ಆ್ಯಪ್ನಗರ

ವೈದ್ಯೆ ಸಹಿ ನಕಲು, ಸೂಪರಿಡೆಂಟ್‌ ವಿರುದ್ಧ ಕೇಸು

ಸೋಲೂರು ವೈದ್ಯಾಧಿಕಾರಿಯ ಸಹಿ ನಕಲು ಮಾಡಿರುವ ಆರೋಪದಲ್ಲಿಈ ಹಿಂದೆ ವರ್ಗಾವಣೆಗೊಂಡಿದ್ದ ಸೂಪರಿಟೆಂಡೆಂಟ್‌ ಗಣೇಶಮೂರ್ತಿ ವಿರುದ್ಧ ಸೋಲೂರು ಪೊಲೀಸ್‌ ಠಾಣೆಯಲ್ಲಿದೂರು ದಾಖಲಾಗಿದೆ.

Vijaya Karnataka 18 Oct 2019, 5:00 am
ಕುದೂರು:ಸೋಲೂರು ವೈದ್ಯಾಧಿಕಾರಿಯ ಸಹಿ ನಕಲು ಮಾಡಿರುವ ಆರೋಪದಲ್ಲಿಈ ಹಿಂದೆ ವರ್ಗಾವಣೆಗೊಂಡಿದ್ದ ಸೂಪರಿಟೆಂಡೆಂಟ್‌ ಗಣೇಶಮೂರ್ತಿ ವಿರುದ್ಧ ಸೋಲೂರು ಪೊಲೀಸ್‌ ಠಾಣೆಯಲ್ಲಿದೂರು ದಾಖಲಾಗಿದೆ.
Vijaya Karnataka Web case against physician signature copy superintendent
ವೈದ್ಯೆ ಸಹಿ ನಕಲು, ಸೂಪರಿಡೆಂಟ್‌ ವಿರುದ್ಧ ಕೇಸು

ಘಟನೆ ವಿವರ:ಸೋಲೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಸೂಪರ್‌ಡೆಂಟ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ಗಣೇಶ ಮೂರ್ತಿ, 2018ರಲ್ಲಿಎಸಿಬಿ ದಾಳಿಯಾದ ನಂತರ ಸೇವೆಯಿಂದ ಅಮಾನತುಗೊಂಡಿದ್ದರು. ನಂತರ ಅಮಾನತು ತೆರವುಗೊಂಡು ಶಿಡ್ಲಘಟ್ಟಕ್ಕೆ ವರ್ಗಾವಣೆಗೊಂಡು ಕಾರ್ಯನಿರ್ವಹಿಸುತ್ತಿದ್ದರಾದರೂ ಎಲ್‌ಪಿಸಿ ಸಿಗದ ಕಾರಣ ಇವರ ಸಂಬಳವನ್ನು ತಡೆಹಿಡಿಯಾಲಾಗಿತ್ತು.
ಈ ವೇಳೆ ಸೋಲೂರು ವೈದ್ಯೆ ಉಮಾದೇವಿಯ ಸಹಿಯನ್ನು ನಕಲು ಮಾಡಿ ಬೆಂಗಳೂರು ಖಜಾನೆಗೆ ದಾಖಲೆ ಕಳಿಸಿದ್ದರು. ವಿಷಯ ತಿಳಿದ ಉಮಾದೇವಿ ಗಣೇಶಮೂರ್ತಿ ವಿರುದ್ಧ ಪೊಲೀಸರಿಗೆ ದೂರು ದಾಖಲಿಸಿದ್ದರು. ಈ ಸಂಬಂಧ ಗಣೇಶ್‌ ಮೂರ್ತಿಯವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ