ಆ್ಯಪ್ನಗರ

ಸಂಪೂರ್ಣ ಬತ್ತಿ ಮುಂಡರಗಿ ಕೆರೆ

ಇಲ್ಲಿಗೆ ಹತ್ತಿರವಿರುವ ಗಲಗ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಮುಂಡರಗಿ ಕೆರೆ ಈ ವರ್ಷ ಸಂಪೂರ್ಣ ಬತ್ತಿ ಹೋಗಿದೆ.

Vijaya Karnataka 2 Jun 2019, 5:00 am
ಜಾಲಹಳ್ಳಿ : ಇಲ್ಲಿಗೆ ಹತ್ತಿರವಿರುವ ಗಲಗ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಮುಂಡರಗಿ ಕೆರೆ ಈ ವರ್ಷ ಸಂಪೂರ್ಣ ಬತ್ತಿ ಹೋಗಿದೆ.
Vijaya Karnataka Web the whole dump is a lake
ಸಂಪೂರ್ಣ ಬತ್ತಿ ಮುಂಡರಗಿ ಕೆರೆ


ಪ್ರತಿ ವರ್ಷ ಬೇಸಿಗೆಯಲ್ಲಿ ಕೆರೆಯಲ್ಲಿ ಒಂದು ಅಡಿಗೂ ಹೆಚ್ಚು ನೀರಿರುತ್ತಿತ್ತು. ಈ ವರ್ಷ ಮಳೆ ಕಡಿಮೆ ಇರುವುದರಿಂದ ಕೆರೆಯಲ್ಲಿ ನೀರು ಸಂಪೂರ್ಣ ಬತ್ತಿ ಹೋಗಿದೆ. ಇದರಿಂದಾಗಿ ಮುಂಡರಗಿ, ಪಂದ್ಯಾನ, ಸಮುದ್ರ ಗ್ರಾಮಗಳ ತೆರೆದ ಬಾವಿಗಳಲ್ಲಿ ನೀರು ತಳಮಟ್ಟಕ್ಕೆ ಹೋಗಿವೆ. ಅಲ್ಲದೆ ಕೊಳವೆ ಬಾವಿಗಳಲ್ಲಿ ಕೂಡ ಅಂತರ್ಜಲ ಕುಸಿದು ನೀರು ಕಡಿಮೆಯಾಗಿದೆ.

ಇದರಿಂದ ದನ ಕರುಗಳಿಗೆ ಕುಡಿಯುವ ನೀರಿನ ತೊಂದರೆಯಾಗಿದೆ. ಕಳೆದ 30 ವರ್ಷಗಳಿಂದ ಮುಂಡಗಿ ಕೆರೆ ಬತ್ತಿದ ಇತಿಹಾಸವಿಲ್ಲ. ಪ್ರತಿವರ್ಷ ಕೆರೆ ತುಂಬಿದಾಗ ಮೀನು ಸಾಕಾಣಿಕೆ ಮಾಡಿ ಸರ್ಕಾರಕ್ಕೆ 15 ರಿಂದ 20 ಲಕ್ಷ ರೂ.ಗಳಿಗೆ ಮೀನಿನ ಆದಾಯ ಬರುತ್ತಿತ್ತು. ಈ ವರ್ಷ ಕೆರೆ ಬತ್ತಿದ್ದರಿಂದ ಮೀನಿನ ಸಾಕಾಣಿಕೆಗೆ ತೊಂದರೆಯಾಗಿದೆ ಎಂದು ಮುಂಡರಗಿ ಗ್ರಾಮದ ರೈತರು ತಿಳಿಸಿದರು


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ