ಆ್ಯಪ್ನಗರ

Ramanagara By Election Results: ಅನಿತಾ ಕುಮಾರಸ್ವಾಮಿ ಗೆಲುವು ನಿಶ್ಚಿತ

ದೇವೇಗೌಡರ ಕುಟುಂಬದಿಂದ ಮೂರನೇ ಪ್ರತಿನಿಧಿ ರಾಮನಗರದ ಶಾಸಕರಾಗಿ ಅನಿತಾ ಕುಮಾರಸ್ವಾಮಿ ಆಯ್ಕೆಯಾಗಿದ್ದು, ರಾಮನಗರ-ಚನ್ನಪಟ್ಟಣ ಅವಳಿ ಕ್ಷೇತ್ರಗಳಲ್ಲಿ ಪತಿ-ಪತ್ನಿ ಶಾಸಕರಾಗಿರುವುದು ವಿಶೇಷ.

Vijaya Karnataka Web 6 Nov 2018, 11:31 am
ರಾಮನಗರ: ಉಪಚುನಾವಣೆಯಲ್ಲಿ ಮೈತ್ರಿಕೂಟದಿಂದ ರಾಮನಗರದಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ಅನಿತಾ ಕುಮಾರಸ್ವಾಮಿ ಸ್ಪರ್ಧಿಸಿ ಗೆಲುವು ದಾಖಲಿಸಿದ್ದಾರೆ. ರಾಮನಗರದ ಮೊದಲ ಮಹಿಳಾ ಶಾಸಕಿ ಎಂಬ ಖ್ಯಾತಿಯೂ ಅನಿತಾ ಕುಮಾರಸ್ವಾಮಿ ಪಾಲಾಗಲಿದ್ದು, ಭಾರೀ ಅಂತರದ ದಾಖಲೆಯ ವಿಜಯ ದಾಖಲಿಸಿದ್ದಾರೆ.
Vijaya Karnataka Web anita Ramnagara.


ದೇವೇಗೌಡರ ಕುಟುಂಬದಿಂದ ಮೂರನೇ ಪ್ರತಿನಿಧಿ ರಾಮನಗರದ ಶಾಸಕರಾಗಿ ಅನಿತಾ ಕುಮಾರಸ್ವಾಮಿ ಆಯ್ಕೆಯಾಗಿದ್ದು, ರಾಮನಗರ-ಚನ್ನಪಟ್ಟಣ ಅವಳಿ ಕ್ಷೇತ್ರಗಳಲ್ಲಿ ಪತಿ-ಪತ್ನಿ ಶಾಸಕರಾಗಿರುವುದು ವಿಶೇಷ.

ಎರಡನೇ ಬಾರಿಗೆ ಎಚ್. ಡಿ. ಕುಮಾರಸ್ವಾಮಿಯವರು ಅನಿತಾ ಕುಮಾರಸ್ವಾಮಿಯವರು ವಿಧಾನಸಭೆ ಪ್ರವೇಶಿಸುತ್ತಿದ್ದಾರೆ. ಇಂಜಿನಿಯರಿಂಗ್ ಪದವೀಧರರಾಗಿರುವ ಅನಿತಾ ಕುಮಾರಸ್ವಾಮಿ, ವಿಧಾನಸೌಧಕ್ಕೆ ಪತಿಯೊಂದಿಗೆ ಎಂಟ್ರಿಕೊಟ್ಟ ಮೊದಲ ಮಹಿಳೆ ಎಂಬ ಹಿರಿಮೆಯನ್ನೂ ಪಡೆದುಕೊಂಡಿದ್ದಾರೆ.

ಪತಿ ಮುಖ್ಯಮಂತ್ರಿಯಾಗಿದ್ದಾಗಲೇ ಪತ್ನಿ ವಿಧಾನಸಭೆಗೆ ಪ್ರವೇಶಿಸಿರುವ ವಿಶೇಷ ಕೂಡ ಅನಿತಾ ಕುಮಾರಸ್ವಾಮಿ ಅವರ ಪಾಲಾಗಿದೆ. ರಾಮನಗರದಲ್ಲಿ ಮೊದಲ ಬಾರಿಗೆ ಶಾಸಕಿ ಆಯ್ಕೆಯಾಗಿದ್ದು, ರಾಮನಗರ ಕ್ಷೇತ್ರದಿಂದ 1952 ರಿಂದ ಇದುವರೆಗೂ ಯಾರು ಕೂಡ ಮಹಿಳೆಯರು ವಿಧಾನಸಭೆಗೆ ಪ್ರವೇಶಿಸಿಲ್ಲ.

ಪತಿಗಿಂತ ಅಧಿಕ ಮತ ಪಡೆದ ಪತ್ನಿ
ಜೆಡಿಎಸ್ -ಕಾಂಗ್ರೆಸ್ ಪಕ್ಷಗಳ ಮೈತ್ರಿ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಈ ಬಾರಿಯ ಚುನಾವಣೆಯಲ್ಲಿ ಅತಿ ಹೆಚ್ಚು ಮತ ಪಡೆಯುವ ಮೂಲಕ ಮತ ಗಳಿಕೆ ಮತ್ತು ಗೆಲುವಿನ ಅಂತರದಲ್ಲಿ ತಮ್ಮ ಪತಿ ಎಚ್‌.ಡಿ. ಕುಮಾರಸ್ವಾಮಿ ಅವರನ್ನೂ ಹಿಂದಿಕ್ಕಿದ್ದಾರೆ.

ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಎಚ್‌.ಡಿ. ಕುಮಾರಸ್ವಾಮಿ 92,626 ಮತಗಳನ್ನು ಪಡೆದು 22, 636 ಮತಗಳ ಅಂತರದಿಂದ ಗೆದ್ದಿದ್ದರು.

ರಾಮನಗರದಲ್ಲಿ ಎಚ್ಡಿಕೆ ದಾಖಲೆ ಅಳಿಸಿ ಹಾಕಿದ ಅನಿತಾ ಕುಮಾರಸ್ವಾಮಿ ಅವರು ಜಿಲ್ಲೆಯ ಮಟ್ಟಿಗೆ ಇದ್ದ ಡಿಕೆಶಿ ದಾಖಲೆಯನ್ನೂ ಮುರಿದಿದಿದ್ದಾರೆ.

ಎಚ್ಡಿಕೆ 22,636 ಹಾಗು ಡಿ.ಕೆ.ಶಿವಕಯಮಾರ್ 79,909 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಅನಿತಾ ಕುಮಾರಸ್ವಾಮಿ 17ನೇ ಸುತ್ತಿನ ಅಂತ್ಯಕ್ಕೆ 94,236 ಮತಗಳ ಮುನ್ನಡೆ ಸಾಧಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ