ಆ್ಯಪ್ನಗರ

ರಾಮನಗರದಲ್ಲಿ ಸೇನಾ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ

ಹೆಲಿಕಾಪ್ಟರ್‌ ಎಂಜಿನ್‌ನಲ್ಲಿ‌ತಾಂತ್ರಿಕ ದೋಷ ಕಂಡುಬಂದಿರುವುದು ಭೂಸ್ಪರ್ಶಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯ ವೇಳೆ ತಿಳಿದುಬಂದಿದೆ. ರಾಮನಗರದ ಕನಕಪುರ ತಾಲೂಕಿನ ಕಗ್ಗಲಿಪುರ ಬಳಿಯ ತಟಗುಪ್ಪ ಬಳಿ ಸಾಗುತ್ತಿದ್ದಾಗ ಹೆಲಿಕಾಪ್ಟರ್‌ ಸಮಸ್ಯೆಗೆ ತುತ್ತಾಗಿದೆ.

Vijaya Karnataka Web 5 Feb 2019, 4:51 pm
ರಾಮನಗರ: ಬೆಂಗಳೂರಿನ ಎಚ್‌ಎಎಲ್‌ನಲ್ಲಿ ಮಿರಾಜ್ ಯುದ್ಧವಿಮಾನವೊಂದು ನೆಲಕ್ಕಪ್ಪಳಿಸಿ ಇಬ್ಬರು ಪೈಲಟ್‌ಗಳನ್ನು ಬಲಿ ಪಡೆದ ನೆನಪು ಮಾಡುವ ಮುನ್ನವೇ ರಾಮನಗರದಲ್ಲಿ ಸೇನಾ ಹೆಲಿಕಾಪ್ಟರ್ ಒಂದು ತಾಂತ್ರಿಕ ದೋಷಕ್ಕೀಡಾಗಿ ತುರ್ತು ಭೂಸ್ಪರ್ಶ ಮಾಡಿದೆ. ಆದರೆ ಈ ಘಟನೆಯಲ್ಲಿ ಯಾರಿಗೂ ಯಾವುದೇ ಅಪಾಯ ಉಂಟಾಗಿಲ್ಲ.
Vijaya Karnataka Web Army.

ಹೆಲಿಕಾಪ್ಟರ್‌ ಎಂಜಿನ್‌ನಲ್ಲಿ‌ತಾಂತ್ರಿಕ ದೋಷ ಕಂಡುಬಂದಿರುವುದು ಭೂಸ್ಪರ್ಶಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯ ವೇಳೆ ತಿಳಿದುಬಂದಿದೆ. ರಾಮನಗರದ ಕನಕಪುರ ತಾಲೂಕಿನ ಕಗ್ಗಲಿಪುರ ಬಳಿಯ ತಟಗುಪ್ಪ ಬಳಿ ಸಾಗುತ್ತಿದ್ದಾಗ ಹೆಲಿಕಾಪ್ಟರ್‌ ಸಮಸ್ಯೆಗೆ ತುತ್ತಾಗಿದೆ.

ತಕ್ಷಣವೇ ಸಮಯಪ್ರಜ್ಞೆ ಮೆರೆದ ಪೈಲಟ್‌ಗಳು ತಟಗುಪ್ಪ ಹೊರವಲಯದ ಖಾಲಿ ಗದ್ದೆಯಲ್ಲಿ ಹೆಲಿಕಾಪ್ಟರ್ ತುರ್ತು ಲ್ಯಾಂಡಿಂಗ್ ಮಾಡಿದ್ದಾರೆ.

ತಾಂತ್ರಿಕ ದೋಷ ಕುರಿತು ಸೇನೆಯ ತಜ್ಞರು ಬಂದು ಪರಿಶೀಲಿಸಲಿದ್ದಾರೆ ಎನ್ನಲಾಗಿದೆ. ಸೇನಾ ಹೆಲಿಕಾಪ್ಟರ್ ಏಕಾಏಕಿ ಭೂಸ್ಪರ್ಷ ಮಾಡಿರುವುದು ಸ್ಥಳೀಯರಿಗೆ ಕೆಲಕಾಲ ಆತಂಕಕ್ಕೆ ಕಾರಣವಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ