ಆ್ಯಪ್ನಗರ

ಖಾತೆ, ಕಂದಾಯ ಮನೆ ಬಾಗಿಲಿಗೆ: ಭೂಮಾಪನಾ ಇಲಾಖೆಯ ಮೇಲ್ವಿಚಾರಕ ನಂದೀಶ್‌

ಗ್ರಾಮಾಂತರ ಪ್ರದೇಶದ ವ್ಯಾಪ್ತಿಯಲ್ಲಿ ಹೊಲ, ಮನೆ, ನಿವೇಶನಗಳನ್ನು ಪೋಡಿಮುಕ್ತ ಯೋಜನೆಯಡಿ, ಸರಕಾರದ ಸೌಲಭ್ಯಗಳ ಜತೆ ಮನೆ ಬಾಗಿಲಿಗೆ ಬಂದು ಖಾತೆ, ...

Vijaya Karnataka 21 Aug 2018, 3:46 pm
ಹಾರೋಹಳ್ಳಿ (ಕನಕಪುರ ): ಗ್ರಾಮಾಂತರ ಪ್ರದೇಶದ ವ್ಯಾಪ್ತಿಯಲ್ಲಿ ಹೊಲ, ಮನೆ, ನಿವೇಶನಗಳನ್ನು ಪೋಡಿಮುಕ್ತ ಯೋಜನೆಯಡಿ, ಸರಕಾರದ ಸೌಲಭ್ಯಗಳ ಜತೆ ಮನೆ ಬಾಗಿಲಿಗೆ ಬಂದು ಖಾತೆ, ಕಂದಾಯ, ಪೋಡಿ ಮಾಡಿಕೊಡಲಾಗುತ್ತದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಭೂಮಾಪನಾ ಇಲಾಖೆಯ ಮೇಲ್ವಿಚಾರಕ ನಂದೀಶ್‌ ತಿಳಿಸಿದರು.
Vijaya Karnataka Web account revenue home door nandish superintendent of earthquake department
ಖಾತೆ, ಕಂದಾಯ ಮನೆ ಬಾಗಿಲಿಗೆ: ಭೂಮಾಪನಾ ಇಲಾಖೆಯ ಮೇಲ್ವಿಚಾರಕ ನಂದೀಶ್‌


ಹಾರೋಹಳ್ಳಿ ಹೋಬಳಿ ಗಬ್ಬಾಡಿ ಗ್ರಾಮದಲ್ಲಿ ಕಂದಾಯ ಇಲಾಖೆ ವತಿಯಿಂದ ಪೋಡಿಮುಕ್ತ ಗ್ರಾಮ ಅಭಿಯಾನ, ಅರಿವು ಕಾರ್ಯಕ್ರಮದ ಪೂರ್ವಭಾವಿ ಗ್ರಾಮಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು,''ಸರಕಾರ ಪೋಡಿ ಮುಕ್ತ ಕಾರ್ಯಕ್ರಮವನ್ನು ಜಾರಿಗೆ ತಂದಿದೆ. ಈ ಯೋಜನೆಯಿಂದ ಗ್ರಾಮೀಣ ಭಾಗದ ರೈತರು ಖಾತೆ, ಪೋಡಿ ವಿಚಾರಣೆಗಾಗಿ ತಾಲೂಕು ಕಚೇರಿ ಮತ್ತು ಕಂದಾಯ ಇಲಾಖೆಗಳಿಗೆ ಅಲೆದಾಡುವುದನ್ನು ತಪ್ಪಿಸಲು ಈ ಯೋಜನೆ ಪಯುಕ್ತವಾಗಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ತಮ್ಮ ತಮ್ಮ ಮನೆಯ ಬಾಗಿಲಿಗೆ ಬಂದು ಪೋಡಿ ಮಾಡಿಕೊಡಲು ಬಂದಾಗ ಸಹಕಾರ ನೀಡಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು,'' ಎಂದು ಪುನರುಚ್ಚರಿಸಿದರು.

ರಾಜ್ಯ ರೈತಸಂಘದ ಲಕ್ಷ್ಮಿನಾರಾಯಣಗೌಡ,ರಾಜ್ಯ ಒಕ್ಕಲಿಗರ ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಕಾಡೇಗೌಡ ಮಾತನಾಡಿ,'' ಸರಕಾರದ ಈ ಯೋಜನೆ ಬಹಳ ಉಪಯುಕ್ತ ಕಾರ್ಯಕ್ರಮವಾಗಿದೆ. ಈ ಯೋಜನೆಯನ್ನು ಅಧಿಕಾರಿಗಳು ಕಾಟಾಚಾರಕ್ಕೆ ನಡೆಸದೆ, ಜನರಿಗೆ ಸಮರ್ಪಕವಾಗಿ ತಲುಪಿಸಲು ಪ್ರಾಮಾಣಿಕ ಪ್ರಯತ್ನ ನಡೆಸಬೇಕು. ಸರಕಾರದ ಯಾವುದೇ ಕಾರ್ಯಕ್ರಮವು ಆಮೆ ವೇಗದಲ್ಲಿ ನಡೆಯುತ್ತಿರುವುದರಿಂದ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕಂದಾಯ ಇಲಾಖೆ ಮತ್ತು ಸವೇ ಇಲಾಖೆಯವರು ಜನರಿಗೆ ಸ್ಪಂದಿಸುವ ಅಗತ್ಯವಿದೆ,'' ಎಂದು ನುಡಿದರು.

ಕಾಂಗ್ರೆಸ್‌ ಮುಖಂಡ ಜಗದೀಶ್ವರ್‌ಗೌಡ, ಭೂಮಾಪನಾ ಇಲಾಖಾ ರಾಜಸ್ವನಿರೀಕ್ಷ ಕ ಪುಟ್ಟರಾಜು, ಗ್ರಾಮ ಲೆಕ್ಕಿಗ ಮೋಹನ್‌, ಸರ್ವೆಯರ್‌ಗಳಾದ ವಿಶ್ವನಾಥ್‌, ರುದ್ರೇಶ್‌, ರೈತಮುಖಂಡ ಜಿ.ಎಸ್‌.ಸಿದ್ದಯ್ಯ, ಗಬ್ಬಾಡಿ ಕಾಡೇಗೌಡ ಹಲವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ