ಆ್ಯಪ್ನಗರ

ಹಟ್ಟಿ ಪಟ್ಟಣಕ್ಕೆ ಮಲತಾಯಿ ಧೋರಣೆ ತೋರಿಲ್ಲ: ಶಾಸಕ

ಅಭಿವೃದ್ಧಿ ವಿಷಯದಲ್ಲಿಹಟ್ಟಿಚಿನ್ನದಗಣಿ ಪಟ್ಟಣಕ್ಕೆ ಯಾವತ್ತೂ ಮಲತಾಯಿ ಧೋರಣೆ ತೋರಿಲ್ಲ. ಕಾರಣಾಂತರಗಳಿಂದ ಕೆಲವೊಂದು ಕಾಮಗಾರಿಗಳು ಆರಂಭಗೊಂಡಿಲ್ಲವಾದ್ದರಿಂದ ಅನ್ಯತಾಭಾವಿಸಬಾರದೆಂದು ಶಾಸಕ ಡಿ.ಎಸ್‌.ಹೂಲಗೇರಿ ಹೇಳಿದರು.

Vijaya Karnataka 17 Nov 2019, 5:00 am
ಹಟ್ಟಿಚಿನ್ನದಗಣಿ: ಅಭಿವೃದ್ಧಿ ವಿಷಯದಲ್ಲಿಹಟ್ಟಿಚಿನ್ನದಗಣಿ ಪಟ್ಟಣಕ್ಕೆ ಯಾವತ್ತೂ ಮಲತಾಯಿ ಧೋರಣೆ ತೋರಿಲ್ಲ. ಕಾರಣಾಂತರಗಳಿಂದ ಕೆಲವೊಂದು ಕಾಮಗಾರಿಗಳು ಆರಂಭಗೊಂಡಿಲ್ಲವಾದ್ದರಿಂದ ಅನ್ಯತಾಭಾವಿಸಬಾರದೆಂದು ಶಾಸಕ ಡಿ.ಎಸ್‌.ಹೂಲಗೇರಿ ಹೇಳಿದರು.
Vijaya Karnataka Web the stepmother of hattie town has no attitude mla
ಹಟ್ಟಿ ಪಟ್ಟಣಕ್ಕೆ ಮಲತಾಯಿ ಧೋರಣೆ ತೋರಿಲ್ಲ: ಶಾಸಕ


ಪಟ್ಟಣದ ಪ್ರಾಥಮಿಕ ಆರೋಗ್ಯಕೇಂದ್ರದ ಬಳಿ ಪಾಮನಕಲ್ಲೂರು ಕ್ರಾಸ್‌- ಚಿಂಚರಕಿ ರಸ್ತೆಯ 1 ಕೋಟಿ 21 ಲಕ್ಷ ರೂ. ವೆಚ್ಚದ 1.5 ಕಿ.ಮೀ.ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಶನಿವಾರ ಮಾತನಾಡಿದರು.

ಪಾಮನಕಲ್ಲೂರು ಕ್ರಾಸ್‌ನಿಂದ ಚಿಂಚರಕಿ ರಸ್ತೆಯ 1.5 ಕಿ.ಮೀ. ಸದ್ಯ ಸುಧಾರಣೆ ಡಿಎಂಎಫ್‌ ಫಂಡ್‌ನಿಂದ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಇಷ್ಟರಲ್ಲಿಇನ್ನೊಂದಿಷ್ಟು ಅನುದಾನ ಬರಲಿದ್ದು ಚಿಂಚರಕಿವರೆಗೆ ರಸ್ತೆ ಸುಧಾರಣೆ ನಡೆಯಲಿದೆ. ನಗನೂರು ಕ್ರಾಸ್‌ನಿಂದ ನಿಲೋಗಲ್‌ರೆಗಿನ 3 ಕಿ.ಮೀ.ರಸ್ತೆ ಕಾಮಗಾರಿ ಸಹ ಇಷ್ಟರಲ್ಲಿಆರಂಭಗೊಳ್ಳಲಿದೆ. ಸ್ಥಳೀಯ ಪಟ್ಟಣದ ರಸ್ತೆಗಳ ಅಭಿವೃದ್ಧಿಗೆ ಮುಖ್ಯಮಂತ್ರಿಗಳ ನಗರೋತ್ಥಾನದಲ್ಲಿಅನುದಾನ ಬಂದಿದ್ದು ಟೆಂಡರ್‌ ಹಂತದಲ್ಲಿದೆ. ಶಾಶ್ವತ ಕುಡಿವ ನೀರಿಗಾಗಿ ಡಿಎಂಎಫ್‌ ನಿಧಿಯಿಂದ ಹಣ ಒದಗಿಸಲಾಗಿದ್ದು ಇದು ಸಹ 2 ತಿಂಗಳಲ್ಲಿಟೆಂಡರ್‌ ನಡೆದು ಕಾಮಗಾರಿ ಆರಂಭಗೊಳ್ಳಲಿದೆ ಎಂದು ತಿಳಿಸಿದರು.

ತಾಲೂಕು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಭೂಪನಗೌಡ ಕರಡಕಲ್‌, ಸ್ಥಳೀಯ ಮುಖಂಡರಾದ ಶಂಕರಗೌಡ ಬಳಗಾನೂರು, ಶಾಂತಪ್ಪ ಅನ್ವರಿ, ನರಸಿಂಗ್‌ಭಾನ್‌ ಠಾಕೂರು, ಅಹ್ಮದ್‌ಬಾಬಾ, ಸಿರಾಜುದ್ದೀನ್‌, ಇಸ್ಮಾಹಿಲ್‌ ಖಾದ್ರಿ ಗೋರಿ, ಪ.ಪಂ.ಮುಖ್ಯಾಧಿಕಾರಿ ದುರುಗಪ್ಪ ಹಗೇದಾಳ, ವೈದ್ಯಾಧಿಕಾರಿ ಲಕ್ಷಿತ್ರ್ಮೕಕಾಂತ, ಪಿಡಬ್ಲುತ್ರ್ಯಡಿ ಇಲಾಖೆ ಜೆಇ ಸಂದೀಪ್‌ ಸೇರಿ ಇತರರಿದ್ದರು. ಸೈಯದ್‌ ಶಂಶುದ್ದೀನ್‌ ನಿರ್ವಹಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ