಬಕ್ಕೆ ಕಲ್ಲಿದ್ದಲು ಸರಬರಾಜು ಮತ್ತು ಅವುಗಳನ್ನು ಇಳಿಸಿಕೊಳ್ಳಲು ಆಗುತ್ತಿದ್ದ ವಿಳಂಬವೂ ಪ್ರಮುಖ ಕಾರಣವಾಗಿತ್ತು.

Vijaya Karnataka 30 Oct 2018, 9:37 am
ಜಗನ್ನಾಥ ಆರ್‌. ದೇಸಾಯಿ
Vijaya Karnataka Web coal goods train

ರಾಯಚೂರು: ಕಲ್ಲಿದ್ದಲು ಕೊರತೆಯಿಂದ ರಾಜ್ಯದ ಶಾಖೋತ್ಪನ್ನ ವಿದ್ಯುತ್‌ ಕೇಂದ್ರಗಳು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಕಲ್ಲಿದ್ದಲು ಹೊತ್ತು ಕೇಂದ್ರಗಳಿಗೆ
ತಲುಪುವ ರೈಲುಗಳ ಓಡಾಟದ ವೇಗ ಹೆಚ್ಚಳಕ್ಕೆ ಕೆಪಿಸಿ ಮುಂದಾಗಿದೆ.

ವಿದ್ಯುತ್‌ ಕೇಂದ್ರದಲ್ಲಿ ಕಲ್ಲಿದ್ದಲನ್ನು ತೀವ್ರಗತಿಯಲ್ಲಿ ಕೆಳಗಿಳಿಸಿಕೊಳ್ಳಲು ಎಲ್ಲ ಶಾಖೋತ್ಪನ್ನ ವಿದ್ಯುತ್‌ ಸ್ಥಾವರಗಳ ಪ್ರಮುಖ ಅಧಿಕಾರಿಗಳಿಗೆ ಕರ್ನಾಟಕ ವಿದ್ಯುತ್‌ ನಿಗಮ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಕಲ್ಲಿದ್ದಲು ಪೂರೈಕೆಯಲ್ಲಿ ಉಂಟಾಗುತ್ತಿರುವ ವಿಳಂಬಕ್ಕೆ ಕಲ್ಲಿದ್ದಲು ಸರಬರಾಜು ಮತ್ತು ಅವುಗಳನ್ನು ಇಳಿಸಿಕೊಳ್ಳಲು ಆಗುತ್ತಿದ್ದ ವಿಳಂಬವೂ ಪ್ರಮುಖ ಕಾರಣವಾಗಿತ್ತು.

ಏನಿದು ಸಮಯದ ಉಳಿತಾಯ?: ರಾಜ್ಯದ ಆರ್‌ಟಿಪಿಎಸ್‌, ಬಿಟಿಪಿಎಸ್‌ ಮತ್ತು ವೈಟಿಪಿಎಸ್‌ ವಿದ್ಯುತ್‌ ಕೇಂದ್ರಗಳಿಗೆ ಸಿಂಗರೇಣಿ, ಮಹಾನದಿ ಕೋಲ್‌ ಫೀಲ್ಡ್‌ ಮತ್ತು ವೆಸ್ಟರ್ನ್‌ ಕೋಲ್‌ ಫೀಲ್ಡ್‌ ಗಳಿಂದ ದಿನವೂ ರೈಲುಗಳ ಮೂಲಕ ಕಲ್ಲಿದ್ದಲು ರವಾನೆಯಾಗುತ್ತದೆ.

ಶಾಖೋತ್ಪನ್ನ ವಿದ್ಯುತ್‌ ಕೇಂದ್ರವನ್ನು ತಲುಪಿದ ಕಲ್ಲಿದ್ದಲನ್ನು ರೈಲಿನಿಂದ ಕೆಳಗಿಳಿಸಿ ಸಂಗ್ರಹಣೆ ಯಾರ್ಡ್‌ಗೆ ಸಾಗಿಸಲು 8 ತಾಸು ತೆಗೆದುಕೊಳ್ಳುತ್ತಿದೆ. ಈ ಸಮಯವನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ಕೆಪಿಸಿ ಹೆಜ್ಜೆ ಇಟ್ಟಿದೆ. ರೈಲ್ವೆ ಇಲಾಖೆಯ ಜತೆ ಸಮನ್ವಯ ಸಾಸಿ, ರೇಕ್‌ಗಳಿಂದ ಕಲ್ಲಿದ್ದಲು ಕೆಳಗಿಳಿಸುವ ಸಮಯವನ್ನು 5ಗಂಟೆ 40 ನಿಮಿಷಕ್ಕೆ ಸೀಮಿತಗೊಳಿಸಲು ವಿದ್ಯುತ್‌ ಉತ್ಪಾದನೆ ಕೇಂದ್ರಗಳ ಅಧಿಕಾರಿಗಳಿಗೆ ಸೂಚಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ