ಆ್ಯಪ್ನಗರ

ಗೊಂದಲ ಸೃಷ್ಟಿಸಿದ ಧ್ವಜಾರೋಹಣ ಆದೇಶ

ಕನ್ನಡ ರಾಜ್ಯೋತ್ಸವಕ್ಕೆ ತಾಲೂಕಿನ ಎಲ್ಲಶಾಲೆಗಳಲ್ಲಿರಾಷ್ಟ್ರ ಧ್ವಜಾರೋಹಣ ಮಾಡಬೇಕು ಎಂಬ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಂ.ವೃಷಬೇಂದ್ರಯ್ಯಸ್ವಾಮಿಯವರ ಆದೇಶ ಗೊಂದಲಕ್ಕೆ ಕಾರಣವಾಯಿತು.

Vijaya Karnataka 1 Nov 2019, 5:00 am
ಸಿಂಧನೂರು: ಕನ್ನಡ ರಾಜ್ಯೋತ್ಸವಕ್ಕೆ ತಾಲೂಕಿನ ಎಲ್ಲಶಾಲೆಗಳಲ್ಲಿರಾಷ್ಟ್ರ ಧ್ವಜಾರೋಹಣ ಮಾಡಬೇಕು ಎಂಬ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಂ.ವೃಷಬೇಂದ್ರಯ್ಯಸ್ವಾಮಿಯವರ ಆದೇಶ ಗೊಂದಲಕ್ಕೆ ಕಾರಣವಾಯಿತು.
Vijaya Karnataka Web the flag raising order that created confusion
ಗೊಂದಲ ಸೃಷ್ಟಿಸಿದ ಧ್ವಜಾರೋಹಣ ಆದೇಶ


ಅ.26 ರಂದು ಆದೇಶ ಹೊರಡಿಸಿರುವ ಬಿಇಒ, ತಾಲೂಕಿನ ಸರಕಾರಿ ಪ್ರಾಥಮಿಕ, ಪ್ರೌಢ, ಅನುದಾನಿತ, ಅನುದಾನ ರಹಿತ ಶಾಲೆಗಳ ಮುಖ್ಯಗುರುಗಳು ಕಡ್ಡಾಯವಾಗಿ ಭುವನೇಶ್ವರಿಯ ಪೂಜೆ ಜತೆಗೆ ರಾಷ್ಟ್ರ ಧ್ವಜಾರೋಹಣ ಮಾಡಬೇಕು ಎಂದು ಸೂಚಿಸಿದ್ದಾರೆ. ಕನ್ನಡ ರಾಜ್ಯೋತ್ಸವವನ್ನು ಯಶಸ್ವಿಯಾಗಿ ಆಚರಿಸುವಂತೆ ತಿಳಿಸಿದ್ದಾರೆ. ಆದರೆ ಈ ಆದೇಶ ಗಂಭೀರ ಚರ್ಚೆಗೆ ಕಾರಣವಾಗಿದೆ. ಕನ್ನಡ ರಾಜ್ಯೋತ್ಸವದ ದಿನದಂದು ಸಿಂಧನೂರು ಹೊರತುಪಡಿಸಿ ಬೇರೆಲ್ಲೂರಾಷ್ಟ್ರ ಧ್ವಜಾರೋಹಣ ಮಾಡಬೇಕು ಎಂಬ ಆದೇಶ ಬಿಡುಗಡೆಯಾಗಿಲ್ಲ. ಆದರೆ ಇಲ್ಲಷ್ಟೇ ಯಾಕೆ ಈ ನಿಯಮ ಅನುಸರಿಸಲಾಗುತ್ತಿದೆ? ಎಂಬ ಚರ್ಚೆ ಶಿಕ್ಷಕರ ವಲಯದಲ್ಲಿಯೇ ನಡೆದಿದೆ. ಈ ರೀತಿಯ ಬೆಳವಣಿಗೆಯಿಂದ ಧ್ವಜ ನೀತಿ ಸಂಹಿತೆ ಇದೆಯೇ ಎಂಬ ಕುರಿತು ಶಿಕ್ಷಕರು ವಾಟ್ಸ್‌ಅಪ್‌ ಗ್ರೂಪ್‌ಗಳಲ್ಲಿಚರ್ಚಿಸಿದ್ದಾರೆ. ಈ ವಿಚಾರ ತಹಸೀಲ್ದಾರ್‌ ಗಮನಕ್ಕೂ ಹೋಗಿದ್ದು, ತಹಸೀಲ್ದಾರ್‌ ಸೂಚನೆ ಬಳಿಕ ಶಿಕ್ಷಣಾಧಿಕಾರಿ ರಾಷ್ಟ್ರ ಧ್ವಜಾರೋಹಣ ಕೈಬಿಡುವಂತೆ ಮರು ಆದೇಶಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ