ಆ್ಯಪ್ನಗರ

ಬಿಟ್‌ ಫೈಟ್‌: ಪ್ರಿಯಾಂಕ್‌ ಖರ್ಗೆ ತಲೆ ಬುಡ ಇಲ್ಲದೇ ಮಾತಾಡ್ತಾರೆ ಎಂದ ಕೇಂದ್ರ ಸಚಿವ

ಬಿಟ್‌ ಕಾಯಿನ್‌ ಸಂಬಂಧ ದಾಖಲೆಗಳನ್ನ ನೀಡಿದರೆ ಯಾವುದೇ ಪಕ್ಷದವರೇ ಆಗ್ಲಿ ಅವರ ಬಗ್ಗೆ ಮುಲಾಜಿಲ್ಲದೇ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಸ್ಪಷ್ಟಪಡಿಸಿದ್ದಾರೆ ಎಂದು ಸಚಿವ ನಾರಾಯಣಸ್ವಾಮಿ ತಿಳಿಸಿದರು.

Vijaya Karnataka Web 18 Nov 2021, 2:22 pm
ರಾಮನಗರ: ಬಿಟ್‌ ಕಾಯಿನ್‌ ಬಗ್ಗೆ ನನ್ನ ಬಳಿ ಯಾವ ದಾಖಲಾತಿ ಇಲ್ಲ ಎಂದು ಸಿದ್ದರಾಮಯ್ಯನವರೇ ಒಪ್ಪಿಕೊಂಡಿದ್ದಾರೆ. ಮತ್ತೆ ಬಿಟ್‌ ಕಾಯಿನ್‌ ಬಗ್ಗೆ ಏಕೆ ಮಾತನಾಡಬೇಕು ಎಂದು ಕೇಂದ್ರ ಸಚಿವ ಎ ನಾರಾಯಣಸ್ವಾಮಿ ಹೇಳಿದ್ದಾರೆ.
Vijaya Karnataka Web ಎ ನಾರಾಯಣಸ್ವಾಮಿ
ಎ ನಾರಾಯಣಸ್ವಾಮಿ


ಬಿಡದಿಯ ಕೆಂಚನಕುಪ್ಪೆಯಲ್ಲಿ ಸುದ್ದಿಗಾರರೊಂದಿಗೆ ಕೇಂದ್ರ ಸಚಿವ ಎ ನಾರಾಯಣ ಸ್ವಾಮಿ ಮಾತನಾಡಿದರು.

ಬಿಟ್ ಕಾಯಿನ್ ಬಗ್ಗೆ ದಾಖಲಾತಿ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದರೂ ಮತ್ತೆ ಮತ್ತೆ ಅದೇ ವಿಷಯ ಏಕೆ ಮಾತನಾಡುತ್ತಾರೆ ಎಂಬುದು ನನಗೆ ಆರ್ಥ ಆಗ್ತಾ ಇಲ್ಲ. ರಾಜಕಾರಣಕ್ಕಾಗಿ ರಾಜಕಾರಣ ಮಾಡವ ವ್ಯವಸ್ಥೆ ಬಿಡಬೇಕು ಎಂದರು.

ಕ್ರಿಪ್ಟೋ ಕರೆನ್ಸಿ ನಮ್ಮ ಯುವಜನರನ್ನು ಹಾಳು ಮಾಡಬಹುದು: ಪ್ರಧಾನಿ ಮೋದಿ ಕಳವಳ

ಯಾವುದೇ ವಾಸ್ತವ ವಿಚಾರ ಇದ್ದರೆ, ದಾಖಲೆಗಳಿದ್ದರೆ ಈ ಸಮಾಜಕ್ಕೆ ರಾಜ್ಯದ ನಿರ್ಮಾಣಕ್ಕೆ ಚರ್ಚೆ ಆಗಬೇಕು ಎಂದು ವಿರೋಧ ಪಕ್ಷದವರಿಗೆ ಪ್ರಾರ್ಥನೆ ಮಾಡುತ್ತೇನೆ. ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿಕೆ ನೀಡಿದ್ದಾರೆ. ಯಾವುದೇ ಕಾಲಘಟ್ಟದಲ್ಲಿ ದಾಖಲೆಗಳನ್ನ ನೀಡಿದರೆ ಯಾವುದೇ ಪಕ್ಷದವರೇ ಆಗ್ಲಿ ಅವರ ಬಗ್ಗೆ ಮುಲಾಜಿಲ್ಲದೇ ಕ್ರಮವಹಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ ಎಂದು ಸಚಿವ ನಾರಾಯಣಸ್ವಾಮಿ ತಿಳಿಸಿದರು.

ಬಿಟ್ ಕಾಯಿನ್ ಹಗರಣ ಗಂಭೀರ ಅಲ್ಲವಾದರೆ ಪ್ರಧಾನಿ ಬಳಿ ಪ್ರಸ್ತಾಪಿಸಿದ್ದೇಕೆ: ಪ್ರಿಯಾಂಕ್ ಖರ್ಗೆ ಪ್ರಶ್ನೆ

ಬಿಜೆಪಿ ವಿಶೇಷವಾಗಿ ಯಾರನ್ನು ಬಿಟ್ ಕಾಯಿನ್ ಬಗ್ಗೆ ರಕ್ಷಣೆ ಮಾಡುವ ವಿಚಾರ ಇಲ್ಲ.. ಪ್ರಿಯಾಂಕ್ ಖರ್ಗೆ ತಲೆ ಬುಡ ಇಲ್ಲದೇ ಮಾತನಾಡುತ್ತಿದ್ದಾರೆ. ಆತ ಒಬ್ಬ ವಿರೋಧ ಪಕ್ಷದವನ ಮಗನಾಗಿ, ಈ ರಾಜ್ಯದ ಒಬ್ಬ ಮಾಜಿ ಮಂತ್ರಿಯಾಗಿ ಗೌರವಯುತವಾಗಿ ಹೇಗೆ ಮಾತನಾಡಬೇಕು ಎಂಬುದೇ ಗೊತ್ತಿಲ್ಲ. ಬೇರೆ ಜನ ಪ್ರತಿನಿಧಿಗೆ ಸವಾಲಾಕುವುದು ಆತನಿಗೆ ಶೋಭೆ ತರುವುದಿಲ್ಲ ಎಂದು ಕೇಂದ್ರ ಸಚಿವರು ತಿಳಿಸಿದರು.

Bitcoin Scam:'ಬಿಟ್'ರೂ ಬಿಡದ ಹಗರಣ; ಬಿಟ್‌ ಕಾಯಿನ್‌ ಪ್ರಕರಣದ ಸಂಪೂರ್ಣ ಟೈಮ್‌ಲೈನ್‌..!

ಆತ ಈ ಮಾತುಗಳನ್ನ ನಿಲ್ಲಿಸಿ ರಾಜ್ಯದ ಅಭಿವೃದ್ಧಿ ಬಗ್ಗೆ ಮಾತನಾಡಲಿ. ಬಿಟ್ ಕಾಯಿನ್ ಬಗ್ಗೆ ಕೇಂದ್ರ ಸರಕಾರದ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಅದನ್ನ ಅಕೌಂಟೆಬಿಲಿಟಿ ಆಗಬೇಕಾ ಬೇಡ್ವಾ ಅಥವಾ ಐಟಿಗೆ ಸೇರಿಸಬೇಕಾ ಬೇಡ್ವಾ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಕೇಂದ್ರ ಸರಕಾರ ಕೂಡ ಸೂಕ್ತ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ ಎಂದು ಕೇಂದ್ರ ಸಚಿವ ನಾರಾಯಣಸ್ವಾಮಿ ಸ್ಪಷ್ಟಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ