ಆ್ಯಪ್ನಗರ

ಕಾರ್ಮಿಕರ ಉದ್ಯಾನವನ ಮದ್ಯವಸನಿಗಳ ತಾಣ

ಕಾರ್ಮಿಕರ ಹಾಗೂ ಕಾರ್ಮಿಕ ಮಕ್ಕಳ ಅನುಕೂಲಕ್ಕಾಗಿ ಹಟ್ಟಿಚಿನ್ನದಗಣಿ ಕಂಪನಿ ನಿರ್ಮಿಸಿರುವ ಉದ್ಯಾನ ನಿರ್ವಹಣೆ ಕೊರತೆಯಿಂದ ಹಾಳಾಗಿದ್ದು, ಮದ್ಯವ್ಯಸನಿಗಳ ತಾಣವಾಗಿದೆ ಪರಿಣಮಿಸಿದೆ.

Vijaya Karnataka 30 Sep 2018, 5:00 am
ಹಟ್ಟಿಚಿನ್ನದಗಣಿ : ಕಾರ್ಮಿಕರ ಹಾಗೂ ಕಾರ್ಮಿಕ ಮಕ್ಕಳ ಅನುಕೂಲಕ್ಕಾಗಿ ಹಟ್ಟಿಚಿನ್ನದಗಣಿ ಕಂಪನಿ ನಿರ್ಮಿಸಿರುವ ಉದ್ಯಾನ ನಿರ್ವಹಣೆ ಕೊರತೆಯಿಂದ ಹಾಳಾಗಿದ್ದು, ಮದ್ಯವ್ಯಸನಿಗಳ ತಾಣವಾಗಿದೆ ಪರಿಣಮಿಸಿದೆ.
Vijaya Karnataka Web RAC-RCH28HGM P1


ಕಳೆದ 2002ನೇ ಸಾಲಿನಲ್ಲಿ ಸಾರ್ವಜನಿಕ ಉದ್ಯಾನ ನಿರ್ಮಿಸಲಾಗಿದೆ. ಮಕ್ಕಳ ಆಟೋಟಕ್ಕೆ ನಾನಾ ಸಾಮಗ್ರಿಗಳನ್ನು ಅಳವಡಿಸಲಾಗಿದೆ. ಆರಂಭದಲ್ಲಿ ಉದ್ಯಾನದ ಕಾಳಜಿ ವಹಿಸಲಾಗಿತ್ತು. ನಂತರ ನಿರ್ಲಕ್ಷ್ಯ ತೋರಿರುವ ಪರಿಣಾಮ ಪಾಳುಬಿದ್ದಿದ್ದು, ಕಾರ್ಮಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಹಸಿರು ಹೋಗಿ ಒಣಗಿದ ಹುಲ್ಲು: ಗಣಿ ಕಂಪನಿ ಆಡಳಿತವರ್ಗ ಉದ್ಯಾನÜದ ಮೇಲೆ ನಿರುತ್ಸಾಹ ತೋರಿದ ಪರಿಣಾಮ ಹಸಿರುಹೋಗಿ ಒಣಗಿದ ಹುಲ್ಲು ಕಾಣುತ್ತಿದೆ. ಉದ್ಯಾನÜದ ಸುತ್ತಲೂ ತಂತಿಬೇಲಿ ಹಾಕಿ ನಾನಾ ತಳಿ ಸಸ್ಯ, ಗಿಡ, ಮರಗಳು ನೋಡುಗರನ್ನು ಆಕರ್ಷಿಸುತಿತ್ತು. ಕೆಲ ವರ್ಷಗಳಿಂದ ಈ ಉದ್ಯಾನ ನಿರ್ವಹಣೆ ಮಾಡುವುದನ್ನು ಕೈ ಬಿಡಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಉದ್ಯಾನಕ್ಕೆ ನೀರು ಪೂರೈಕೆ ವ್ಯವಸ್ಥೆ ಕೂಡ ಸ್ಥಗಿತಗೊಂಡಿದೆ.

ಕುಡುಕರ ಅಡ್ಡೆ : ಉದ್ಯಾನದಲ್ಲಿ ಹಸಿರು ಕಂಗೊಳಿಸುವ ಬದಲಾಗಿ ಕುಡುಕರು ಎಲ್ಲೆಂದರಲ್ಲಿ ಬಿಸಾಡಿರುವ ಖಾಲಿ ಬಾಟಲ್‌, ಸಿಗರೇಟ್‌ ಕಾಣುತ್ತಿವೆ. ಉದ್ಯಾನದ ಸುತ್ತಲೂ ಹಾಕಿರುವ ತಂತಿ ಬೇಲಿ ಹಾಳಾಗಿದೆ. ಇದರಿಂದ ಮದ್ಯ ವ್ಯಸನಿಗಳು ನಾನಾ ಕಡೆಗಳಿಂದ ಉದ್ಯಾನ ಪ್ರವೇಶ ಮಾಡುವ ಮೂಲಕ ಕುಡುಕರ ಅಡ್ಡೆಯನ್ನಾಗಿಸಿಕೊಂಡಿದ್ದಾರೆ.

ಚಿನ್ನದಗಣಿ ಕಂಪನಿ ಆಡಳಿ ವರ್ಗ ಹಾಗೂ ಅಧಿಕಾರಿಗಳ ವಾಸವಾಗಿರುವ ಕಾಲೊನಿಗಳಲ್ಲಿ ಮಾತ್ರ ಉದ್ಯಾನಗಳು ಹಸಿರಿನಿಂದ ಕಂಗೊಳಿಸುತ್ತಿವೆ. ಕಾರ್ಮಿಕರಿಗಾಗಿ ನಿರ್ಮಿಸಿರುವ ಉದ್ಯಾನಗಳು ಪಾಳುಬಿದ್ದಿವೆ. ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ. ಇದರಿಂದ ಸಮೀಪದ ಕ್ರೀಡಾ ಸಂಸ್ಥೆ ಹಿಂದು ಗಡೆಯ ಉದ್ಯಾನ ನಿರ್ವಹಣೆ ಇಲ್ಲದೇ ಬರಡಾಗಿದೆ. ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಕನ್ನಡಪರ ಸಂಘಟನೆ ಮುಖಂಡ ಮೌನೇಶ ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ