ಆ್ಯಪ್ನಗರ

ಸುಗಮ ಸಂಚಾರಕ್ಕಾಗಿ ವಾರದ ಸಂತೆ ಸ್ಥಳಾಂತರ

ಜಿಲ್ಲೆಯ ಶಕ್ತಿನಗರ ಗ್ರಾಮದ ಒಂದನೇ ಕ್ರಾಸ್‌ ಹತ್ತಿರದ ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿ, ಪ್ರತಿ ಭಾನುವಾರ ನಡೆಯುತ್ತಿದ್ದ ಸಂತೆ ಮಾರುಕಟ್ಟೆಯನ್ನು ಸಂಚಾರ ಅಡಚಣೆ ಹಿನ್ನೆಲೆ ಪೊಲೀಸ್‌ ಅಧಿಕಾರಿಗಳು ಭಾನುವಾರ ಬೇರೆಡೆ ಸ್ಥಳಾಂತರಿಸಿದರು.

Vijaya Karnataka 22 Oct 2019, 5:00 am
ರಾಯಚೂರು: ಜಿಲ್ಲೆಯ ಶಕ್ತಿನಗರ ಗ್ರಾಮದ ಒಂದನೇ ಕ್ರಾಸ್‌ ಹತ್ತಿರದ ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿ, ಪ್ರತಿ
Vijaya Karnataka Web weekly displacement for smooth traffic
ಸುಗಮ ಸಂಚಾರಕ್ಕಾಗಿ ವಾರದ ಸಂತೆ ಸ್ಥಳಾಂತರ


ಭಾನುವಾರ ನಡೆಯುತ್ತಿದ್ದ ಸಂತೆ ಮಾರುಕಟ್ಟೆಯನ್ನು ಸಂಚಾರ ಅಡಚಣೆ ಹಿನ್ನೆಲೆ ಪೊಲೀಸ್‌ ಅಧಿಕಾರಿಗಳು ಭಾನುವಾರ ಬೇರೆಡೆ ಸ್ಥಳಾಂತರಿಸಿದರು.

ಮುಖ್ಯ ರಸ್ತೆಯ ಎರಡೂ ಬದಿ ನಡೆಯುತ್ತಿದ್ದ ಸಂತೆ ಮಾರುಕಟ್ಟೆಯಿಂದಾಗಿ ನಿತ್ಯ ಸುಗಮ ಸಂಚಾರಕ್ಕೆ ಅಡ್ಡಿಯಾಗಿತ್ತು. ಬೆಳಗಿನ ಜಾವ 5.30ರಿಂದ ಆರಂಭವಾಗುವ ಸಂತೆ ಸಂಜೆಯವರೆಗೆ ನಡೆಯುತ್ತಿತ್ತು. ಇದರಿಂದ ಜನದಟ್ಟಣೆ ತೀವ್ರಗೊಳ್ಳುತ್ತಿತ್ತು. ಅ.13ರಂದು ಬೆಳಗಿನ ಜಾವ ಸಂತೆ ಮಾರುಕಟ್ಟೆಗೆ ಆಗಮಿಸಿದ್ದ ಸುಧಾಬಾಯಿ ಸಂತೆಯಿಂದ ರಸ್ತೆ ಕಡೆಗೆ ದಾಟುತ್ತಿರುವಾಗ ಹೈದರಾಬಾದ್‌ ಮಾರ್ಗವಾಗಿ ತೆರಳುತ್ತಿದ್ದ ಲಾರಿ ಹಾದು ಮೃತಪಟ್ಟಿದ್ದರು.

ನಿರ್ಧಾರ; ರಾಷ್ಟ್ರೀಯ ಹೆದ್ದಾರಿಯಲ್ಲಿಸಂತೆ ನಡೆಸುವುದರಿಂದ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ಮತ್ತು ಸುಗಮ ಸಂಚಾರಕ್ಕಾಗಿ ಅನುವು ಮಾಡಿಕೊಡುವ ಉದ್ದೇಶದಿಂದ ಸಂತೆಯನ್ನು

ಹೆದ್ದಾರಿ ಪಕ್ಕದಿಂದ ಹೆದ್ದಾರಿ ಪಕ್ಕದ ಪಶ್ಚಿಮ ದಿಕ್ಕಿನಲ್ಲಿರುವ ಬಯಲು ಜಾಗಕ್ಕೆ ಸ್ಥಳಾಂತರಿಸಲು ಪೊಲೀಸ್‌ ಅಧಿಕಾರಿಗಳು ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಸರ್ವಸದಸ್ಯರು, ಸಾರ್ವಜನಿಕರೊಂದಿಗೆ ಸಭೆ ನಡೆಸಿ ಒಮ್ಮತ ಅಭಿಪ್ರಾಯಕ್ಕೆ ಬಂದು ನಿರ್ಧಾರ ತೆಗೆದುಕೊಂಡಿದ್ದಾರೆ.

ಸಹಕರಿಸಿ: ಮುಂದಿನ ದಿನಗಳಲ್ಲಿಸಂತೆಗೆ ಆಗಮಿಸುವ ರಾಯಚೂರು ತಾಲೂಕಿನ ಶಕ್ತಿನಗರ, ದೇವಸೂಗೂರು, ಯದ್ಲಾಪುರ, ಕಾಡ್ಲೂರು, ಕರೇಕಲ್‌, ಬೇವಿನಬೆಂಚಿ, ಗುರ್ಜಾಪುರ, ಗಂಜಳ್ಳಿ, ಕೂಡ್ಲೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ಸ್ಥಳಾಂತರಿಸಿದ ಸಂತೆ ಮಾರುಕಟ್ಟೆಯನ್ನು ಉಪಯೋಗಿಸಿಕೊಂಡು ಸಹಕರಿಸಬೇಕೆಂದು ಜಿಲ್ಲಾಪೊಲೀಸ್‌ ಅಧೀಕ್ಷಕರು ಪ್ರಕಟಣೆಯಲ್ಲಿಕೋರಿದ್ದಾರೆ.

ಸ್ಥಳಾಂತರ ಸಂದರ್ಭದಲ್ಲಿಪೊಲೀಸ್‌ ಉಪಾಧೀಕ್ಷಕ ಎಸ್‌.ಎಚ್‌.ಶೀಲವಂತ, ಗ್ರಾಮೀಣ ವೃತ್ತದ ಸಿಪಿಐ ಅಂಬಾರಾಯ ಎಂ.ಕಮಾನಮನಿ, ಶಕ್ತಿನಗರ ಠಾಣೆ ಪಿಎಸ್‌ಐ ರಾಮಚಂದ್ರ ಸೇರಿದಂತೆ ಹಲವರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ