ಆ್ಯಪ್ನಗರ

ಮೊರಾರ್ಜಿ ವಸತಿ ಶಾಲೆಗೆ ಮಟ್ಟೂರು ಭೇಟಿ

ಕಳೆದ 13 ವರ್ಷಗಳಿಂದ ವಿದ್ಯಾರ್ಥಿಗಳು ಸ್ವಂತ ಕಟ್ಟಡವಿಲ್ಲದೇ ಬಾಡಿಗೆ ಕಟ್ಟಡದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವುದು ಬೇಸರದ ಸಂಗತಿ. ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳ ಜತೆ ಮಾತನಾಡಿ ಕಟ್ಟಡ ಮಂಜೂರು ಮಾಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ವಿಧಾನ ಪರಿಷತ್‌ ಸದಸ್ಯ ಶರಣಪ್ಪ ಮಟ್ಟೂರು ಭರವಸೆ ನೀಡಿದರು.

Vijaya Karnataka 12 Jun 2019, 3:29 pm
ಮಸ್ಕಿ : ಕಳೆದ 13 ವರ್ಷಗಳಿಂದ ವಿದ್ಯಾರ್ಥಿಗಳು ಸ್ವಂತ ಕಟ್ಟಡವಿಲ್ಲದೇ ಬಾಡಿಗೆ ಕಟ್ಟಡದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವುದು ಬೇಸರದ ಸಂಗತಿ. ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳ ಜತೆ ಮಾತನಾಡಿ ಕಟ್ಟಡ ಮಂಜೂರು ಮಾಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ವಿಧಾನ ಪರಿಷತ್‌ ಸದಸ್ಯ ಶರಣಪ್ಪ ಮಟ್ಟೂರು ಭರವಸೆ ನೀಡಿದರು.
Vijaya Karnataka Web vist to morarji residential school
ಮೊರಾರ್ಜಿ ವಸತಿ ಶಾಲೆಗೆ ಮಟ್ಟೂರು ಭೇಟಿ


ಪಟ್ಟಣದ ಬಾಳೆಕಾಯಿ ಮಿಲ್‌ನಲ್ಲಿ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಮಂಗಳವಾರ ದಿಢೀರ್‌ ಭೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆ ಅಲಿಸಿ ಮಾತನಾಡಿದ ಅವರು, ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಂದ ಹೆಚ್ಚಿನ ಮಾಹಿತಿ ಪಡೆದು ಸಚಿವರ ಗಮನಕ್ಕೆ ತರಲಾಗುವುದು ಎಂದರು.

ಈ ಬಗ್ಗೆ ವಸತಿ ಶಿಕ್ಷ ಣ ಸಂಘದ ನಿರ್ದೇಶಕರಿಗೆ ಮೊಬೈಲ್‌ ಕರೆಯ ಮೂಲಕ ಸಂಪರ್ಕಿಸಿ ಹೈ.ಕ ಭಾಗದಲ್ಲಿ ಬೇಸಿಗೆಯಲ್ಲಿ ವಿಪರೀತ ಸೆಕೆ ಇರುತ್ತದೆ. ಇಂತಹ ವೇಳೆ ವಸತಿ ಶಾಲೆಯ ಮಕ್ಕಳು ಟಿನ್‌ ಶೆಡ್‌ಗಳಲ್ಲಿ ವಾಸ ಮಾಡುತ್ತಿದ್ದಾರೆ ಎಂದು ಅಕ್ರೋಶ ವ್ಯಕ್ತಪಡಿಸಿದರು.

ವಸತಿ ಶಿಕ್ಷ ಣ ಸಂಸ್ಥೆ ಸರ್ಕಾರದ ಅಂಗ ಸಂಸ್ಥೆಯಾಗಿದ್ದು, ಇದನ್ನು ಶಿಕ್ಷ ಣ ಇಲಾಖೆ ಜತೆಗೆ ವಿಲೀನ ಮಾಡಲು ಕಳೆದ ತಿಂಗಳು ವಸತಿ ಶಿಕ್ಷ ಣ ಸಿಬ್ಬಂದಿಗಳು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದರು. ಸಮಸ್ಯೆಗಳ ಬಗ್ಗೆ ಸಂಬಂಧ ಪಟ್ಟ ಸಚಿವರ ಗಮನಕ್ಕೂ ತರಲಾಗಿದೆ. ಅಧಿಕಾರಗಳ ಜತೆ ಚರ್ಚಿಸಿ ಮುಂದಿನ ತಿಂಗಳ ಅವದಿಯೊಳಗಾಗಿ ನಿಮ್ಮ ಸಮಸ್ಯೆ ಪರಿಹರಿಸಲಾಗುವುದು ಎಂದು ಶಿಕ್ಷ ಕರಿಗೆ ಭರವಸೆ ನೀಡಿದರು.

ಪ್ರಾಚಾರ್ಯ ಯಂಕೋಬ ದೇವಾಪೂರು, ಶಿಕ್ಷ ಕರಾದ ಸುಭಾಷ ಚಂದ್ರ, ಇಬ್ರಾಹೀಂ ಬಾಷಾ, ಶರಣಪ್ಪ, ಪ್ರಭಾರಿ ವಸತಿ ನಿಲಯ ಪಾಲಕಿ ಶರೀಫಾಬೇಗಂ ಇತರರಿದ್ದರು.

ಆರ್‌ಸಿಎಚ್‌11ಎಂಎಸ್‌ಕೆ02

ಮಸ್ಕಿ ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ವಿಧಾನ ಪರಿಷತ್‌ ಸದಸ್ಯ ಶರಣಪ್ಪ ಮಟ್ಟೂರು ಮಂಗಳವಾರ ಭೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆ ಅಲಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ