ಆ್ಯಪ್ನಗರ

ಆಮೀಷಕ್ಕೆ ಒಳಗಾಗದೆ ಮತ ಚಲಾಯಿಸಿ

ಮತದಾನ ನಮ್ಮ ಹಕ್ಕು, ಅದನ್ನು ನಾವು ಚಲಾಯಿಸಬೇಕು, ಪ್ರತಿಯೊಬ್ಬ ಮತದಾರನು ಯಾವುದೇ ಆಮಿಷಕ್ಕೊಳಗಾಗದೆ ಮತ ಚಲಾಯಿಸಬೇಕೆಂದು ಪ.ಪಂ.ಮುಖ್ಯಾಧಿಕಾರಿ ಈರಣ್ಣ ಜಗ್ಲಿ ಹೇಳಿದರು.

Vijaya Karnataka 1 Mar 2019, 5:08 pm
ಕವಿತಾಳ : ಮತದಾನ ನಮ್ಮ ಹಕ್ಕು, ಅದನ್ನು ನಾವು ಚಲಾಯಿಸಬೇಕು, ಪ್ರತಿಯೊಬ್ಬ ಮತದಾರನು ಯಾವುದೇ ಆಮಿಷಕ್ಕೊಳಗಾಗದೆ ಮತ ಚಲಾಯಿಸಬೇಕೆಂದು ಪ.ಪಂ.ಮುಖ್ಯಾಧಿಕಾರಿ ಈರಣ್ಣ ಜಗ್ಲಿ ಹೇಳಿದರು.
Vijaya Karnataka Web vote without enthusiasm
ಆಮೀಷಕ್ಕೆ ಒಳಗಾಗದೆ ಮತ ಚಲಾಯಿಸಿ


ಅವರು ಪಟ್ಟಣದಲ್ಲಿ ತಾಲೂಕಾಡಳಿತ ಸಿರವಾರ, ನಾಡ ಕಾರ್ಯಾಲಯ ಕವಿತಾಳ, ಪ.ಪಂ, ಬಾಲಕರ ಮತ್ತು ಬಾಲಕಿಯರ ಸರಕಾರಿ ಪ್ರೌಢಶಾಲೆಯಿಂದ ಗುರುವಾರ ಹಮ್ಮಿಕೊಂಡಿದ್ದÜ ಮತದಾನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

ಈಗಾಗಲೇ ಪಟ್ಟಣದ ಜನತೆಗೆ ಮತದಾನ ದಿನದಂದು ಮತ ಚಲಾಯಿಸುವ ವಿವಿಪ್ಯಾಟ್‌ ಬಗ್ಗೆ ತಿಳಿಸಲಾಗಿದೆ. ಲೋಕಸಭೆ ಚುನಾವಣೆಯಲ್ಲಿ ಯಾವ ಮತದಾರನೂ ಮತ ಚಲಾಯಿಸುವುದರಿಂದ ದೂರ ಉಳಿಯಬಾರದೆಂದರು. ಮತದಾನದ ಮಹತ್ವ ತಿಳಿಸಿದರು.

ಶಾಲೆಗಳ ಆವರಣದಿಂದ ಪ್ರಾರಂಭವಾದ ಜಾಥಾ ಪಟ್ಟಣದ ಮುಖ್ಯರಸ್ತೆಗೆ ಆಗಮಿಸಿ ಸಂತೆ ಮಾರುಕಟ್ಟೆ ಮೂಲಕ ಕನಕ ವೃತ್ತದಿಂದ ಪುನಃ ಶಾಲೆಗೆ ಬಂದು ತಲುಪಿತು. ಜಾಥಾದಲ್ಲಿ ವಿದ್ಯಾರ್ಥಿಗಳು ಮತದಾನ ಜಾಗೃತಿಯ ನಾನಾ ಘೋಷಣೆಗಳನ್ನು ಕೂಗಿ ಜನರಲ್ಲಿ ಜಾಗೃತಿ ಮೂಡಿಸಿದರು.

ಕಂದಾಯ ನಿರೀಕ್ಷ ಕ ಮಲ್ಲಿಕಾರ್ಜುನ, ಕ.ರಾ.ಪ್ರಾ.ಶಾ.ಶಿ.ಸಂಘದ ಸಿರವಾರ ತಾಲೂಕು ಉಪಾಧ್ಯಕ್ಷ ಮಲ್ಲಿಕಾರ್ಜುನ, ಗ್ರಾಮ ಲೆಕ್ಕಾಧಿಕಾರಿಗಳಾದ ಶಿವಕುಮಾರ, ಸದಾಖಲಿ, ಮುಖಂಡರಾದ ವೆಂಕಟರಾವ್‌ ದಾವಣಗೆರೆ, ಲಾಳ್ಯಪ್ಪ ಎಲ್‌.ಕೆ, ಶಿಕ್ಷ ಕರಾದ ಎಚ್‌ ಮಲ್ಲಪ್ಪ, ಮುದುಕಪ್ಪ, ಸಂಗಪ್ಪ, ಆರೋಗ್ಯಪ್ಪ, ಶಾಂತಪ್ಪ, ಆಂಜನೇಯ, ಹಮೀದ್‌, ಗಿರೀಶ ಅಂಗಡಿ, ಶಿವನಗೌಡ, ಪ.ಪಂ.ಸಿಬ್ಬಂದಿ ಮಾರ್ಕ್‌, ಅಕ್ಬರಸಾಬ್‌, ನಾಡ ಕಾರ್ಯಾಲಯದ ನೌಷದ್‌ ಸೇರಿ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ