ಆ್ಯಪ್ನಗರ

ಕಾಂಗ್ರೆಸ್‌ನಿಂದ ಚಂದ್ರಶೇಖರ್‌ ಬ್ಲ್ಯಾಕ್‌ಮೇಲ್: ರುದ್ರೇಶ್ ಆರೋಪ

ಪ್ರಜಾಪ್ರಭುತ್ವವನ್ನು ಡಿಕೆಶಿ ಬ್ರದರ್ಸ್ ಕಗ್ಗೊಲೆ ಮಾಡಿದ್ದಾರೆ. ನಾವು ಗೆಲ್ಲುತ್ತೇವೆ ಎಂಬ ಭಯದಿಂದಲ್ಲೇ ಈ ರೀತಿ ಬ್ಲಾಕ್ ಮೇಲ್‌ಮಾಡಿ ಅವರನ್ನು ಪಕ್ಷದಿಂದ ಸೆಳೆಯಲಾಗಿದೆ.

Vijaya Karnataka Web 1 Nov 2018, 2:57 pm
ರಾಮನಗರ: ಬಿಜೆಪಿ ಅಭ್ಯರ್ಥಿ ಎಲ್.ಚಂದ್ರಶೇಖರ್ ಅವರನ್ನು ಬ್ಲಾಕ್ ಮೇಲ್ ಮಾಡಿ ಕಾಂಗ್ರೆಸ್ ಗೆ ಕರೆದುಕೊಳ್ಳಲಾಗಿದೆ. ಬೆದರಿಕೆ ಹಾಕಿ ಅವರನ್ನು ಸೆಳೆಯಲಾಗಿದೆ ಎಂದು ರಾಮನಗರ ಬಿಜೆಪಿ ಜಿಲ್ಲಾಧ್ಯಕ್ಷ ಎಂ. ರುದ್ರೇಶ್ ಹೊಸ ಬಾಂಬ್ ಸ್ಪೋಟಿಸಿದ್ದಾರೆ‌.
Vijaya Karnataka Web Ramnagar BJP 2.


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವವನ್ನು ಡಿಕೆಶಿ ಬ್ರದರ್ಸ್ ಕಗ್ಗೊಲೆ ಮಾಡಿದ್ದಾರೆ. ನಾವು ಗೆಲ್ಲುತ್ತೇವೆ ಎಂಬ ಭಯದಿಂದಲ್ಲೇ ಈ ರೀತಿ ಬ್ಲಾಕ್ ಮೇಲ್‌ಮಾಡಿ ಅವರನ್ನು ಪಕ್ಷದಿಂದ ಸೆಳೆಯಲಾಗಿದೆ.

ನೀವೆಲ್ಲ ಬಿಜೆಪಿಗೆ ಮತ ಹಾಕಿ. ಅವರು ಗೆಲುವು ಸಾಧಿಸಿದ ಬಳಿಕ ಅದ್ಹೇಗೆ ಪಕ್ಷ ಬಿಡುತ್ತಾರೆ ನೋಡೊಣ ಎಂದು ಸವಾಲೆಸೆದರು. ಯಾವ ನಾಯಿಯನ್ನು ಬಿಜೆಪಿಯಿಂದ ನಿಲ್ಲಿಸಿದ್ದರೂ, ಅದನ್ನು ನಾವು ಬೆಂಬಲಿಸುತ್ತಿದ್ದೆವು. ಅದೇ ರೀತಿ ಚಂದ್ರಶೇಖರ್ ಅವರನ್ನು ಬೆಂಬಲಿಸಿದ್ದೇವೆ. ನಮ್ಮ ಕಾರ್ಯಕರ್ತರು ಆತನಿಗೆ ಮೋಸ ಮಾಡಿದ್ದರೆ ನಾನು ಕತ್ತು ಕೊಯ್ದುಕೊಂಡು ರಸ್ತೆಯಲ್ಲಿ ಸಾಯುತ್ತೇನೆ ಎಂದು ಗುಡುಗಿದರು.

ಪಕ್ಷದ ಕಚೇರಿ ಮುಂಭಾಗ ಎಲ್. ಚಂದ್ರಶೇಖರ್ ಭಾವಚಿತ್ರ ಇರುವ ಬ್ಯಾನರ್‌ಗೆ ಚಪ್ಪಲಿ ಹಾರ ಹಾಕಿ, ಭಾವ ಪೂರ್ಣ ಶ್ರದ್ದಾಂಜಲಿ, ಮತ್ತೆ ಹುಟ್ಟಿ ಬರಬೇಡ‌‌ ಎಂದು ಬರೆದು ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಲೀಲಾವತಿ ಗುರುವಾರ ರಾಮನಗರದಲ್ಲಿ ಜೆಡಿಎಸ್‌ಗೆ ಸೇರ್ಪಡೆಯಾಗಿದ್ದಾರೆ.

ಪಕ್ಷಕ್ಕೆ ಮರಳಿದ ಚಂದ್ರಶೇಖರ್‌ಗೆ ಸ್ವಾಗತ: ಕೃಷ್ಣ ಭೈರೇಗೌಡ
ರಾಮನಗರದ ಬಿಜೆಪಿ ಅಭ್ಯರ್ಥಿ ಮರಳಿ ಕಾಂಗ್ರೇಸ್‌ಗೆ ಬಂದಿರುವುದಕ್ಕೆ ಸಚಿವ ಕೃಷ್ಣ ಬೈರೇಗೌಡ ಸಂತಸ ವ್ಯಕ್ತಪಡಿಸಿದ್ದಾರೆ. ಕೋಲಾರದಲ್ಲಿ ಹೇಳಿಕೆ ನೀಡಿದ ಸಚಿವರು, ಹುಟ್ಟಿನಿಂದಲೂ ಲಿಂಗಪ್ಪ ಅವರ ಕುಟುಂಬ ಕಾಂಗ್ರೆಸ್ ಪರ ನಿಂತಿದೆ. ಅವರ ಪುತ್ರ ಚಂದ್ರಶೇಖರ್ ಇತ್ತೀಚಿನ ರಾಜಕೀಯ ಬೆಳವಣಿಗೆಯಿಂದಾಗಿ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರು.

ಈಗ ತಾಳ್ಮೆಯಿಂದ ಅವಲೋಕನ ಮಾಡಿ ಸ್ವಂತ ಮನೆಗೆ ಮರಳಿ ಬಂದಿರುವುದಕ್ಕೆ ಸ್ವಾಗತ. ಇದನ್ನ ಬಿಜೆಪಿಯವರು ಲಾಭಿ ನಡೆಸಲು ಹೊರಟಿದ್ದರು, ಈ ಘಟನೆಯಿಂದಾಗಿ ರಾಜ್ಯದಲ್ಲಿ ಬಿಜೆಪಿಗೆ ಭವಿಷ್ಯ ಇಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಮುಂದಿನ ಚುನಾವಣೆಯಲ್ಲಿ ಐದು ಸ್ಥಾನಗಳಲ್ಲಿ ಕಾಂಗ್ರೆಸ್ ಜಯಗಳಿಸುವುದರ ಮೂಲಕ, ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ ಎನ್ನುವುದನ್ನ ತೋರಿಸುತ್ತೇವೆ ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ