ಆ್ಯಪ್ನಗರ

ಇನ್ನೊಂದು ವಾರದಲ್ಲಿ‌ ಕೋವಿಡ್ ಲಸಿಕೆ ಲಭ್ಯ: ಡಿಸಿಎಂ ಅಶ್ವಥ್‌ ನಾರಾಯಣ್‌

ರಾಮನಗರದ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ವ್ಯಾಕ್ಸಿನ್‌ನ ಡ್ರೈ ರನ್ ಗೆ ಚಾಲನೆ ನೀಡಿ ಮಾತನಾಡಿದ ಡಿಸಿಎಂ, ಕೋವಿಡ್ ವಿರುದ್ದ ಸಮರ ಸಾರುವ ಉದ್ದೇಶದಿಂದ ಆದಷ್ಟು ಶೀಘ್ರದಲ್ಲೇ ವ್ಯಾಕ್ಸಿನ್ ಬರಲಿದೆ. ಲಸಿಕೆ ಹಾಕಲು ಅನುಕೂಲವಾಗುವಂತೆ ಸಿಬ್ಬಂದಿ, ಸಪ್ಲೈ ಚೈನ್, ಲಾಜಿಸ್ಟಿಕ್ಸ್ ಎಲ್ಲವು ರೆಡಿ ಇದೆ. ಕೊರೊನಾ ವಾರಿಯರ್ಸ್‌ಗಳಿಗೆ ಮೊದಲ ಹಂತದಲ್ಲಿ ಲಸಿಕೆ ಲಭ್ಯವಾಗಲಿದೆ ಎಂದರು.

Vijaya Karnataka Web 8 Jan 2021, 11:49 am
ರಾಮನಗರ: ಇನ್ನೊಂದು ವಾರದಲ್ಲಿ‌ ಕೋವಿಡ್ ಲಸಿಕೆ ಲಭ್ಯವಾಗಲಿದೆ. ಈಗಾಗಲೇ ವ್ಯಾಕ್ಸಿನ್ ಪ್ಯಾಕಿಂಗ್ ಆಗಿದ್ದು, ಸಪ್ಲೈ ಚೈನ್ ಸಹ ಸಿದ್ದಗೊಂಡಿದೆ. ಒಟ್ಟು ಮೂರು ಹಂತಗಳಲ್ಲಿ ಲಸಿಕೆ ಹಾಕುವ ಕಾರ್ಯ ನಡೆಯಲಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್‌ ನಾರಾಯಣ್ ತಿಳಿಸಿದರು.
Vijaya Karnataka Web dcm ashwath narayan


ರಾಮನಗರದ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ವ್ಯಾಕ್ಸಿನ್‌ನ ಡ್ರೈ ರನ್ ಗೆ ಚಾಲನೆ ನೀಡಿ ಮಾತನಾಡಿದ ಅವರು, ಕೋವಿಡ್ ವಿರುದ್ದ ಸಮರ ಸಾರುವ ಉದ್ದೇಶದಿಂದ ಆದಷ್ಟು ಶೀಘ್ರದಲ್ಲೇ ವ್ಯಾಕ್ಸಿನ್ ಬರಲಿದೆ. ಲಸಿಕೆ ಹಾಕಲು ಅನುಕೂಲವಾಗುವಂತೆ ಸಿಬ್ಬಂದಿ, ಸಪ್ಲೈ ಚೈನ್, ಲಾಜಿಸ್ಟಿಕ್ಸ್ ಎಲ್ಲವು ರೆಡಿ ಇದೆ. ಕೊರೊನಾ ವಾರಿಯರ್ಸ್‌ಗಳಿಗೆ ಮೊದಲ ಹಂತದಲ್ಲಿ ಲಸಿಕೆ ಲಭ್ಯವಾಗಲಿದೆ ಎಂದರು.

ಕೋವಿಡ್ ಲಸಿಕೆ ನೀಡುವ ಮುನ್ನ ಇಡೀ ರಾಜ್ಯದಲ್ಲಿ ಇಂದು ಡ್ರೈ ರನ್ ನಡೆಸಲಾಗಿದೆ. ಕೋವಿಡ್‌ ಮೂಲಕ ರಿಜಿಸ್ಟರ್ ಮಾಡಿಕೊಂಡಿರುವ ಕೊರೊನಾ ವಾರಿಯರ್ಸ್‌ಗಳಿಗೆ ಮೊದಲ ಹಂತದಲ್ಲಿ ಲಸಿಕೆ ಹಾಕಿದರೆ, ಬಳಿಕ ಸೇವಾ ವಲಯದಲ್ಲಿರುವವರಿಗೆ, ಆನಂತರ ಶೇ.20 ರಷ್ಟು (ಐವತ್ತು ವರ್ಷ ದಾಟಿದವರು, ಹೈರಿಸ್ಕ್ ಇರುವವರು) ಸಾರ್ವಜನಿಕರಿಗೆ ಲಸಿಕೆ ಹಾಕಲಾಗುವುದು ಎಂದು ವಿವರಿಸಿದರು.


ಕೊರೊನಾ, ಹಕ್ಕಿ ಜ್ವರದ ಮಧ್ಯೆ ನಾಯಿಗಳಿಗೂ ರೋಗ? ರಾಮನಗರದಲ್ಲಿ 10ಕ್ಕೂ ಹೆಚ್ಚು ಬೀದಿ ನಾಯಿ ಸಾವು!

ಮೊದಲು ರಿಜಿಸ್ಟರ್ ಮಾಡಿಕೊಂಡಿರುವವರನ್ನು ಧೃಢೀಕರಿಸಿಕೊಳ್ಳಲಾಗುವುದು. ಬಳಿಕ ವೈಟಿಂಗ್ ನಲ್ಲಿಟ್ಟು, ವ್ಯಾಕ್ಸಿನ್‌ ನೀಡಲಾಗುವುದು. ಆನಂತರ ಮೂವತ್ತು ನಿಮಿಷಗಳ ಕಾಲ ಅವರ ಮೇಲೆ ನಿಗಾ ಇಡಲಾಗುವುದು. ಇದಾದ 28 ದಿನಗಳ ಬಳಿಕ ಎರಡನೇ ಡೋಸೆಜ್ ನೀಡಲಾಗುವುದು ಎಂದರು. ರಾಮನಗರ ಜಿಲ್ಲೆಯಲ್ಲಿ ವ್ಯಾಕ್ಸಿನ್ ನೀಡಲು ಸಕಲ ಸಿದ್ದತೆಗಳು ನಡೆದಿದೆ.

ಮೊದಲ ಹಂತದಲ್ಲಿ 8415 ಮಂದಿ ವಾರಿಯರ್ಸ್‌ಗೆ ಲಸಿಕೆ ಹಾಕಲು 87 ಬೂತ್‌ಗಳನ್ನು‌ ತೆರೆಯಲಾಗಿದೆ. ಮುಂದಿನ ದಿನಗಳಲ್ಲಿ 395 ಬೂತ್ ಗಳನ್ನು ತೆರೆಯಲಾಗುವುದು. ಈ ವ್ಯಾಕ್ಸಿನ್ ಅನ್ನು 2 ಡಿಗ್ರಿ ಸೆಲ್ಸಿಯಸ್ ನಲ್ಲಿ ಶೇಖರಿಸಿಡಲಾಗುವುದು ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ