ಆ್ಯಪ್ನಗರ

ಸೊಳ್ಳೆ ನಿಯಂತ್ರಣಕ್ಕೆ ಕೆರೆ, ಕಟ್ಟೆಗಳಿಗೆ ಮೀನುಗಳನ್ನು ಬಿಟ್ಟ ಇಲಾಖೆ

ಸೊಳ್ಳೆ ನಿಯಂತ್ರಿಸುವ ಸಲುವಾಗಿ ತಾಲೂಕಿನಲ್ಲಿರುವ ಕೆರೆ, ಕಟ್ಟೆಗಳಿಗೆ ಆರೋಗ್ಯ ಇಲಾಖೆ ವತಿಯಿಂದ ಮೀನಿನ ಮರಿಗಳನ್ನು ಬಿಡಲಾಗಿದೆ ಎಂದು ಆರೋಗ್ಯ ಶಿಕ್ಷ ಣಾಧಿಕಾರಿ ರಂಗನಾಥ್‌ ತಿಳಿಸಿದರು.

Vijaya Karnataka 4 Jan 2019, 5:00 am
ಮಾಗಡಿ: ಸೊಳ್ಳೆ ನಿಯಂತ್ರಿಸುವ ಸಲುವಾಗಿ ತಾಲೂಕಿನಲ್ಲಿರುವ ಕೆರೆ, ಕಟ್ಟೆಗಳಿಗೆ ಆರೋಗ್ಯ ಇಲಾಖೆ ವತಿಯಿಂದ ಮೀನಿನ ಮರಿಗಳನ್ನು ಬಿಡಲಾಗಿದೆ ಎಂದು ಆರೋಗ್ಯ ಶಿಕ್ಷ ಣಾಧಿಕಾರಿ ರಂಗನಾಥ್‌ ತಿಳಿಸಿದರು.
Vijaya Karnataka Web
ಸೊಳ್ಳೆ ನಿಯಂತ್ರಣಕ್ಕೆ ಕೆರೆ, ಕಟ್ಟೆಗಳಿಗೆ ಮೀನುಗಳನ್ನು ಬಿಟ್ಟ ಇಲಾಖೆ


ಪಟ್ಟಣದ ಹೊಸಪೇಟೆ ರಸ್ತೆಯಲ್ಲಿರುವ ಕಲ್ಯಾಣಿಗೆ ಗಪ್ಪಿ ಮತ್ತು ಗಾಂಬೂಸಿಯಾ ಮೀನುಮರಿಗಳನ್ನು ಬಿಟ್ಟ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ''ಸೊಳ್ಳೆಯಿಂದ ಮಲೇರಿಯಾ, ಡೆಂಗೆ, ಚಿಕುನ್‌ಗುನ್ಯಾ, ಮೆದುಳುಜ್ವರದಂತಹ ಮಾರಣಾಂತಿಕ ರೋಗಗಳು ಹರಡುತ್ತವೆ. ಸೊಳ್ಳೆ ಕಡಿತ ಸಣ್ಣದಾದರೂ ಅದರ ಪರಿಣಾಮ ಕೆಟ್ಟದಾಗಿರುತ್ತದೆ. ಈ ರೋಗಗಳಿಗೆ ನಿರ್ದಿಷ್ಟ ಚಿಕಿತ್ಸೆ ಇಲ್ಲದಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಮೀನುಗಳನ್ನು ಕೆರೆ, ಕಟ್ಟೆಗಳಿಗೆ ಬಿಡುವುದು ಪರಿಹಾರವಾಗಿದೆ. ಈ ನಿಟ್ಟಿನಲ್ಲಿ ಕೆರೆ, ಕಟ್ಟೆಗಳಲ್ಲಿ ಗಪ್ಪಿ ಹಾಗೂ ಗಂಬೂಸಿಯಾ ಮೀನಿನ ಮರಿಗಳನ್ನು ಬಿಡಲಾಗಿದೆ. ಮೀನಿನ ಮರಿಗಳು ಸೊಳ್ಳೆ ಲಾರ್ವಾ ಹಂತದಲ್ಲಿರುವಾಗಲೇ ತಿನ್ನುವುದರಿಂದ ಸೊಳ್ಳೆ ನಿಯಂತ್ರಣ ಸಾಧ್ಯವಾಗುತ್ತದೆ,'' ಎಂದು ತಿಳಿಸಿದರು.

ಹಿರಿಯ ಆರೋಗ್ಯ ಶಿಕ್ಷ ಣಾಧಿಕಾರಿ ರಾಜೇಂದ್ರ ಮಾತನಾಡಿ, ''ದೇಶದಲ್ಲಿ ಅನಾಫಿಲಿಸ್‌, ಈಡಿಸ್‌, ಕ್ಯೂಲೆಕ್ಸ್‌ ಸೇರಿದಂತೆ ಸುಮಾರು 25 ಸೊಳ್ಳೆ ಪ್ರಭೇದವಿದ್ದು, ಈ ಪೈಕಿ ಈಡಿಸ್‌ ಸೊಳ್ಳೆಯಿಂದ ಹರಡುವ ಡೆಂಗೆ ಮತ್ತು ಚಿಕೂನುಗುನ್ಯಾ ರೋಗಗಳು ಅತ್ಯಂತ ಮಾರಕವಾಗಿವೆ. ನೀರಿನಲ್ಲಿ ಕಂಡು ಬರುವ ಹುಳುಗಳನ್ನು ಬಾಲದ ಹುಳು ಎಂದು ತಪ್ಪಾಗಿ ಭಾವಿಸುತ್ತಿದ್ದು, ವಾಸ್ತವವಾಗಿ ಅವು ಸೊಳ್ಳೆ ಮರಿಗಳಾಗಿರುತ್ತವೆ. ಇಂತಹ ಸೊಳ್ಳೆ ಮರಿಗಳನ್ನು ನಿರ್ಮೂಲನ ಮಾಡಲು ನೆಲ್ಲಿಗುಡ್ಡದಿಂದ ಮೀನು ಮರಿಗಳನ್ನು ತಂದು ತಾಲೂಕಿನಲ್ಲಿರುವ 25 ಕೆರೆ, ಕಟ್ಟೆ, ಕಲ್ಯಾಣಿಗಳಿಗೆ ಬಿಡಲಾಗಿದೆ,'' ಎಂದು ಹೇಳಿದರು.

ಆರೋಗ್ಯ ಸಹಾಯಕರಾದ ತುಕಾರಾಮ್‌, ಮೀಸೆ ನಾಗಣ್ಣ, ಗುರುಸಿದ್ದಪ್ಪ, ನರಸಿಂಹ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ