ಆ್ಯಪ್ನಗರ

ಹುಳ ತಿಂದ ಕಡಲೆ : ಆತಂಕ

ತಾಲೂಕಿನ ಹಿರೇಕೊಟ್ನೆಕಲ್‌ ರೈತ ಸಂಪರ್ಕ ಕೇಂದ್ರದಲ್ಲಿ ಹುಳ ತಿಂದ ಕಡಲೆ ಬೀಜ ವಿತರಿಸಲಾಗಿದ್ದು, ರೈತರು ಆತಂಕಗೊಳ್ಳುವಂತೆ ಮಾಡಿದೆ.

ವಿಕ ಸುದ್ದಿಲೋಕ 7 Oct 2016, 9:00 am

ಮಾನ್ವಿ; ತಾಲೂಕಿನ ಹಿರೇಕೊಟ್ನೆಕಲ್‌ ರೈತ ಸಂಪರ್ಕ ಕೇಂದ್ರದಲ್ಲಿ ಹುಳ ತಿಂದ ಕಡಲೆ ಬೀಜ ವಿತರಿಸಲಾಗಿದ್ದು, ರೈತರು ಆತಂಕಗೊಳ್ಳುವಂತೆ ಮಾಡಿದೆ.

ಒಂದು ಪ್ಯಾಕೇಟ್‌ನಲ್ಲಿ ಅರ್ಧ ಭಾಗ ಹುಳ ತಿಂದ ಕಡಲೆ ಬೀಜಗಳಿದ್ದು, ಒಂದು ವೇಳೆ ಈ ಬೀಜವನ್ನೇ ಬಿತ್ತನೆ ಮಾಡಿದರೆ ಮುಂದೆ ಇಳುವರಿ ಕಡಿಮೆ ಬರುವ ಭೀತಿ ರೈತರನ್ನು ಕಾಡುತ್ತಿದೆ.

ಮುಂಗಾರು ಮಳೆ ಸರಿಯಾದ ಸಮಯಕ್ಕೆ ಕೈ ಹಿಡಿಯದೆ ಭತ್ತ ನೆಲಕ್ಕಚ್ಚುವಂತೆ ಮಾಡಿತ್ತು. ಸೆಪ್ಟೆಂಬರ್‌ ಕೊನೆಯಲ್ಲಿ ಉತ್ತಮ ಮಳೆಯಾಗಿದ್ದು ಕಡಲೆ ಬಿತ್ತನೆಗೆ ಅನುಕೂಲವಾಗಿತ್ತು. ಆದರೆ ಕಳಪೆ ಬೀಜದಿಂದಾಗಿ ರೈತರಿಗೆ ದಿಕ್ಕು ತೋಚದಂತಾಗಿದೆ.

-----

Vijaya Karnataka Web worm eaten meat anxiety
ಹುಳ ತಿಂದ ಕಡಲೆ : ಆತಂಕ


ತಾಲೂಕಿನಲ್ಲಿ ಕಡಲೇ ಬೀಜ ಕೊರತೆ ಇದೆ. ಬೀಜ ವಿತರಣೆ ಕೇಂದ್ರದಿಂದ ಕೊನೆಯಲ್ಲಿ ವಿತರಿಸಲಾಗಿರುವ ಪ್ಯಾಕೇಟ್‌ಗಳಲ್ಲಿ ಹುಳು ತಿಂದಿರುವ ಬೀಜಗಳು ಪತ್ತೆಯಾಗಿರಬಹುದು. ಈ ಕುರಿತು ಪರಿಶೀಲಿಸುತ್ತೇನೆ.

- ನಜೀರ್‌ ಅಹಮದ್‌, ಕೃಷಿ ಸಹಾಯಕ ನಿರ್ದೇಶಕರು, ಮಾನ್ವಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ