ಆ್ಯಪ್ನಗರ

ಲಿಫ್ಟ್ ನಲ್ಲಿ ಸಿಲುಕಿದ್ದ ತಾಯಿ ಮತ್ತು ಶಿಶು

ಇಲ್ಲಿನ ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆ(ರಿಮ್ಸ್)ಯ ಆಸ್ಪತ್ರೆಯಲ್ಲಿ ಮಂಗಳವಾರ ತಡರಾತ್ರಿ ತಾಯಿ ಮತ್ತು ನವಜಾತ ಶಿಶು ದಿಢೀರ್ ಸ್ಥಗಿತಗೊಂಡ ಲಿಫ್ಟ್ ನಲ್ಲಿ ಕೆಲಕಾಲ ಸಿಲುಕಿದ್ದರಿಂದ ಸಿಬ್ಬಂದಿ ಆತಂಕ ಅನುಭವಿಸಿದರು.

ವಿಕ ಸುದ್ದಿಲೋಕ 15 Jun 2017, 7:54 am
ರಾಯಚೂರು: ಇಲ್ಲಿನ ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆ(ರಿಮ್ಸ್)ಯ ಆಸ್ಪತ್ರೆಯಲ್ಲಿ ಮಂಗಳವಾರ ತಡರಾತ್ರಿ ತಾಯಿ ಮತ್ತು ನವಜಾತ ಶಿಶು ದಿಢೀರ್ ಸ್ಥಗಿತಗೊಂಡ ಲಿಫ್ಟ್ ನಲ್ಲಿ ಕೆಲಕಾಲ ಸಿಲುಕಿದ್ದರಿಂದ ಸಿಬ್ಬಂದಿ ಆತಂಕ ಅನುಭವಿಸಿದರು.
Vijaya Karnataka Web the mother and infant who fell into the elevator
ಲಿಫ್ಟ್ ನಲ್ಲಿ ಸಿಲುಕಿದ್ದ ತಾಯಿ ಮತ್ತು ಶಿಶು


ಆಸ್ಪತ್ರೆಯಲ್ಲಿ ಜನಿಸಿದ್ದ, ಮಾನ್ವಿ ತಾಲೂಕಿನ ಕುರ್ಡಿ ಗ್ರಾಮದ ನರಸಪ್ಪ ಮತ್ತು ನರಸಮ್ಮ ದಂಪತಿಯ ಶಿಶುವನ್ನು ನೆಲ ಮಹಡಿಯಿಂದ ಜನರಲ್ ವಾರ್ಡಿಗೆ ಲಿಫ್ಟ್ ನಲ್ಲಿ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ತಾಂತ್ರಿಕ ದೋಷ ಹಿನ್ನೆಲೆಯಲ್ಲಿ ಲಿಫ್ಟ್ ಏಕಾಏಕಿ ಸ್ಥಗಿತಗೊಂಡಿತು. ತಾಂತ್ರಿಕ ತಜ್ಞರು ನಡೆಸಿದ ಒಂದು ತಾಸು ಕಾರ್ಯಾಚರಣೆ ನಂತರ ತಾಯಿ ಮತ್ತು ಮಗುವನ್ನು ಸುರಕ್ಷಿತವಾಗಿ ಲಿಫ್ಟ್ ನಿಂದ ಪಾರುಮಾಡಿ ವಾರ್ಡಿಗೆ ಸ್ಥಳಾಂತರಿಸಲಾಯಿತು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಬುಧವಾರ ಬೆಳಗ್ಗೆ ಸಭೆ ನಡೆಸಿದ ರಿಮ್ಸ್ ಕಾಲೇಜು ಆಸ್ಪತ್ರೆಯ ನಿರ್ದೇಶಕಿ ಡಾ.ಕವಿತಾ ಪಾಟೀಲ್ ಅವರು, ಈ ರೀತಿಯ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸುವಂತೆ ಸಿಬ್ಬಂದಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ