ಆ್ಯಪ್ನಗರ

ಟ್ರಂಪ್‌ ಪ್ರತಿಕೃತಿ ದಹಿಸಿ ಪ್ರತಿಭಟನೆ

ಅಮೇರಿಕದ ಅಧ್ಯಕ್ಷ ಟ್ರಂಪ್‌ ಭಾರತಕ್ಕೆ ಆಗಮಿಸುವುದನ್ನು ವಿರೋಧಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಶುಕ್ರವಾರ ಪ್ರತಿಕೃತಿ ದಹನ ಮಾಡಿ, ಪ್ರತಿಭಟನೆ ನಡೆಸಲಾಯಿತು.

Vijaya Karnataka 22 Feb 2020, 5:00 am
ಸಿಂಧನೂರು: ಅಮೇರಿಕದ ಅಧ್ಯಕ್ಷ ಟ್ರಂಪ್‌ ಭಾರತಕ್ಕೆ ಆಗಮಿಸುವುದನ್ನು ವಿರೋಧಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಶುಕ್ರವಾರ ಪ್ರತಿಕೃತಿ ದಹನ ಮಾಡಿ, ಪ್ರತಿಭಟನೆ ನಡೆಸಲಾಯಿತು.
Vijaya Karnataka Web trump protests over burning of replicas
ಟ್ರಂಪ್‌ ಪ್ರತಿಕೃತಿ ದಹಿಸಿ ಪ್ರತಿಭಟನೆ


2002ರಲ್ಲಿಗುಜರಾತ್‌ ನರಮೇಧದ ನಂತರ ನರೇಂದ್ರ ಮೋದಿಯವರಿಗೆ ತನ್ನ ದೇಶ ಪ್ರವೇಶ ನಿರಾಕರಿಸಿದ್ದ ಅಮೇರಿಕಾ, ಮೋದಿಯವರು ಭಾರತದ ಪ್ರಧಾನಿಯಾಗುತ್ತಿದ್ದಂತೆಯೇ ಸ್ವಾಗತಿಸಿ, ಸನ್ಮಾನಿಸಿ ಹೌಡಿ ಮೋದಿ ಎಂದು ಹೊಗಳಿ ಪುಸಲಾಯಿಸಲಾಯಿತು. ಈಗ ಅಮೇರಾಕದ ಅಧ್ಯಕ್ಷ ಟ್ರಂಪ್‌ರನ್ನು ಮೋದಿ ಸ್ವಾಗತಿಸಿದ್ದಾರೆ. ಟ್ರಂಪ್‌ ಅವರ ಭೇಟಿಯು ಅಮೇರಿಕಾ ವಸ್ತುಗಳನ್ನು ಖರೀದಿಸಬೇಕು ಎಂಬ ಒತ್ತಾಯದ ಉದ್ದೇಶ ಹೊಂದಿದೆ. ಅಮೇರಿಕಾ-ಭಾರತದ ಈ ಒಪ್ಪಂದಗಳು ದ್ವಿ ಪಕ್ಷೀಯ ಸಮಾನ ಹಿತಾಸಕ್ತಿಗಳಿಂದ ಕೂಡಿರದೇ, ಅಮೇರಿಕಾಕ್ಕೆ ಮಾತ್ರ ಲಾಭ ಮಾಡಿ, ಭಾರತಕ್ಕೆ ತೀವ್ರ ನಷ್ಟವಾಗಲಿದೆ. ರಾಯಿಟರ್ಸ್ ವರದಿ ಪ್ರಕಾರ, ಅಮೇರಿಕಾ ತನ್ನ ಹಾಲು ಉತ್ಪನ್ನಗಳನ್ನು ಮತ್ತು ಚಿಕನ್‌ ಅನ್ನು ಈಗಿರುವ ಶೇ.100ರಷ್ಟು ಸುಂಕ ತೆಗೆದುಹಾಕಿ ಆಮದು ಮಾಡಿಕೊಳ್ಳಲು ಭಾರತವನ್ನು ಒತ್ತಾಯಿಸುತ್ತಿದೆ. ಇದರಿಂದ 8 ಕೋಟಿ ಹೈನುಗಾರಿಕೆಯ ರೈತರು ಮತ್ತು ಕುಕ್ಕಟ ಉದ್ಯಮ ದಿವಾಳಿಯಾಗಲಿದೆ. ಈ ಎರಡರಲ್ಲಿಭಾರತ ಸ್ವಾವಲಂಬಿಯಾಗಿದೆ. ಆಮದು ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಜೂನ್‌ 5, 2019ರಂದು ಜಿಎಸ್‌ಟಿ ತೆರಿಗೆ ವಿನಾಯಿತಿ ತೆಗೆದ ಹಾಕಿ ಭಾರತದ ಉಕ್ಕು, ಅಲ್ಯುಮಿನಿಯಂ ಮತ್ತಿತರೆ ಸರಕುಗಳನ್ನು ಅಮೇರಿಕಾಕ್ಕೆ ರಫ್ತಾಗುವಂತೆ ಮಾಡಿದೆ. ಅಮೇರಿಕಾ 2019ರಲ್ಲಿಭಾರತದ ವಿರುದ್ದ ಡಬ್ಲೂತ್ರ್ಯಟಿಒನಲ್ಲಿದೂರು ಸಲ್ಲಿಸಿ, ಭಾರತವನ್ನು ಅಭಿವೃದ್ಧಿ ದೇಶಗಳ ಪಟ್ಟಿಯಿಂದ ತೆಗೆದು ಹಾಕುವಂತೆ ಒತ್ತಾಯಿಸಿದೆ. ಇದರಿಂದ ದೇಶಕ್ಕೆ ತುಂಬಲಾರದ ಆರ್ಥಿಕ ನಷ್ಟ ಉಂಟಾಗಿದೆ. ಹೀಗೆ ಅಮೇರಿಕಾದಿಂದ ಭಾರತಕ್ಕೆ ಹೆಚ್ಚಿನ ಅನ್ಯಾಯ ವಾಗುತ್ತಿದೆ. ಹೀಗಾಗಿ ಟ್ರಂಪ್‌ ಭೇಟಿ ನೀಡುತ್ತಿರುವುದನ್ನು ವಿರೋಧಿಸುವುದಾಗಿ ಸಂಘಟಕರು ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡರಾದ ಎಸ್‌.ದೇವೇಂದ್ರಗೌಡ, ಡಿ.ಎಚ್‌.ಕಂಬಳಿ, ಚಂದ್ರಶೇಖರ ಗೊರಬಾಳ, ವೆಂಕನಗೌಡ ಗದ್ರಟಗಿ, ಶರಣಪ್ಪ ಮಳ್ಳಿ, ಬಸವರಾಜ ಬಾದರ್ಲಿ, ನಾಗರಾಜ ಪೂಜಾರ, ಚಂದ್ರಪ್ಪ, ನರಸಿಂಹಪ್ಪ, ಕೆ.ಮರಿಯಪ್ಪ, ಸಮದ್‌ ಚೌದ್ರಿ, ಅಶೋಕ ನಂಜಲದಿನ್ನಿ ಸೇರಿ ಹಲವರು ಪಾಲ್ಗೊಂಡಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ