ಆ್ಯಪ್ನಗರ

ಹಳ್ಳದಲ್ಲಿ ನವಜಾತ ಶಿಶು ಶವ ಪತ್ತೆ

ಹಟ್ಟಿಚಿನ್ನದಗಣಿ: ಸ್ಥಳೀಯ ಪಟ್ಟಣದಿಂದ ಗೌಡೂರಿಗೆ ಹೋಗುವ ರಸ್ತೆಯಲ್ಲಿ ಬರುವ ಹಳ್ಳದಲ್ಲಿ ಸೋಮವಾರ ನವಜಾತ ಗಂಡು ಶಿಶುವಿನ ಶವ ಪತ್ತೆಯಾಗಿದೆ.

ವಿಕ ಸುದ್ದಿಲೋಕ 8 Mar 2016, 7:33 pm
ಹಟ್ಟಿಚಿನ್ನದಗಣಿ: ಸ್ಥಳೀಯ ಪಟ್ಟಣದಿಂದ ಗೌಡೂರಿಗೆ ಹೋಗುವ ರಸ್ತೆಯಲ್ಲಿ ಬರುವ ಹಳ್ಳದಲ್ಲಿ ಸೋಮವಾರ ನವಜಾತ ಗಂಡು ಶಿಶುವಿನ ಶವ ಪತ್ತೆಯಾಗಿದೆ.
Vijaya Karnataka Web the newborn infant dead body found
ಹಳ್ಳದಲ್ಲಿ ನವಜಾತ ಶಿಶು ಶವ ಪತ್ತೆ


ಹಳ್ಳದ ಮೂಲಕ ಬೆಳಗ್ಗೆ ಹೊಲಗಳಿಗೆ ಜನರು ಹೋಗುವಾಗ ಗಂಡು ಶಿಶುವಿನ ಶವ ಬಿದ್ದಿರುವುದನ್ನು ಗಮನಿಸಿದ್ದಾರೆ. ಶಿಶುವಿನ ಮತ ದೇಹಕ್ಕೆ ಇರುವೆ ಮುತ್ತಿಕೊಂಡಿದ್ದವು. ನಾಯಿಗಳು ಸಹ ಸೇರಿದ್ದವು. ಇದನ್ನು ಗಮನಿಸಿದ ಜನತೆ ನಾಯಿಗಳನ್ನು ಓಡಿಸಿದ್ದಾರೆ. ಸುತ್ತಲಿನ ಜನತೆಗೆ ಸುದ್ದಿ ಹರಡಿ ಬಹಳಷ್ಟು ಸಂಖ್ಯೆಯಲ್ಲಿ ಆಗಮಿಸಿ ಶಿಶುವಿನ ಶವ ವೀಕ್ಷಿಸಿದರು.

ವಿಷಯ ತಿಳಿದು ಸ್ಥಳೀಯ ಠಾಣೆಯ ಪಿಎಸ್‌ಐ ವಿಜಯಕುಮಾರ ಸ್ಥಳಕ್ಕೆ ಭೇಟಿ ನೀಡಿ, ಶಿಶುವಿನ ಶವದ ಬಗ್ಗೆ ಪರಿಶೀಲಿಸಿ, ಮರಣೋತ್ತರ ಪರೀಕ್ಷೆಗಾಗಿ ಶವವನ್ನು ವೈದ್ಯರಿಗೆ ಒಪ್ಪಿಸಿದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ