ಆ್ಯಪ್ನಗರ

ಬಡ ರೈತನ ಮಗನಿಗೆ ಏಳನೇ ರ‌್ಯಾಂಕ್

ಬಡ ರೈತ ಕುಟುಂಬದ, ತಾಲೂಕಿನ ಸಿಂಗನೋಡಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ಜಿ.ಗಣೇಶ್, 619 ಅಂಕಗಳ ಮೂಲಕ ರಾಜ್ಯಕ್ಕೆ ಏಳನೇ ರ‌್ಯಾಂಕ್ ಗಳಿಸಿ ಗಮನಸೆಳೆದಿದ್ದಾನೆ.

Vijaya Karnataka 8 May 2018, 5:00 am
ರಾಯಚೂರು : ಬಡ ರೈತ ಕುಟುಂಬದ, ತಾಲೂಕಿನ ಸಿಂಗನೋಡಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ಜಿ.ಗಣೇಶ್, 619 ಅಂಕಗಳ ಮೂಲಕ ರಾಜ್ಯಕ್ಕೆ ಏಳನೇ ರ‌್ಯಾಂಕ್ ಗಳಿಸಿ ಗಮನಸೆಳೆದಿದ್ದಾನೆ.
Vijaya Karnataka Web RAC-RCH07SND2


ತಂದೆ ಶಿವಕುಮಾರ್ ಹಾಗೂ ತಾಯಿ ರಾಜಮ್ಮ ಅವರು ಬಡ ಕೃಷಿಕರಾಗಿದ್ದಾರೆ. ತುಂಡು ಜಮೀನೇ ಕುಟುಂಬಕ್ಕೆ ಆಧಾರವಾಗಿದೆ. ಕಳೆದ ನಾಲ್ಕು ವರ್ಷಗಳಿಂದ ವಸತಿ ನಿಲಯದಲ್ಲಿದ್ದ ಜಿ.ಗಣೇಶ ಈ ಸಾಧನೆ ಮಾಡಿದ್ದಾನೆ. ರಜೆ ವೇಳೆ ಕೃಷಿ ಕೆಲಸಗಳಲ್ಲಿ ಕೈಜೋಡಿಸಿದ್ದೂ ವಿಶೇಷ. ಕನ್ನಡದಲ್ಲಿ 125, ಇಂಗ್ಲಿಷ್-99, ಹಿಂದಿ-99, ಗಣಿತ-99, ವಿಜ್ಞಾನ-98 ಹಾಗೂ ಸಮಾಜ ವಿಜ್ಞಾನ- 99ಅಂಕಗಳಿಸಿದ್ದಾನೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ