ಆ್ಯಪ್ನಗರ

ಸಾಲ ಮಂಜೂರಿಗೆ ಲಂಚ ಪಡೆಯುತ್ತಿದ್ದ ಅಧಿಕಾರಿ ಎಸಿಬಿ ಬಲೆಗೆ

ಸಾಲ ಮಂಜೂರು ಮಾಡಿಕೊಡಲು ಫಲಾನುಭವಿಗಳಿಂದ ಲಂಚ ಪಡೆಯುತ್ತಿದ್ದ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಪ್ರಭಾರ ಉಪ ನಿರ್ದೇಶಕ ಗುರು ಸಿದ್ದಪ್ಪ ಎಸಿಬಿ ...

Vijaya Karnataka 29 May 2019, 5:00 am
ಚನ್ನಪಟ್ಟಣ: ಸಾಲ ಮಂಜೂರು ಮಾಡಿಕೊಡಲು ಫಲಾನುಭವಿಗಳಿಂದ ಲಂಚ ಪಡೆಯುತ್ತಿದ್ದ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಪ್ರಭಾರ ಉಪ ನಿರ್ದೇಶಕ ಗುರು ಸಿದ್ದಪ್ಪ ಎಸಿಬಿ ಬಲೆಗೆ ಬಿದ್ದಿದ್ದಾರೆ.
Vijaya Karnataka Web acb trap with bribe bribe officer
ಸಾಲ ಮಂಜೂರಿಗೆ ಲಂಚ ಪಡೆಯುತ್ತಿದ್ದ ಅಧಿಕಾರಿ ಎಸಿಬಿ ಬಲೆಗೆ


ಚನ್ನಪಟ್ಟಣದ ಶಾಂತ ಕುಮಾರ್‌ ಎಂಬವರಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ಗುರುಸಿದ್ದಪ್ಪ ಅವರನ್ನು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಮಂಗಳವಾರ ರೆಡ್‌ಹ್ಯಾಂಡಾಗಿ ಸೆರೆ ಹಿಡಿದಿದ್ದಾರೆ.

ಏನಿದು ಪ್ರಕರಣ?


ರಾಮನಗರದ ಜಿಲ್ಲಾ ಕೇಂದ್ರದಲ್ಲಿರುವ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯಿಂದ ಪ್ರಧಾನ ಮಂತ್ರಿ ಉದ್ಯೋಗ ಸೃಜನ ಯೋಜನೆಯಡಿ 10 ಲಕ್ಷ ರೂ. ಸಾಲ ಮಂಜೂರು ಮಾಡಿಕೊಡಲು ಚನ್ನಪಟ್ಟಣದ ಶಾಂತಕುಮಾರ್‌ ಬಳಿ ಗುರುಸಿದ್ದಪ್ಪ ಭಾರಿ ಮೊತ್ತದ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಶಾಂತಕುಮಾರ್‌ ಅವರು ಕಂತಿನಲ್ಲಿ ಕಮೀಷನ್‌ ಹಣ ನೀಡುವುದಾಗಿ ಒಪ್ಪಿಕೊಂಡಿದ್ದರು. ಈ ಬಗ್ಗೆ ಎಸಿಬಿ ಅಧಿಕಾರಿಗಳಿಗೆ ಶಾಂತಕುಮಾರ್‌ ದೂರು ನೀಡಿದ್ದರು. ಎಸಿಬಿ ಅಧಿಕಾರಿಗಳ ಹೆಣೆದ ಬಲೆ ಅನುಸಾರ ಶಾಂತ ಕುಮಾರ್‌ ಅವರು ರಾಮನಗರದಲ್ಲಿರುವ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಕಚೇರಿಗೆ ತೆರಳಿ ಗುರುಸಿದ್ದಪ್ಪ ಅವರಿಗೆ ಲಂಚದ ಹಣ ನೀಡಿದರು. ಆಗ ಸ್ಥಳದಲ್ಲೇ ಕಾದಿದ್ದ ಎಸಿಬಿ ಅಧಿಕಾರಿಗಳು ಗುರುಸಿದ್ದಪ್ಪ ಅವರನ್ನು ವಶಕ್ಕೆ ಪಡೆದರು. ಗುರುಸಿದ್ದಪ್ಪ ಅವರನ್ನು ವಿಚಾರಣೆಗೊಳಪಡಿಸಿದ ಬಳಿಕ ಕೋರ್ಟ್‌ ಮುಂದೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ