ಆ್ಯಪ್ನಗರ

HD Kumaraswamy Allegation: ಜೆಡಿಎಸ್‌ ಮುಗಿಸಲು ಬಿಜೆಪಿ, ಕಾಂಗ್ರೆಸ್‌ ಪ್ರಯತ್ನ ನಡೆದಿದೆ - ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ಆರೋಪ

ಕುಮಾರಸ್ವಾಮಿಯನ್ನ ಮುಗಿಸಿದರೆ ಜೆಡಿಎಸ್‌ ಪಕ್ಷವನ್ನ ಮುಗಿಸಿದಂತೆ ಎಂದು ಕಾಂಗ್ರೆಸ್‌- ಬಿಜೆಪಿ ನಾಯಕರು ರಾಮನಗರದಲ್ಲಿ ಸ್ವಲ್ಪ ಹೆಚ್ಕೊಂಡಿದ್ದಾರೆ, ಹೀಗಾಗಿ ನಿಮ್ಮನ್ನ ಸೆಳೆಯಲು ಹಣದ ಹೊಳೆ ಹರಿಸುತ್ತಿದ್ದಾರೆ. ತವಾ, ಕುಕ್ಕರ್‌, ಕಿಚನ್‌ ಸೆಟ್‌ಗೆ ಮರುಳಾಗಬೇಡಿ, ದಬ್ಬಾಳಿಕೆ ದೌರ್ಜನ್ಯಕ್ಕೆ ಮರುಳಾಗಬೇಡಿ ಎಂದು ರಾಮನಗರ ಕ್ಷೇತ್ರದ ಜನರಿಗೆ ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ಮನವಿ ಮಾಡಿದರು. ಈ ಬಾರಿ ಸ್ಪಷ್ಟ ಬಹುಮತದ ಸರ್ಕಾರ ತರಲು ಏಕಾಂಗಿಯಾಗಿ ರಾಜ್ಯ ಪ್ರವಾಸ ಮಾಡುತ್ತಿದ್ದೇನೆ, ರಾಜ್ಯದ ಎಲ್ಲಾ ಮೂಲೆಯಲ್ಲೂ ಜೆಡಿಎಸ್‌ ಪಕ್ಷಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ ಎಂದು ಮಾಜಿ ಸಿಎಂ ಹೇಳಿದರು.

Edited byPavan Lakshmikanth | Vijaya Karnataka Web 27 Feb 2023, 7:00 pm

ಹೈಲೈಟ್ಸ್‌:

  • ರಾಮನಗರದಲ್ಲಿ ಹಣದ ಹೊಳೆ ಹರಿಯಲಿದೆ ಎಂದು ಕಾಂಗ್ರೆಸ್‌, ಬಿಜೆಪಿ ವಿರುದ್ಧ ವಾಗ್ದಾಳಿ
  • ಪಂಚರತ್ನ ರಥಯಾತ್ರೆಗೆ ರಾಜ್ಯಾದ್ಯಂತ ಉತ್ತಮ ಜನ ಸ್ಪಂದನೆ ಸಿಕ್ಕಿದೆ ಎಂದು ಕುಮಾರಸ್ವಾಮಿ
  • ರಾಮನಗರದಲ್ಲಿ ಕಾರ್ಯಕರ್ತರ ಒತ್ತಾಯ ಮೇರೆಗೆ ನಿಖಿಲ್‌ ಕುಮಾರಸ್ವಾಮಿ ಸ್ಪರ್ಧೆ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web HD Kumaraswamy
ಸಾಂದರ್ಭಿಕ ಚಿತ್ರ
ರಾಮನಗರದಲ್ಲಿ ಈ ಬಾರಿ ಹಣ ಹೊಳೆ ಹರಿಯಲಿದೆ. ತವಾ, ಕುಕ್ಕರ್‌, ಕಿಚನ್‌ ಸೆಟ್‌ಗೆ ಮರುಳಾಗಬೇಡಿ. ದಬ್ಬಾಳಿಕೆ ದೌರ್ಜನ್ಯಕ್ಕೆ ಬೆಂಬಲ ನೀಡಬೇಡಿ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹೇಳುವ ಮೂಲಕ ಕಾಂಗ್ರೆಸ್‌ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ತಾಲೂಕಿನ ಸುಗ್ಗನಹಳ್ಳಿ ಗ್ರಾಮದಲ್ಲಿಅರ್ಕಾವತಿ ನದಿಗೆ ಅಡ್ಡಲಾಗಿ ಅಂದಾಜು 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ತಾತ್ಕಾಲಿಕ ಸೇತುವೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.

​​ H.D.Kumaraswamy: 2023ರ ವಿಧಾನಸಭಾ ಚುನಾವಣೆ ನನ್ನ ಕೊನೆಯ ಚುನಾವಣೆ: ಎಚ್‌.ಡಿ.ಕುಮಾರಸ್ವಾಮಿ
ಕುಮಾರಸ್ವಾಮಿ ಅವರನ್ನು ರಾಮನಗರದ ಜನ ಮಗುವಿನಂತೆ ಸಾಕಿ ಹೆಮ್ಮರವಾಗಿ ಬೆಳೆಸಿದ್ದಾರೆ. ಈಗ ನನ್ನನ್ನು ರಾಜಕೀಯವಾಗಿ ಮುಗಿಸಿದರೆ ಸಾಕು ಜೆಡಿಎಸ್‌ ಪಕ್ಷವನ್ನು ಮುಗಿಸಿದಂತೆ ಎಂದು ಬಿಜೆಪಿ-ಕಾಂಗ್ರೆಸ್‌ ಹೊರಟಿದೆ. ನಾನು ಕ್ಷೇತ್ರದಲ್ಲಿದ್ದಾಗ ಕಾಂಗ್ರೆಸ್‌ ನಾಯಕರು ಮನೆ ಬಿಟ್ಟು ಹೊರಗೇ ಬರುತ್ತಿರಲಿಲ್ಲ. ಈಗ ಸ್ವಲ್ಪ ಹೆಚ್ಕೊಂಡಿದ್ದಾರೆ. ಈಗ ಕ್ಷೇತ್ರದಲ್ಲಿ ಹಣದ ಹೊಳೆಯನ್ನೇ ಹರಿಸಲಾಗುತ್ತಿದೆ. ಇಲ್ಲಿನ ಸಂಸದರು ಕೇವಲ ಭಾಷಣ ಮಾಡಿ ಹೋಗುತ್ತಾರೆ. ಅನುದಾನ ತಂದು ಮಾಡಿದ ಕೆಲಸ ಏನೂ ಇಲ್ಲ ಎಂದು ಟೀಕಿಸಿದರು.

ರಾಮನಗರ ಇತರ ಕ್ಷೇತ್ರಗಳಂತೆ ಅಲ್ಲ. ಪ್ರೀತಿ, ವಿಶ್ವಾಸ, ಬಾಂಧ್ಯವಕ್ಕೆ ಮಾತ್ರ ಇಲ್ಲಿನ ಜನ ಮನ್ನಣೆ ನೀಡುತ್ತಾರೆ ಎನ್ನುವುದು ಗೊತ್ತಿದೆ. ದಬ್ಬಾಳಿಕೆ ದೌರ್ಜನ್ಯಕ್ಕೆ ನೀವು ಬೆಂಬಲ ನೀಡುವುದಿಲ್ಲ. ಅಬ್ಬರ, ಆಡಂಬರ ತೋರುಪಡಿಕೆ ಇಲ್ಲದೆ ಸದ್ದಿಲ್ಲದೆ ಇಷ್ಟು ಕಾಲ ತೀರ್ಪು ನೀಡಿದ್ದೀರಿ. ನಿಮ್ಮ ಆರ್ಶೀವಾದವನ್ನು ನಾನು ಎಂದೂ ಸಹ ದುರುಪಯೋಗ ಮಾಡಿಕೊಂಡಿಲ್ಲ. ಇಲ್ಲಿ ಆಸ್ತಿಗಳನ್ನು ಮಾಡಿಲ್ಲ. ಸತ್ಯ, ಧರ್ಮವನ್ನು ನೀವೇ ಉಳಿಸಿ ಬೆಳೆಸಿ ಎಂದರು.

ಏಕಾಂಗಿಯಾಗಿ ರಾಜ್ಯ ಪ್ರವಾಸ ಮಾಡುತ್ತಿದ್ದೇನೆ. ಕ್ಷೇತ್ರಕ್ಕೆ ಹೆಚ್ಚು ಸಮಯ ನೀಡಲು ಸಾಧ್ಯವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಪ್ರತಿ ಪಂಚಾಯಿತಿಗೆ ಭೇಟಿ ನೀಡಿ ನಿಮ್ಮ ಕಷ್ಟ ಸುಖಗಳನ್ನು ಆಲಿಸುತ್ತೇನೆ. ನಮ್ಮದೇನಾದರೂ ತಪ್ಪಾಗಿದ್ದರೆ ನೇರವಾಗಿ ಹೇಳಿ ತಿದ್ದಿಕೊಳ್ಳುತ್ತೇನೆ ಎಂದು ಹೇಳಿದರು.

Bengaluru - Mysuru Expressway: ಉದ್ಘಾಟನೆಗೂ ಮುನ್ನವೇ ಎಕ್ಸ್‌ಪ್ರೆಸ್‌ ವೇಗೆ ಟೋಲ್‌ ಸಂಗ್ರಹಕ್ಕೆ ಸಾರ್ವಜನಿಕರ ಆಕ್ರೋಶ- ಕಾಮಗಾರಿಯೂ ಪೂರ್ಣವಾಗಿಲ್ಲ!

ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚನೆ
ಈ ಬಾರಿ ಸ್ಪಷ್ಟ ಬಹುಮತದೊಂದಿಗೆ ಜೆಡಿಎಸ್‌ ಸರ್ಕಾರ ರಚನೆಯಾಗಲಿದೆ. ಉತ್ತರ ಕರ್ನಾಟಕ ಭಾಗದಲ್ಲೂ ಪಕ್ಷಕ್ಕೆ ಉತ್ತಮ ಸ್ಪಂದನೆ ದೊರೆಯುತ್ತಿದೆ. ಅಲ್ಲಿ ನಿಖಿಲ್‌ರನ್ನು ಕರೆಸಲು ನಾಯಕರು ಒತ್ತಡ ಹಾಕುತ್ತಿದ್ದಾರೆ. ಅವರನ್ನು ರಾಜ್ಯ ಪ್ರವಾಸಕ್ಕೆ ಕಳಿಸಿಕೊಡಿ. ಅವರ ಕೆಲಸವನ್ನು ಇಲ್ಲಿ ನೀವೆ ಮಾಡಿ, ಇದರಿಂದ ರಾಜ್ಯದಲ್ಲಿ ಒಂದಷ್ಟು ಕ್ಷೇತ್ರಗಳನ್ನು ಗೆಲ್ಲಬಹುದು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ಸ್ಥಳೀಯ ನಾಯಕರೇ ನಾಯಕತ್ವ ಗುಣವನ್ನು ಬೆಳೆಸಿಕೊಂಡು ಸ್ಪರ್ಧೆಗೆ ಆಸಕ್ತಿ ತೋರಿದ್ದರೆ ಅವರನ್ನೇ ನಿಲ್ಲಿಸಬಹುದಿತ್ತು. ಆದರೆ ಯಾರು ಆಸಕ್ತಿ ತೋರಲಿಲ್ಲ. ಎಲ್ಲಾ ನನ್ನ ಮೇಲೆ ಒತ್ತಡ ಹಾಕಿದ್ದೀರಿ. ಈಗಲೂ ನಿಖಿಲ್‌ ನಿಲ್ಲಿಸಲು ಒತ್ತಾಯ ಮಾಡಿದ್ದು ಕಾರ್ಯಕರ್ತರು. ಈ ಬಾರಿ ಯಾವುದಕ್ಕೂ ಮರುಳಾಗದೆ ಜೆಡಿಎಸ್‌ ಅನ್ನು ಬೆಂಬಲಿಸಿ ಎಂದರು. ಶಾಸಕಿ ಅನಿತಾ ಕುಮಾರಸ್ವಾಮಿ, ಪಕ್ಷದ ಮುಖಂಡರು, ಕಾರ್ಯಕರ್ತರು ಸೇರಿದಂತೆ ನೂರಾರು ಮಂದಿ ಸಭೆಯಲ್ಲಿ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ